ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೇರಿಯಲ್ಲಿ ನವರಾತ್ರಿ ಬೊಂಬೆಗಳ ಹಬ್ಬದ ಸಡಗರ

By Prasad
|
Google Oneindia Kannada News

Dasara Gombe Habba by Savitha Ravishankar
ನವರಾತ್ರಿ ಬಂದರೆ ನಾರ್ತ್ ಕೆರೋಲಿನದಲ್ಲಿರುವ ಸವಿತಾ ರವಿಶಂಕರ್ ಅವರ ಮನೆಯಲ್ಲಿ ಗೊಂಬೆಗಳಿಗೆ ಹಬ್ಬದ ಸಡಗರ. ಪ್ರತಿ ವರ್ಷ ವಿಭಿನ್ನವಾದ ಥೀಮ್ ಇಟ್ಟುಕೊಂಡು ಗೊಂಬೆಗಳನ್ನು ಕೂಡಿಸುವ ಪರಿಪಾಠವನ್ನು ಸವಿತಾ ಅನೇಕ ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ. ರಾಮಾಯಣ, ಮಹಾಭಾರತದ ಸನ್ನಿವೇಶಗಳು ಗೊಂಬೆಗಳ ಮುಖಾಂತರ ಸಜೀವ ಚಿತ್ರಣ ನೀಡುತ್ತವೆ. ಈ ಬಾರಿ ಸವಿತಾ ಅವರು ಸಂಗೀತ ಸುಧೆಯನ್ನು ಹರಿಸಿದ್ದಾರೆ.

"ಭಕ್ತಿಯೊಡೆ ಪರವಶದ ಭಾವದಲಿ ನಮಿಸೆ
ಮನದಣಿಯೆ ಚಿತ್ತಾರ ರಂಗೋಲೆ ಬಿಡಿಸೆ
ಸ್ನೇಹ ಬಳಗವ ಕರೆದು ಆದರಿಸಿ ಓಲೈಸೆ
ಮೈಮರೆತು ರಾಗದಲಿ ಗಾನವನು ಹರಿಸೆ
ಚಾಮುಂಡಿ ನಲಿಯುವಳು ಒಲಿಯುವಳು ನೆಲೆಸುವಳು
ನವರಾತ್ರಿ ಶುಭವೆಂದು ದೇವಿ ಹರಸುವಳು"

ಕನ್ನಡ ಬಾಂಧವರಿಗೆಲ್ಲ ನವರಾತ್ರಿ ಹಬ್ಬದ ಶುಭಾಶಯಗಳು. ಸಂಗೀತದಲ್ಲಿರುವ ಸಾಹಿತ್ಯಾಮೃತದ ರಸಸ್ವಾದವನ್ನು ಗೊಂಬೆಗಳ ಮಾಧ್ಯಮದಲ್ಲಿ ಆಸ್ವಾದಿಸುವ ಆಶಯದಲ್ಲಿ "ಸಂಗೀತ ಸುಧೆ" ಎನ್ನುವ ಪರಿಕಲ್ಪನೆಯಲ್ಲಿ ಈ ವರುಷ ನಾವು ದಸರಾ ಗೊಂಬೆಗಳನ್ನು ಜೋಡಿಸಿದ್ದೇವೆ.

ಕೃಷ್ಣಲೀಲೆಯನ್ನು ಮುಖ್ಯ ವಿಚಾರವನ್ನಾಗಿಟ್ಟುಕೊಂಡು "ಅಚ್ಯುತಂ ಕೇಶವಂ ಕೃಷ್ಣ ದಾಮೋದರಂ ರಾಮ ನಾರಾಯಣಂ ಜಾನಕೀ ವಲ್ಲಭಂ" ಎನ್ನುವ ಹಿಂದಿ ಭಜನೆಗೆ ಹಾಗೂ ಪುರಂದರದಾಸರ ಕೃತಿಗಳಲ್ಲಿ ಕಾಣಬರುವ ಕೃಷ್ಣನ ನಾನಾ ವರ್ಣನೆಗಳ ಸಾರವನ್ನು ಗೊಂಬೆಗಳ ದೃಶ್ಯರೂಪದಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ್ದೇವೆ.

ಇದರೊಡನೆ ದಶಾವತಾರ, ಅಷ್ಟಲಕ್ಷ್ಮಿ, ಜಂಭೂಸವಾರಿ, ಹಳ್ಳಿಯ ಚಿತ್ರಣ ಇತ್ಯಾದಿ ಗೊಂಬೆಗಳ ಸಾಂಪ್ರದಾಯಿಕ ಜೋಡನೆ ಮತ್ತು ವಿವಿಧ ರೀತಿಯಲ್ಲಿ ಗಣೇಶನನ್ನು ಅಲಂಕರಿಸಿ ಆನಂದಿಸಿದ್ದೇವೆ. ನೀವೂ ನೋಡಿ ಆನಂದಿಸುವಿರಿ ಎಂದು ನಮ್ಮ ಆಶಯ.

- ಸವಿತಾ, ರವಿ, ಸಿಂಧು ಮತ್ತು ಸೀಮ, ನಾರ್ತ್ ಕೆರೋಲಿನ

English summary
Savitha Ravishankar from North Carolina, USA keeps gombe or dolls every year during Navaratri with different concepts. This year (2011) Savitha Ravishankar has arranged dolls with music theme.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X