ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೋಕಿಯೋದಲ್ಲಿ ನ.19ರಂದು ಹಾರಲಿದೆ ಕನ್ನಡ ಬಾವುಟ

By Prasad
|
Google Oneindia Kannada News

Rajyotsava by Tokyo Kannada Balaga
ಕಾರ್ಯ ನಿಮಿತ್ತ ಅಥವಾ ಉನ್ನತ ವಿದ್ಯಾಭ್ಯಾಸ ನಡೆಸುವ ಕಾರಣದಿಂದ ಕರ್ನಾಟಕದ ಕನ್ನಡಿಗರು ವಿಶ್ವದ ನಾನಾ ಭಾಗಗಳಲ್ಲಿ ಹರಡಿಕೊಂಡಿದ್ದಾರೆ. ಸಮಯ ಸಿಕ್ಕಾಗಲೆಲ್ಲ ವಾರಾಂತ್ಯಗಳಲ್ಲಿ ಕನ್ನಡಿಗರೆಲ್ಲ ಒಟ್ಟಿಗೆ ಸೇರಿ ಕನ್ನಡ ನುಡಿಮುತ್ತುಗಳನ್ನು ಉದುರಿಸುತ್ತ ವೈವಿಧ್ಯಮಯ ಕನ್ನಡ ಕಾರ್ಯಕ್ರಮಗಳನ್ನು ಆಚರಿಸುವುದು ವಾಡಿಕೆ.

ಕನ್ನಡ ರಾಜ್ಯೋತ್ಸವ ಕೂಡ ವಿಶ್ವದ ಎಲ್ಲೆಡೆಗಳಲ್ಲಿ ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಆಸ್ಟ್ರೇಲಿಯಾದ ಅಡಿಲೇಡ್ ಕನ್ನಡ ಕೂಟ, ಅಮೆರಿಕ ಪೂರ್ವ ಕರಾವಳಿಯ ತ್ರಿವೇಣಿ ಕನ್ನಡ ಕೂಟ, ಕೊರಿಯ ಕನ್ನಡ ಕೂಟ, ಸಿಂಗಪುರದ ಕನ್ನಡ ಕೂಟ, ಕಾವೇರಿ ಕನ್ನಡ ಸಂಘ ಮುಂತಾದವು ಕನ್ನಡ ರಾಜ್ಯೋತ್ಸವ ಆಚರಿಸಿ ಕನ್ನಡತನವನ್ನು ಮೆರೆದಿದ್ದಾರೆ. ಈಗ ಟೋಕಿಯೋ ಕನ್ನಡ ಬಳಗದ ಸರದಿ.

ಇದೇ ನವೆಂಬರ್ 19, ಭಾನುವಾರದಂದು ಟೋಕಿಯೋ ಕನ್ನಡಿಗರೆಲ್ಲ ಸೇರಿ ಕನ್ನಡ ಬಾವುಟವನ್ನು ಜಪಾನ್ ದೇಶದಲ್ಲಿ ಹಾರಿಸಲಿದ್ದಾರೆ. ಕಾರ್ಯಕ್ರಮ ಮಧ್ಯಾಹ್ನ 1ರಿಂದ ಸಂಜೆ 8ರವರೆಗೆ ನಡೆಯಲಿದೆ. ಮನರಂಜನೆಗಾಗಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೊಡ್ಡವರಿಗೆ 2,500 JPY ಮತ್ತು 5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ 1,000 JPY ಶುಲ್ಕ ನಿಗದಿಪಡಿಸಲಾಗಿದೆ.

ಕಾರ್ಯಕ್ರಮದ ವಿವರ
ದಿನಾಂಕ : ನವೆಂಬರ್ 19, ಭಾನುವಾರ
ಸಮಯ : ಮಧ್ಯಾಹ್ನ 1ರಿಂದ ಸಂಜೆ 8ರವರೆಗೆ
ಸ್ಥಳ : Seishinchou community hall, Seishinchou 1-2-2, Edogwa-ku, Tokyo 134-0087 1 Km from Tozai line Nishi Kasai station.

English summary
Tokyo Kannada Balaga, Japan is celebrating Kannada Rajyotsava on November 19, 2011 at Seishinchou community hall, Seishinchou. Bhuvaneshwari pooje and lots of cultural activities have been organized.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X