• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಮಾನ್ ಬಂಟರ ಸುಮಧುರ ಸಮ್ಮಿಲನ 2011

By Prasad
|

ಒಮಾನ್ ನಲ್ಲಿ ನೆಲೆಸಿರುವ ಬಂಟರ 24ನೇ ಸಮ್ಮಿಲನ, ರಾಮೀ ಡ್ರೀಮ್ ರಿಸಾರ್ಟ್ ನಲ್ಲಿ ನವೆಂಬರ್ 25ರಂದು ಶುಕ್ರವಾರ ಸಕಲ ಸಂಭ್ರಮಗಳೊಂದಿಗೆ ನಡೆಯಿತು. ವೇದಿಕೆಯನ್ನು ಆಕರ್ಷಕವಾಗಿ ಬಂಟ ಶೈಲಿಯಲ್ಲಿ ವಿನ್ಯಾಸ ಗೊಳಿಸಲಾಗಿತ್ತು, ಸಭಾ೦ಗಣವು ನೂರಾರು ಸದಸ್ಯರುಗಳಿ೦ದ ತು೦ಬಿ ತುಳುಕುತ್ತಿತ್ತು.

ಮಂಗಳೂರಿನಿಂದ ತರಿಸಿದ ಸುಗಂಧಭರಿತ ಮಲ್ಲಿಗೆ, ಅಡಿಕೆ, ಪಿಂಗಾರ, ಪುಷ್ಪಮಾಲೆ, ಎಳನೀರು, ಬಾಳೆಗಿಡ, ತಳಿರು ತೋರಣಗಳಿಂದ ಮಹಾದ್ವಾರ ಅಲಂಕೃತವಾಗಿತ್ತು. ಹೊರಾಂಗಣದಲ್ಲಿ ಕುಡಿಯಲು ತಂಪಾದ ಎಳನೀರು, ಒಳಾಂಗಣದಲ್ಲಿ ಒಮಾನ್ ಬಂಟರ ಲಾಂಛನವಾದ ಕಳಸ ತುಂಬಿದ ಧಾನ್ಯ, ವೀಳ್ಯ, ದೀಪ, ಸೇವಂತಿಗೆ ಹೂವು, ಅರಿಶಿಣ ಕುಂಕುಮ, ಮುಡಿಯಲು ಗಮಗಮಿಸುವ ಮಲ್ಲಿಗೆ ಹೂವು ಅತಿಥಿಗಳನ್ನು ಸ್ವಾಗತಿಸುತಿದ್ದವು.

ಸಂಘಟಕರಾದ ಸರೋಜಾ ಶಶಿಧರ್ ಶೆಟ್ಟಿ ಮಲ್ಲಾರ್, ಸುಧೀರ ದಿವಾಕರ್ ಶೆಟ್ಟಿ ಮಲ್ಲಾರ್, ಪ್ರತಿಭಾ ರಮೇಶ್ ಶೆಟ್ಟಿ ಮಂಗಳೂರು, ರೂಪ ರತ್ನಾಕರ್ ಎನ್ ಶೆಟ್ಟಿ ಬಂಟಕಲ್, ವಾಣಿಶ್ರೀ ನಾಗೇಶ್ ಶೆಟ್ಟಿ ಕಿನ್ನಿಗೋಳಿಯವರು ಜ್ಯೋತಿ ಬೆಳಗುವುದರೊಂದಿಗೆ ಕಾರ್ಯಕ್ರಮದ ಉದ್ಘಾಟನೆ ನಡೆಯಿತು. ರಮೇಶ್ ಶೆಟ್ಟಿ ಮಂಗಳೂರು ಕಾರ್ಯಕ್ರಮ ನಿರೂಪಿಸಿದರು. ಶಶಿಧರ್ ಶೆಟ್ಟಿ ಮಲ್ಲಾರ್ನವರು ಬಂಟರ ಸಮ್ಮಿಲನಕ್ಕೆ ಆಗಮಿಸಿದ ಬಾಂಧವರನ್ನು ಸ್ವಾಗತಿಸಿದರು.

