• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಿಂಗಾರ ಪುರಸ್ಕಾರ ಮತ್ತು ಪ್ರಶಸ್ತಿ ವಿತರಣೆ

By * ವೆಂಕಟ್, ಸಿಂಗಪುರ
|
ಸಿಂಗಾರ ಪುರಸ್ಕಾರ : ಕನ್ನಡ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ರಾಜೇಶ್‌ ಹೆಗ್ಡೆ ಅವರು ಸಿಂಗಾರ ಪುರಸ್ಕಾರ ವಿಜೇತರ ಸಾಧನೆಗಳ ಬಗ್ಗೆ ಸಂಕ್ಷಿಪ್ತ ವಿವರಣೆ ನೀಡಿದರು. ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮತ್ತು ವುಡ್‌ಲ್ಯಾಂಡ್ಸ್ ಕಮ್ಯುನಿಟಿ ಕ್ಲಬ್ ನ IAECಯ ಅಧ್ಯಕ್ಷರಾದ ಅಜೇಯನ್‌ರವರ ಮೂಲಕ ಪುರಸ್ಕಾರವನ್ನು ವಿತರಿಸಲಾಯಿತು. 2009 ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗೆ ಚಿ. ರವಿಪ್ರಸಾದ್ ಕುಮಾರ್, 2010ರ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗೆ ಚಿ. ಗೌತಮ್ ನಾಗರಾಜು ಮತ್ತು 2011ರ ಸಾಲಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿನ ಸಾಧನೆಗೆ ಚಿ.ಗೌರವ್ ಕಾನ್‌ಕಾನ‌ಹಳ್ಳಿ ಕ್ರಮವಾಗಿ ಪ್ರಶಸ್ತಿಯನ್ನು ಸ್ವೀಕರಿಸಿದರು.

ಸಿಂಗಾರ ಆಜೀವ ಪುರಸ್ಕಾರ : ಶೈಕ್ಷಣಿಕ, ಸಾಮಾಜಿಕ ಮತ್ತು ಕಲೆಗಳಲ್ಲಿ ತೊಡಿಗಿಸಿಕೊಂಡು ಅತ್ಯುನ್ನತ ಸಾಧನೆಯನ್ನು ಗೈಯ್ದ ಸಿಂಗಪುರ ಕನ್ನಡಿಗರಿಗೆ ನೀಡುವ ಈ ಪುರಸ್ಕಾರ, ಕನ್ನಡ ಸಂಘ(ಸಿಂಗಪುರ)ದ ಹೆಮ್ಮೆಯ ಪುರಸ್ಕಾರ. ಕನ್ನಡ ಸಂಘದ ಉಪಾಧ್ಯಕ್ಷರಾದ ವಿಜಯ ರಂಗ ಪ್ರಸಾದ್ ಅವರು ಶೈಕ್ಷಣಿಕ ಕ್ಷೇತ್ರದಲ್ಲಿನ ಅಮೋಘ ಸಾಧನೆಗೈಯ್ದ ಡಾ. ಮೋಹನ್ ಕಾನ್‌ಕಾನಹಳ್ಳಿ ಅವರ ಸಂಕ್ಷಿಪ್ತ ವಿವರಣೆ ತಿಳಿಸಿದರು. ಕನ್ನಡ ಸಂಘದ ಕಾರ್ಯದರ್ಶಿ ವೆಂಕಟ್ ಅವರು 2011ರ ಸಾಲಿನ ಸಾಮಾಜಿಕ ಕ್ಷೇತ್ರದಲ್ಲಿನ ಸಾಧನೆಗಾಗಿ ಸಿಂಗಾರ ಆಜೀವ ಪುರಸ್ಕಾರವನ್ನು ಪಡೆದ ಡಾ. ಆನಂದ ಎಲ್ ಅಕ್ಕಿಹೆಬ್ಬಾಳ್ ಅವರ ಸಂಕ್ಷಿಪ್ತ ವಿವರಣೆಯನ್ನು ತಿಳಿಸಿದರು. ಡಾ.ವಿಜಯ್ ಕುಮಾರ್ ಅವರು ಡಾ.ಮೋಹನ್ ಕಾನ್‌ಕಾನ‌ಹಳ್ಳಿ ಮತ್ತು ಡಾ. ಆನಂದ.ಎಲ್.ಅಕ್ಕಿಹೆಬ್ಬಾಳ್ ಅವರಿಗೆ ಕನ್ನಡ ಸಂಘದ ಪರವಾಗಿ ಪದಕ ಮತ್ತು ಕಾಣಿಕೆಗಳನ್ನು ನೀಡಿ ಗೌರವಿಸಿದರು

ಬೌಲಿಂಗ್ ಸ್ಪರ್ಧೆಯ ಬಹುಮಾನ ವಿತರಣೆ : ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರಾದ ಜಯಶಂಕರ್ ಗೌಡ ನಿರ್ವಹಣೆಯಲ್ಲಿ ಕನ್ನಡ ಸಂಘ ಏರ್ಪಡಿಸಿದ ಬೌಲಿಂಗ್ ಸ್ಪರ್ಧೆಯಲ್ಲಿ ಮೊದಲ ಮತ್ತು ಎರಡನೆಯ ಸ್ಥಾನದ ವಿಜೇತರಿಗೆ ನೀಡಲಾಯಿತು. ಕನ್ನಡ ಸಂಘದ ಮಾಜಿ ಉಪಾಧ್ಯಕ್ಷರಾದ ಜಗದೀಶ್ ಸಿ ವಿ ಅವರು ಪ್ರಶಸ್ತಿಪತ್ರ ಮತ್ತು ಬಹುಮಾನ ವಿತರಿಸಿದರು. ಮಕ್ಕಳ ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಚಿತ್ರದ ಸಾರಾಂಶಗಳನ್ನು ಓದಿದ ಮಕ್ಕಳಿಗೆ ರಾಜೇಶ್ವರಿಯವರ ನಿರ್ವಹಣೆಯಲ್ಲಿ, ಪ್ರಮಾಣಪತ್ರ ಸಂಘದ ಅಧ್ಯಕ್ಷರಾದ ಡಾ.ವಿಜಯ್ ಕುಮಾರ್ ಮತ್ತು ಜಗದೀಶ್ ಸಿ.ವಿ ಅವರು ನೀಡಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Singapore Kannada Sangha celebrated Kannada Rajyotsava and Deepotsava on November 12. Kannada film director and producer Rajendra Singh Babu was the chief guest. Oean Kids from Mangalore enthralled the Singara Kannadigas.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more