ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಮುದಗೊಳಿಸಿದ ಸಾಂಸ್ಕೃತಿಕ ಕಾರ್ಯಕ್ರಮಗಳು

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

ಲಘು ಉಪಹಾರವಾದ ಬಳಿಕ ಸರಿಯಾಗಿ ಮಧ್ಯಾನ್ಹ 1 ಗಂಟೆಗೆ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಯಶವಂತ್ ಗಡ್ಡಿಯವರ ನೇತೃತ್ವದಲ್ಲಿ ಕನ್ನಡದ ನಾಡಗೀತೆ ಶುರುವಾದ ತಕ್ಷಣ ಎಲ್ಲ ಹಿರಿಯರು, ಕಿರಿಯರು ಎದ್ದು ನಿಂತು ತಾವೂ ಧ್ವನಿಗೂಡಿಸಿದ್ದು ತುಂಬಾ ವಿಶೇಷವಾಗಿತ್ತು.

ಹೊಯ್ಸಳ ಕನ್ನಡ ಕೂಟದ ಅಧ್ಯಕ್ಷರಾದ ವೇಣು ಗುದ್ದೇರರಿಂದ ಸ್ವಾಗತ ಭಾಷಣವಾದ ಮೇಲೆ ಚಂದ್ರಭಟ್ ರವರ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿ ನೋಡುಗರನ್ನು ಮಂತ್ರಮುಗ್ಧರನ್ನಾಗಿಸಿತು.

ಮುದ್ದಾದ ಮಕ್ಕಳು ಅಣ್ಣಾ ಹಜಾರೆ, ಶಕುಂತಲೆ, ಘಟೋದ್ಘಜ, ಶ್ರೀಕೃಷ್ಣ, ಶ್ರೀರಾಮ, ಅಪ್ಪಟ ಭಾರತ ನಾರಿ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಫೋಷಕರ ಕಂಗಳಲ್ಲಿ ಆನಂದಭಾಷ್ಪ ಬರಿಸಿದ್ದರೆ, ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲೂ ಚಿಣ್ಣರ-ಕಿನ್ನರ ಲೋಕಕ್ಕೆ ಕರೆದೊಯ್ದಂತಾಗಿತ್ತು.

ಸಾಂಸ್ಕೃತಿಕ ಕಾರ್ಯಕ್ರಮಗಳು

* ಪ್ರಿಯಾ-ಸರಿತಾ-ಸ್ವರ್ಣಾರ ಸಂಯೋಜನೆಯಲ್ಲಿ ಇಪ್ಪತ್ತು ಪುಟಾಣಿಗಳು "ಕನ್ನಡ ಮಕ್ಕಳ ಹಾಡುಗಳಿಗೆ" ಹೆಜ್ಜೆ ಹಾಕಿ ನರ್ತಿಸಿದವು.
* ನಮ್ಮ ಭೂಮಿತಾಯಿ - ಜನಪದ ನೃತ್ಯ - ರೂಪ ಕುಮಾರ್ ನಿರ್ದೇಶನ.
* ದಿ| ವಿಷ್ಣುವರ್ಧನ್ ನೆನಪಿಗೋಸ್ಕರ ಆಪ್ತರಕ್ಷಕ ಸಿನೆಮಾದ "ಸಿಂಹ-ಸಿಂಹ" ಹಾಡಿಗೆ ಹೆಜ್ಜೆ ಹಾಕಿದ್ದು ಅಮೆರಿಕನ್ನಡ ಶಾಲೆಯ ಹುಡುಗರು - ಅನಿತಾರವರ ನಿರ್ದೇಶನ.
* ರಾಧೆಯ ಕೃಷ್ಣ ನೃತ್ಯ - ಪ್ರಿಯಾ ನಿರ್ದೇಶನ.
* ಶಾಂತಿ ಮಂತ್ರ - ಶಾಂತಿ ಸಮೃದ್ದಿಗಾಗಿ ಪ್ರಾರ್ಥನೆ - ಇಂದುಕಲಾ ತಂಡದಿಂದ.
* ಮಾಯದಂತ ಮಳೆ ಜನಪದ ನೃತ್ಯ - ಸ್ನೇಹ ಸೋಸಲೆ ನಿರ್ದೇಶನ.
* ಶಂಭೋ ಶಿವ ಸಿನೆಮಾ ನೃತ್ಯ - ಪ್ರಿಯಾ ನಿರ್ದೇಶನ.
* ಮಧುರಾಷ್ಟಕಂ - ಲಘು ಶಾಸ್ತ್ರೀಯ ನೃತ್ಯ - ರಶ್ಮಿ ಸಂಯೋಜನೆ ಹಾಗೂ ಉರ್ವಿ ಪಾಠಕ್ ನೃತ್ಯ ನಿರ್ದೇಶನ.
* ವಿಚಿತ್ರಮಂಜರಿ - ದಿನೇಶ್ ಹಾಗೂ ಸಂಗಡಿಗರು.
* ಹೊಯ್ಸಳ ಸಾಮ್ರಾಜ್ಯದ ಬಗ್ಗೆ ಒಂದು ನೋಟ ನಿರೂಪಣೆ - ಅಂಜು ಸೋಮನಾಥ್ ರವರಿಂದ.
* ಸೊಗಸಾಗಿ ಮೂಡಿಬಂದ "ಭಕ್ತ ಪ್ರಹ್ಲಾದ" ನಾಟಕ - ರಘು ಸೋಸಲೆ ಮತ್ತು ಸಂಗಡಿಗರಿಂದ
* ತೆರೆಗಳ ಸಂಗಮ - ಗಿರೀಶ್ ನೀಲಕಂಠ ಮಿಮಿಕ್ರಿ
* ನಾನ್ ಸ್ಟಾಪ್ ಕನ್ನಡ ಸಾಹಿತ್ಯ ಝಲಕ್ - ಅಮೆರಿಕಾದಲ್ಲಿ ಯಮರಾಜ ನಾಟಕದ ಖ್ಯಾತಿಯ ಮಲ್ಲಿ ಸಣ್ಣಪ್ಪನವರಿಂದ. [ನಮ್ಮ ಹಳೆ ಕನ್ನಡ ಗೀತೆಗಳೇ ಚೆಂದ]

English summary
Hoysala Kannada Koota in Connecticut, USA celebrated Deepavali 2011 in a grand fashion at Wethersfield middle school on November 12. Report by Nagaraja Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X