ಈ ಬಾರಿಯ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ವೇದಿಕೆಯ ಮೇಲೆ ಬರಮಾಡಿಕೊಂಡು ಅಭಿನಂದಿಸಲಾಯಿತು. ಮುಂದಿನ ವರ್ಷದ ಬಂಟರ ರಜತ ಮಹೋತ್ಸವದ ಜವಬ್ಧಾರಿಯನ್ನು ವಹಿಸಿಕೊಳ್ಳುವ ಕಾರ್ಯಕಾರಿ ಸಮಿತಿಯನ್ನು ವೇದಿಕೆಯ ಮೇಲೆ ಬರಮಾಡಿಕೊಂಡು ಸಭೆಗೆ ಪರಿಚಯಿಸಲಾಯಿತು. ಸಂಪ್ರದಾಯದಂತೆ ಹಿರಿಯ ಅತಿಥಿಗಳನ್ನು ಗೌರವಿಸಿಸಲಾಯಿತು. ತನು, ಮನ, ಧನಗಳಿಂದ ಪ್ರೋತ್ಸಾಹಿಸಿದ ಪ್ರಾಯೋಜಕರಿಗೆ ಕೃತಜ್ಞತೆಯನ್ನು ಅರ್ಪಿಸಲಾಯಿತು.

ಮನರ೦ಜನಾ ಕಾರ್ಯಕ್ರಮ : ಮಾಸ್ಟರ್ ರಿಶಬ್ ಶೆಟ್ಟಿಯ ಪಿಯಾನೋ, ಮಾಸ್ಟರ್ ಜಾನವ್ ಶೆಟ್ಟಿ, ಧನರಾಜ್ ಮತ್ತು ತಂಡದವರ ಹುಲಿವೇಷ, ಸುರೇಂದ್ರ ಶೆಟ್ಟಿ ಮತ್ತು ತಂಡದವರ ಅಧುನಿಕ ಭೂತ ದರ್ಶನ, ಕುಮಾರಿ ರಾಧಾ ಸುರೇಶ ಶೆಟ್ಟಿ ನೃತ್ಯ, ಯೋಗಿಶ್ ಶೆಟ್ಟಿಯವರ ಏಕಪಾತ್ರಾಭಿನಯ ಮನಸೂರೆಗೊಂಡವು. ಮಾಸ್ಟರ್ ಹವಿಶ್ ಶೆಟ್ಟಿಯ ಅಣ್ಣಾ ಹಜಾರೆ, ಮಾಸ್ಟರ್ ಸಾಯಿ ಸ್ವರೂಪ್ ಮತ್ತು ಮಾಸ್ಟರ್ ಧನ್ವಿತ್ ಮೂಕಾಭಿನಯ, ಜಯಪ್ರಕಾಶ್ ಮತ್ತು ಮಾಸ್ಟರ್ ತುಷಾರ್ ವಿನೂತನ ಪ್ರಹಸನಗಳು ಹಾಗೂ ವಿಜಯಶ್ರೀ ರೈ, ಸಂತೋಷ್ ಶೆಟ್ಟಿ, ಕಿಶನ್ ಶೆಟ್ಟಿ, ಕಿಶೋರ್ ಶೆಟ್ಟಿ, ಮಾಸ್ಟರ್ ಧನುಶ್, ಕುಮಾರಿ ಭಕ್ತಿ, ಕುಮಾರಿ ಸ್ಪರ್ಶರವರ ಹಾಡುಗಳು ಪ್ರತಿಭೆಯನ್ನು ಪರಿಚಯಿಸುವಲ್ಲಿ ಸಫಲವಾದವು.

