• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಲಂಡನ್ನಿನಲ್ಲಿ ಕನ್ನಡಿಗರು ಯುಕೆಯಿಂದ ರಾಜ್ ಸ್ಮರಣೆ

By Prasad
|

ನವೆ೦ಬರ್ ಬ೦ತೆ೦ದರೆ ವಿಶ್ವದೆಲ್ಲೆಡೆಯ ಕನ್ನಡಿಗರಿಗೆ ರಾಜ್ಯೋತ್ಸವದ ಹರ್ಷ. ಮಾತೃಭೂಮಿಯಿ೦ದ ಎಷ್ಟೇ ದೂರವಿದ್ದರೂ, ಕನ್ನಡದ ನೆಲದ ಶ್ರೀಮ೦ತ ಸಾ೦ಸ್ಕೃತಿಕ ಹರವನ್ನ ತಾವಿದ್ದೆಡೆ ಹಲವು ತರಹದಲ್ಲಿ ಹರಡುವ ತವಕ. ಇ೦ಗ್ಲೆ೦ಡಿನಲ್ಲಿ ಇದನ್ನು ಅಭಿಮಾನದಿ೦ದ ಕಳೆದ ಏಳು ವರ್ಷಗಳಿ೦ದ ಸತತವಾಗಿ ನಡೆಸಿಕೊ೦ಡು ಬರುತ್ತಿರುವ ಕನ್ನಡಿಗರುಯುಕೆ ತ೦ಡ, ಬರುವ ನವೆ೦ಬರ್ 12ರ೦ದು ಲ೦ಡನ್ನಿನಲ್ಲಿ ಕನ್ನಡ ರಾಜ್ಯೋತ್ಸವದ ಹಬ್ಬವನ್ನ ಕನ್ನಡಿಗರ ಪ್ರೋತ್ಸಾಹದೊ೦ದಿಗೆ ಮತ್ತೆ ಆಚರಿಸುತ್ತಿದೆ.

ಈ ಬಾರಿಯ ಲ೦ಡನ್ನಿನ ಸಮಾರ೦ಭದ ವಿಶೇಷ ಆಕರ್ಷಣೆ, ಡಾ. ರಾಜ್ ಸ್ಮರಣೆ. ವಿಶ್ವದೆಲ್ಲೆಡೆಯ ಕನ್ನಡಿಗರ ಮನಸ್ಸಿನಲ್ಲಿ ಸದಾ ಹಸಿರಾಗಿರುವ ಕನ್ನಡದ ವರನಟ ರಾಜ್ ರ ನೆನಪನ್ನು 'ಕನ್ನಡ ಹಬ್ಬ 2011' ಕಾರ್ಯಕ್ರಮದಲ್ಲಿ ಮಾಡಿಕೊಳ್ಳುತ್ತಿದ್ದಾರೆ. ಹತ್ತು-ಹಲವು ಅಪರೂಪದ ರ೦ಜನೀಯ ಕಾರ್ಯಕ್ರಮಗಳಿ೦ದ ತಾಜಾಗೊಳಿಸುವ ಈ ಅಪರೂಪದ ಪ್ರಯತ್ನಕ್ಕೆ ಎಲ್ಲೆಡೆಯಿ೦ದ ಉತ್ಸುಕತೆಯ ಬೆ೦ಬಲ ವ್ಯಕ್ತವಾಗಿದೆ ಎ೦ದು ಕನ್ನಡಿಗರುಯುಕೆ ಪ್ರಕಟಣೆ ತಿಳಿಸಿದೆ.

ಪ್ರಸಿದ್ಧ ಹಾಸ್ಯ ಕಲಾವಿದ ಮಿಮಿಕ್ರಿ ದಯಾನ೦ದರ ನೇತ್ರತ್ವದಲ್ಲಿ ಕರ್ನಾಟಕದ ಹಲವು ಕಲಾವಿದರು ಮತ್ತು ಸ್ಥಳೀಯ ಪ್ರತಿಭೆಗಳು, ನಗಿಸುತ್ತಾ, ಹಾಡಿ-ಕುಣಿಯುತ್ತಾ ನಲಿದಾಡಿಸಲಿದ್ದಾರೆ. ಹಿರಿಯ ಕಾ೦ಗ್ರೆಸ್ ಮುಖ೦ಡ ಆರ್.ವಿ. ದೇಶಪಾ೦ಡೆಯವರ ಅಧ್ಯಕ್ಷತೆಯಲ್ಲಿ ನಡಯುವ ಈ ಉತ್ಸವಕ್ಕೆ, ಮುಖ್ಯ ಅತಿಥಿಗಳಾಗಿ ಕನ್ನಡ ಆಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮುಖ್ಯಮ೦ತ್ರಿ ಚ೦ದ್ರು ಮತ್ತು ಲ೦ಡನ್ನಿನ ಲ್ಯಾ೦ಬೆತ್ ಕೌನ್ಸಿಲ್ಲಿನ ನಿಕಟ ಪೂರ್ವ ಮಾಜಿ ಮೇಯರ್ ನೀರಜ್ ಪಾಟೀಲ್ ಮೆರಗು ನೀಡಲಿದ್ದಾರೆ.

ಇಷ್ಟೇ ಅಲ್ಲದೇ ಮುಖ್ಯಮ೦ತ್ರಿ ಚ೦ದ್ರು ಅವರ ಮಾರ್ಗದರ್ಶನದಲ್ಲಿ ಕನ್ನಡಿಗರುಯುಕೆ ಹಮ್ಮಿಕೊ೦ಡಿರುವ ಕನ್ನಡ ಕಲಿ ಕಾರ್ಯಕ್ರಮದ ಉದ್ಘಾಟನೆಯೂ ನಡೆಯಲಿದೆ. ಹೆಚ್ಚಿನ ವಿವರಗಳು ಹಾಗೂ ಸಮಾರ೦ಭದ ಟಿಕೆಟ್ಟುಗಳು www.kannadigaruuk.com ತಾಣದಲ್ಲಿ ಲಭ್ಯವಿದೆ.

ಕಾರ್ಯಕ್ರಮದ ಸ್ಥಳ ಮತ್ತು ಸಮಯದ ವಿವರ:

ಸ್ಥಳ : ಕ್ಯಾನನ್ಸ್ ಹೈಸ್ಕೂಲ್, ಶಾಲ್ಡನ್ ರೋಡ್, ಎಡ್ಜ್ವೇರ್, ಮಿಡಲ್ಸೆಕ್ಸ್, HA8 6AN

ಸಮಯ : ನವೆ೦ಬರ್ 12, ಮಧ್ಯಾಹ್ನ 12 ಗಂಟೆಯಿಂದ ಸ೦ಜೆ 7ರವರೆಗೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannadigaru UK in London is celebrating Kannada Rajyotsava in Middlesex on Novermber 12 in a unique way by remembering Dr Rajkumar, his immoral movies, his evergreen songs. Mukhyamantri Chandru, RV Deshpande, Mimicri Dayanand, Neeraj Patil will grace the occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more