ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಕನ್ನಡ ಹಳೆ ಚಿತ್ರಗೀತೆಗಳು ಎಷ್ಟೋ ಚೆಂದ

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

ಮಧ್ಯೆ ಚಿಕ್ಕ ವಿರಾಮದ ನಂತರ ಕನ್ನಡ ಕೂಟದ ಅಜೀವ ಸದಸ್ಯರಿಂದ ಪುಟಾಣಿಗಳಿಗೆ ಪ್ರಶಸ್ತಿ ಪ್ರಧಾನ ಸಮಾರಂಭ. ಕಲಾಶ್ರೀ ಪ್ರೊ. ಎಸ್.ಮಲ್ಲಣ್ಣನವರು ನಡೆಸಿಕೊಟ್ಟ ಕನ್ನಡ ಸುಗಮ ಸಂಗೀತ ಕಾರ್ಯಕ್ರಮ ಕರ್ಣಾನಂದವಾಗಿತ್ತು. ಅವರು ಹಾಡಿದ ಅನೇಕ ಭಾವಗೀತೆಗಳು, ಹಳೇ ಚಲನಚಿತ್ರಗೀತೆಗಳು, ಜಿ.ಪಿ.ರಾಜರತ್ನಂ ರಚಿತ ಪಿ.ಕಾಳಿಂಗರಾವ್ ಹಾಡಿದ "ರತ್ನನ ಪದಗಳು" ಎಲ್ಲರನ್ನು ಭಾವುಕರನ್ನಾಗಿ ಮಾಡಿದವು.

"ಮಾಗಧ" ಎಂದೇ ಹೆಸರಾಗಿದ್ದ ಜರಾಸಂಧನನ್ನು ಸತ್ಯಭಾಮೆಯಿಂದ ಪ್ರೇರಿತನಾಗಿ, ಶ್ರೀಕೃಷ್ಣನು ಪಾಂಡವರ ಸಹಾಯದಿಂದ ಹೇಗೆ ಕೊಲ್ಲುವ ಉಪಾಯ ಹೂಡುತ್ತಾನೆ? ಎಂಬ ಈ ಕಥಾ ಪ್ರಸಂಗವನ್ನು ಮಂದಾರ ಕನ್ನಡ ಕೂಟ (NEKK) ತಂಡದವರು ನಡೆಸಿಕೊಟ್ಟ ಕರ್ನಾಟಕದ ಪ್ರಸಿದ್ದ ಕರಾವಳಿಯ ಶ್ರೀಮಂತ ಕಲೆಯಾದ ಯಕ್ಷಗಾನ ಕಾರ್ಯಕ್ರಮ ಎಲ್ಲರ ಕಣ್ಮನ ಸೆಳೆಯಿತು. ಕರ್ನಾಟಕದಲ್ಲೇ ಅಪರೂಪವಾಗುತ್ತಿರುವ ಈ ಶ್ರೀಮಂತ ಕಲೆ ಯಕ್ಷಗಾನವನ್ನು ಉಳಿಸಲು-ಬೆಳೆಸಲು ಪ್ರಯತ್ನಿಸುತ್ತಿರುವ ಈ ತಂಡದ ಶ್ರಮ ನಿಜಕ್ಕೂ ಶ್ಲಾಘನೀಯ. [ಗ್ಯಾಲರಿ ವೀಕ್ಷಿಸಿ]

ಹೀಗೆ ಸರಿಸುಮಾರು ರಾತ್ರಿ 8ರತನಕ ನಡೆದ ಈ ದೀಪಾವಳಿ ಕಾರ್ಯಕ್ರಮ ಕೊನೆಗೊಂಡಿದ್ದು ಕೃಷ್ಣಮೂರ್ತಿಯವರ ವಂದನಾರ್ಪಣೆಯೊಂದಿಗೆ. ಕೊನೆಗೆ ಭರ್ಜರಿ ಊಟ ಮಾಡಿ ಕಾರಲ್ಲಿ ಕುಳಿತಾಗ ಮತ್ತೆ ರೇಡಿಯೋದಲ್ಲಿ ಕೇಳಿ ಬಂದ ಅಬ್ಬರದ ಪಾಶ್ಚಾತ್ಯ RAP ಮ್ಯೂಸಿಕ್ ಅನ್ನು ಬಂದ್ ಮಾಡಿ ಅಲ್ಲೇ ಇದ್ದ ಹಳೇ ಕನ್ನಡ ಗೀತೆಗಳ ಡಿಸ್ಕ್ ಹಾಕ್ಕೊಂಡು ಇಂಪಾಗಿ ಬರುತ್ತಿದ್ದ ಡಾ. ರಾಜ್ ಹಾಡಿದ ಕುವೆಂಪು ರಚಿತ "ಕನ್ನಡವೇ ಸತ್ಯ ಕನ್ನಡವೇ ನಿತ್ಯ" ಗುನುಗುತ್ತ ಮನೆಕಡೆಗೆ ಹೊರಟಾಗ ರಾತ್ರಿ ಒಂಬತ್ತಾಗಿತ್ತು.

English summary
Hoysala Kannada Koota in Connecticut, USA celebrated Deepavali 2011 in a grand fashion at Wethersfield middle school on November 12. Report by Nagaraja Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X