ಬಂಟ ಶೈಲಿಯ ಭೂರಿ ಭೋಜನ ಸವಿದು ಅಸೀನರಾಗುತಿದ್ದಂತೆ ಅಂತಾಕ್ಷರಿ ಮತ್ತು ರಸಸಂಜೆ ಕಾರ್ಯಕ್ರಮ ಜರುಗಿದವು. ಸರೋಜಾ ಶೆಟ್ಟಿ, ವಿನೋದ್ ಟೀ ಶೆಟ್ಟಿ, ರಮೇಶ್ ಶೆಟ್ಟಿ ಮಂಗಳೂರ್, ರತ್ನಾಕರ್ ಎನ್ ಶೆಟ್ಟಿಯವರು ತೀರ್ಪುಗಾರರಾಗಿ, ಕಿರಣ್ ರೈ ಮತ್ತು ಸಂಗೀತ ರೈಯವರು ರಸಸಂಜೆಯನ್ನು ನಿರ್ವಹಿಸಿದ್ದರು. ಹಗ್ಗ ಜಗ್ಗಾಟ, ತೆಂಗಿನ ಕಾಯಿ ಅಂಕ ಸ್ಪರ್ಧೆಗಳನ್ನು ರತ್ನಾಕರ್ ಎನ್ ಶೆಟ್ಟಿ ಮತ್ತು ರಮೇಶ್ ಶೆಟ್ಟಿ ಮಂಗಳೂರ್ ನಡೆಸಿದರು. ಮಕ್ಕಳಿಗಾಗಿ ತುಳುನಾಡಿನ ಸಂಸ್ಕೃತಿಯ ಬಗ್ಗೆ ಸ್ಮರಣ ಸ್ಪರ್ಧೆ, ಬಂಟ್ಸ್ ಪ್ರಶ್ನೋತ್ತರ ಇತ್ಯಾದಿ ಕಾರ್ಯಕ್ರಮವನ್ನು ವಾಣಿಶ್ರೀ ನಾಗೇಶ್ ಶೆಟ್ಟಿ ಕಿನ್ನಿಗೋಳಿ ನಿರೂಪಿಸಿದರು.

ಸರೋಜಾ ಶಶಿಧರ್ ಶೆಟ್ಟಿ ಮಲ್ಲಾರ್, ಸುಧೀರ ದಿವಾಕರ್ ಶೆಟ್ಟಿ ಮಲ್ಲಾರ್ ವಿಜೇತರಿಗೆ ಬಹುಮಾನ ವಿತರಿಸಿದರು. ದಿವಾಕರ್ ಶೆಟ್ಟಿ ಮಲ್ಲಾರ್ ನವೆಂಬರ್ 18ರಂದು ರಕ್ತದಾನ ಮಾಡಿದ್ದ ಸದಸ್ಯರನ್ನು ಅಭಿನಂದಿಸಿ ಪ್ರಮಾಣಪತ್ರ ನೀಡಿ ಸನ್ಮಾನಿಸಿದರು.

ರೊಟ್ಟಿ ಜೊತೆ ಕೋಳಿ ಸಾರು : ಸಾಯಂಕಾಲ ಕಾಫಿ, ಚಹಾ ಚಪ್ಪರಿಸಿ, ಬೋಂಡ ಪಕೋಡ, ರಸಧೋಲಿ ಬಾಳೆ ಹಣ್ಣು ನೀಡಲಾಗಿತ್ತು. ವಂದಾನಾರ್ಪಣೆಯಾದ ನಂತರ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ರಾತ್ರಿಯ ಮಳೆಯ ಅಬ್ಬರಕ್ಕೆ ಬಿಸಿ ಬಿಸಿ ಗಂಜಿ ಮತ್ತು ಚಟ್ನಿ, ತಾಜಾ ಮಾವಿನ ಉಪ್ಪಿನಕಾಯಿ, ಎಟ್ಟಿ ಬಜ್ಜಿ ಮತ್ತು ವಿಶೇಷವಾಗಿ ಊರಿನಿಂದ ತರಿಸಿದ್ದ ರೊಟ್ಟಿಯ ಜತೆ ರುಚಿಯಾದ ಕೋಳಿ ಸಾರು ಜಮಾಯಿಸುವುದರೊಂದಿಗೆ ಕಾರ್ಯಕ್ರಮಕ್ಕೆ ತೆರೆಬಿದ್ದಿತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bunts community in Oman celebrated 24th get together on November 25 in a grand fashion. Various cultural activities by children, felicitation to senior guests and sumptuous food were memorable.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more