ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದ ಕನ್ನೆಕ್ಟಿಕಟ್ ನಲ್ಲಿ ದೀಪಾವಳಿ 2011 ಸಡಗರ

By * ನಾಗರಾಜ್ ಎಂ., ಕನೆಕ್ಟಿಕಟ್
|
Google Oneindia Kannada News

ಗಾಳಿಯ ಬಿರುಸಿಗೆ ರಸ್ತೆಯಲ್ಲೆಲ್ಲ ಹಾರಿಬಿದ್ದ ಬಣ್ಣ ಬಣ್ಣದ (ಫಾಲ್ ಕಲರ್) ಮರಗಿಡಗಳ ಎಲೆಗಳು, ಆಗಲೇ ಚಳಿರಾಯನ ಆಗಮನದ ಮುನ್ಸೂಚನೆಯಂತೆ ಜೋರಾಗಿ ಬೀಸುತ್ತಿರುವ ಚಳಿಗಾಳಿ. ಅಬ್ಬ ಮತ್ತೆ ಬಂತಲ್ಲಪ್ಪ ಚಳಿಗಾಲ ಎನ್ನುತ್ತಾ ಕೋಟು ಏರಿಸಿಕೊಂಡು ಸಂಸಾರದೊಂದಿಗೆ ಕಾರ್ ನಲ್ಲಿ ಹೋಗ್ತಾ ರೇಡಿಯೋ ಬಟನ್ ಒತ್ತಿದಾಗ ಕೇಳಿ ಬರುತ್ತಿರೋ ಅಬ್ಬರದ PITBULL ನ ವೆಸ್ಟೆರ್ನ್ RAP ಮ್ಯೂಸಿಕ್. ಅದಕ್ಕೆ ಸರಿಯಾಗಿ ಹಿಂದೆ ಕೂತು ತಲೆ ತೂಗುತ್ತಿರೋ ಮಗರಾಯ.

ಅಂತೂ ಇಂತೂ ಕಾರ್ ಪಾರ್ಕ್ ಮಾಡಿ ಒಳಗೆ ಹೋದ ತಕ್ಷಣವೇ... ಹಾಹಾ.. ಸುಮಧುರವಾಗಿ ಕೇಳಿ ಬರುತ್ತಿರುವ ಕನ್ನಡದ ಸುಗಮ ಸಂಗೀತದ ಅಲೆಗಳು. ನಂತರ ಕೇಳಿಬಂದ ಭೀಮಾರ್ಜುನರ ಗಡಸು ಧ್ವನಿಯ ವೀರತೆಯ ಸಂವಾದ. ಸಾವನ್ನೇ ಗೆದ್ದೆ ಎಂದು ಅಟ್ಟಹಾಸದಿಂದ ಅಬ್ಬರಿಸುತ್ತಿರುವ ಹಿರಣ್ಯಕಶಿಪು. ಓಹ್.. ಇವೆಲ್ಲ ಕೇಳಿ ಎಲ್ಲೋ ಬೆಂಗಳೂರಿನಲ್ಲಿರುವ ಪುಟ್ಟಣ್ಣ ಕಲಾ ಮಂದಿರದೊಳಗೆ ಬಂದಿರೋ ತರಹ ಅನ್ನಿಸುವಂತೆ ಮಾಡಿದ್ದು ಈ ದೂರದ ಅಮೆರಿಕಾದಲ್ಲಿನ ಕನ್ನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ವತಿಯಿಂದ ನಡೆದ ದೀಪಾವಳಿ 2011 ಕಾರ್ಯಕ್ರಮ. [ಗ್ಯಾಲರಿ ವೀಕ್ಷಿಸಿ]

ನವೆಂಬರ್ 12 ಶನಿವಾರ, ಕನ್ನೆಕ್ಟಿಕಟ್ನ Wethersfield middle ಸ್ಕೂಲ್ ಆಡಿಟೋರಿಯಂನಲ್ಲಿ ಹೊಸದಾಗಿ ಆಯ್ಕೆಯಾದ HKK ಕಮಿಟಿ ಸದಸ್ಯರ ನೇತೃತ್ವದಲ್ಲಿ ಹೊಯ್ಸಳ ಕನ್ನಡ ಕೂಟದ 5ನೇ ವಾರ್ಷಿಕೋತ್ಸವ ಹಾಗೂ ದೀಪಾವಳಿ-ಕನ್ನಡ ರಾಜ್ಯೋತ್ಸವದ ಆಚರಣೆ ರಶ್ಮಿ, ವಿಶ್ವನಾಥಗೌಡ, ಸ್ನೇಹ, ರಘು ಸೋಸಲೆರವರ ಸುಂದರ ನಿರೂಪಣೆಯೊಂದಿಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹರ್ಷ ಅಗಡಿ (CEO, Friendly's Ice cream Corp.), ಕಲಾಶ್ರೀ ಪ್ರೊ. ಎಸ್.ಮಲ್ಲಣ್ಣ (ಮಾಜಿ ಪ್ರಾಂಶುಪಾಲ, ಜೆಎಸ್ಎಸ್ ಕಾಲೇಜು, ಮೈಸೂರು) ನವರ ಸಮಕ್ಷಮದಲ್ಲಿ ಯಶಸ್ವಿಯಾಗಿ ನಡೆಯಿತು. [ಮುಂದೆ : ಸಾಂಸ್ಕೃತಿಕ ಕಾರ್ಯಕ್ರಮಗಳು]

English summary
Hoysala Kannada Koota in Connecticut, USA celebrated Deepavali 2011 in a grand fashion at Wethersfield middle school on November 12. Report by Nagaraja Maheswarappa.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X