ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ ಧ್ವನಿ ಪ್ರತಿಷ್ಠಾನದಿಂದ ಸಾಹಿತಿಗಳಿಗೆ ಆಹ್ವಾನ

By Prasad
|
Google Oneindia Kannada News

Article invite from Dhwani Pratishthana
ದುಬೈ, ಅ. 10 : ಕಳೆದ ಇಪ್ಪತೈದು ವರ್ಷಕ್ಕೂ ಹೆಚ್ಚು ಕಾಲದಿಂದ ಹೊರನಾಡು ಹಾಗೂ ವಿದೇಶದಲ್ಲಿ ಕನ್ನಡ ಸಾಹಿತ್ಯ ಹಾಗೂ ರಂಗಭೂಮಿ ಸೇವೆಗೈಯುತ್ತಾ ಬಂದಿರುವ ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬದ ಅಂಗವಾಗಿ 2010ರಲ್ಲಿ ಹಿರಿಯ ಕವಿ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ಮಧ್ಯಪ್ರಾಚ್ಯ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಾಗೂ 2011ರಲ್ಲಿ ಖ್ಯಾತ ಚುಟುಕು ಕವಿ ಡುಂಡಿರಾಜ್ ಅವರ ಅಧ್ಯಕ್ಷತೆಯಲ್ಲಿ ಪ್ರಪ್ರಥಮ ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನವನ್ನು ಯು.ಎ.ಇ.ಯಲ್ಲಿ ಯಶಸ್ವಿಯಾಗಿ ನೆರವೇರಿಸಿ ಚರಿತ್ರೆ ನಿರ್ಮಿಸಿತು.

ಪ್ರಸ್ತುತ ಧ್ವನಿ ಪ್ರತಿಷ್ಠಾನ ಒಂದು ಹೆಜ್ಜೆ ಮುಂದಿಟ್ಟು ಶ್ರೀಮಂತ ಕನ್ನಡ ಸಾಹಿತ್ಯವನ್ನು ವಿಶ್ವದಾದ್ಯಾಂತ ಪಸರಿಸಲು "ಧ್ವನಿ" ಜಾಗತಿಕ ಕನ್ನಡ ಸಾಹಿತ್ಯ ಇ-ಪತ್ರಿಕೆಯನ್ನು ಪ್ರಕಾಶಿಸಲು ನಿರ್ಧರಿಸಿದೆ. ನವೆಂಬರ್ ಮಾಸಾಂತ್ಯದಲ್ಲಿ ಲೋಕಾರ್ಪಣಗೊಳ್ಳಲಿರುವ ಈ ಮಾಸಿಕ ಇ- ಪತ್ರಿಕೆಯಲ್ಲಿ, ಕನ್ನಡ ಸಂಶೋಧನೆ, ಸಾಹಿತ್ಯ ವಿಮರ್ಶೆ, ರಂಗಭೂಮಿ, ಜಾನಪದ, ಲಲಿತಕಲೆ ಮತ್ತು ಸಂಗೀತ ಮುಂತಾದ ಕ್ಷೇತ್ರಗಳ ಲೇಖನಗಳು ಹಾಗೂ ಕತೆ ಕವನಗಳು ಸೇರಿದಂತೆ ವಿವಿಧ ಸಾಹಿತ್ಯಿಕ ಪ್ರಭೇದದ ಬರಹಗಳನ್ನು ಪ್ರಕಟಿಸಲಾಗುವುದು.

ಸದರಿ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಚಿಂತಕರು, ಸಾಹಿತಿಗಳು ತಮ್ಮ ಬರಹಗಳನ್ನು ಕೆಳಗಿನ ಇ-ಮೈಲ್ ವಿಳಾಸಕ್ಕೆ ಕಳುಹಿಸಿ ಕೊಟ್ಟು ಪ್ರಪಂಚದ ಮೂಲೆ ಮೂಲೆಗಳಲ್ಲಿ ಹಬ್ಬಿರುವ ಕನ್ನಡಿಗರೊಂದಿಗೆ ತಮ್ಮ ಅರಿವನ್ನು ಹಂಚಿಕೊಳ್ಳಬೇಕಾಗಿ ಧ್ವನಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪತ್ರಿಕಾ ಹೇಳಿಕೆಯಲ್ಲಿ ವಿನಂತಿಸಿಕೊಂಡಿರುವರು.

E-mail:[email protected], [email protected]
ಅಂಚೆ ಕಳುಹಿಸಲು ವಿಳಾಸ : Prakash Rao Payyar, P.O.Box:8508, Dubai, U.A.E.

English summary
Dhwani Pratishthana of Dubai has invited articles, poems, short stories from Kannada writers, thinkers from the field of Kannada theater, art, culture, music, folklore for it's ambitious e-paper.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X