ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮರೆಯದ ಅನುಭವ ಕೊಟ್ಟ ಬುಲೆಟ್ ಟ್ರೈನ್ ಪಯಣ

By * ಮತ್ತೂರು ರಘು
|
Google Oneindia Kannada News

Shinkansen : Bullet train in Japan
ಜಪಾನಿನಲ್ಲಿ ಬುಲೆಟ್ ರೈಲು ಬಹಳ ಪ್ರಸಿದ್ದಿ. ಅವನ್ನು ಶಿನ್ ಕಾನ್ ಸೆನ್ ಎಂದು ಕರೆಯುತ್ತಾರೆ. ಅದರಲ್ಲಿ ಪ್ರಯಾಣ ಮಾಡಲು ಮನಸ್ಸು ತವಕಿಸುತ್ತಿತ್ತು. ಪ್ರಯಾಣ ದುಬಾರಿಯೂ ಹೌದು ಹಾಗು ತೀರ ಹತ್ತಿರದ ಸ್ಥಳಗಳಿಗೆ ಬುಲೆಟ್ ಟ್ರೈನುಗಳ ಸಂಪರ್ಕವಿರುದಿಲ್ಲ. ಈ ಕಾರಣಕ್ಕಾಗಿ ಬುಲೆಟ್ ರೈಲಿನಲ್ಲಿ ಪ್ರಯಾಣಿಸಿದಂತಾಗಬೇಕು, ಹತ್ತಿರದ ಪ್ರಯಾಣವೂ ಆಗಬೇಕು(ವೆಚ್ಚ ಕಡಿಮೆ ಮಾಡಲು) ಹಾಗು ಹೋದ ಸ್ಥಳದಲ್ಲಿ ಏನಾದರೂ ನೋಡುವಂತಿರಬೇಕು ಎಂಬ ಉದ್ದೇಶವನ್ನಿಟ್ಟುಕೊಂಡು ಹುಡುಕಿದಾಗ ತೋಚಿದ್ದೇ ಓಡಾವರದ ಕೋಟೆ (Odawara Castle). ನನ್ನ ಆತ್ಮೀಯ ಸಹೋದ್ಯೋಗಿಯ ಸಹಾಯದಿಂದ ಟ್ರೈನುಗಳ ವಿವರ, ಮಾರ್ಗಗಳು ಮುಂತಾದ ಟಿಪ್ಪಣಿಗಳನ್ನು ಬರೆದುಕೊಂಡು ಹೊರಟುನಿಂತೆ.

ನಾನಿದ್ದ ಇಸೋಗೋಯಿಂದ ಹಿಗಾಶಿ-ಕನಗವ, ಅಲ್ಲಿಂದ ಶಿನ್-ಯೋಕೋಹಾಮ ತನಕ ಎಲೆಕ್ಟ್ರಿಕ್ ಟ್ರೈನ್(ಕೆಯಿನ್-ತೊಹೊಕು ನೆಗಿಷಿ ಲೈನ್ ಮತ್ತು ಜೆಆರ್ ಯೋಕೋಹಾಮ ಲೈನ್ )ನಲ್ಲಿ ಹೋಗಿ ಅಲ್ಲಿಂದ ಶಿನ್ ಕಾನ್ ಸೆನ್ ಕೊಡಾಮ 807 ಎಂಬ ಬುಲೆಟ್ ಟ್ರೈನ್ ನಲ್ಲಿ ಓಡಾವರ ತಲುಪಿದೆ.

ಬುಲೆಟ್ ರೈಲಿಗೆ ಇದು ಕಡಿಮೆ ಅಂತರವಾದ್ದರಿಂದ ಸಾಧಾರಣ ವೇಗದಲ್ಲಿ ಚಲಿಸುತ್ತದೆ. ಸರಿಸುಮಾರು 60 ಕಿಲೋಮೀಟರುಗಳಿರುವ ಶಿನ್-ಯೋಕೋಹಾಮದಿಂದ ಓಡಾವರಕ್ಕೆ 14 ನಿಮಿಷಗಳಲ್ಲಿ ತಲುಪಿದೆ! ಪ್ರಯಾಣ ಮಾಡಿದ್ದೆ ಗೊತ್ತಾಗಲಿಲ್ಲ. ಬೇರೆ ರೈಲುಗಳಲ್ಲಿ ಆಗುವ ವೈಬ್ರೆಶನ್ ಬುಲೆಟ್ ಟ್ರೈನಿನಲ್ಲಿ ಇರದ ಕಾರಣ ರೈಲು ಚಲಿಸುತ್ತಿರುವುದೇ ಅನುಭವಕ್ಕೆ ಬಾರದು. ಕಿಟಕಿಯಿಂದ ಹೊರಗೆ ನೋಡಿದಾಗ ಮಾತ್ರ ರೈಲಿನ ವೇಗ ತಿಳಿಯುತ್ತದೆ.

ನಾನು ಓಡಾವರದಲ್ಲಿ ಇಳಿದು ಓಡಾಡುವ ಶಿನ್ ಕಾನ್ ಸೆನ್ ಬುಲೆಟ್ ಟ್ರೈನುಗಳನ್ನು ಕೆಲಕಾಲ ನೋಡಿ ಹೋಗುವ ಎಂದು ಕೂತ ಮರುಕ್ಷಣವೇ ಒಂದು ಟ್ರೇನು ಓಡಾವರದಲ್ಲಿ ನಿಲ್ಲಿಸದೆ ಹೋಯಿತು. ಕೇವಲ 1 ಸೆಕೆಂಡುಗಳಲ್ಲಿ ಟ್ರೇನು ಮಾಯ! ನಾನು ಟ್ರೈನನ್ನು ನೋಡಿದ್ದು ಕನಸಾ ಎಂಬ ಮಟ್ಟಿಗೆ ವೇಗದಲ್ಲಿ ಚಲಿಸಿ ಕಣ್ಮರೆಯಾಯಿತು.

ಓಡಾವರದಲ್ಲಿ ಕೆಲ ಹೊತ್ತು ಹೋಗುವ-ಬರುವ ಬುಲೆಟ್ ಟ್ರೈನುಗಳ ಫೋಟೋಗಳು ಹಾಗು ವಿಡಿಯೋಗಳನ್ನ ಫೇಸ್ ಬುಕ್ಕಿಗಾಗಿ ತೆಗೆದುಕೊಂಡು ಅಲ್ಲಿಂದ ಓಡಾವರದಕೋಟೆಯನ್ನ (Odawara Castle) ಹುಡುಕಿಕೊಂಡು ಹೊರಟೆ. ಒಟ್ಟಿನಲ್ಲಿ ಶಿನ್ ಕಾನ್ ಸೆನ್ ಟ್ರೈನಿನಲ್ಲಿ ಪ್ರಯಾಣ ಮಾಡಬೇಕೆಂಬ ಆಸೆ ಈಡೇರಿತ್ತು. ಆದರೆ ಇನ್ನು ಹೆಚ್ಚಿನ ವೇಗದ ಬುಲೆಟ್ ಟ್ರೈನಾದ 'ಹಯಬುಸ'ದಲ್ಲಿ ಯಾವಾಗ ಪ್ರಯಾಣ ಮಾಡುವೆನೋ... ಎಂಬ ಆಸೆ ಹುಟ್ಟಿತ್ತು.

English summary
Mathur Raghu writes about his travelling experience in Japan, especially in Shikansen, Japanese bullet train.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X