ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜ್ಞಾನಪೀಠ ಪಡೆದ ಕಂಬಾರರಿಗೆ ಬೃಂದಾವನದ ಅಭಿನಂದನೆ

By Prasad
|
Google Oneindia Kannada News

Ganeshotsava in Brindavana New Jersey
ಎಂಟನೇ ಬಾರಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದು ಕೊಟ್ಟ ಚಂದ್ರಶೇಖರ ಕಂಬಾರ ಅವರ ಸಾಧನೆಗಳನ್ನು ಸತೀಶ್ ಹೊಸನಗರ ಅವರು ಸ್ಮರಿಸಿದರು. ವಿಶ್ವದೆಲ್ಲ ಕನ್ನಡಿಗರಿಗೆ ಇದೊಂದು ಮಹಾನ್ ಸಂತಸದ ದಿನ. ಭಾರತದ ಹದಿನಾರು ಭಾಷೆಗಳಲ್ಲಿ ಸಾಹಿತ್ಯ ಸಂಸ್ಕೃತಿಗೆ ಕನ್ನಡದ ಕೊಡುಗೆ ಅಮೋಘವಾದುದು. ಕನ್ನಡ ಸಾಹಿತ್ಯ ಪರಂಪರೆಗೆ 25 ನಾಟಕಗಳನ್ನು, 6 ಕಾದಂಬರಿಗಳನ್ನು ಹಾಗೂ ಅನೇಕ ಸಂಶೋಧನ ಗ್ರಂಥಗಳನ್ನು ಮಾರ್ಗದರ್ಶಿಸಿದ ಕೀರ್ತಿ ಕಂಬಾರರಿಗೆ ಸೇರುತ್ತದೆ. ಬೆಳಗಾವಿಯ ಜಾನಪದ ಸೊಗಡನ್ನು ದೇಶದುದ್ದಕ್ಕೂ ತಲುಪಿಸಿದ ಹೆಚ್ಚುಗಾರಿಕೆ ಕಂಬಾರರದ್ದು ಎಂಬುದನ್ನು ಪ್ರೇಕ್ಷಕರಿಗೆ ತಿಳಿಸಿದರು.

ನಂತರ ಶಮಾ ಕೃಷ್ಣಾ ಅವರು ಪ್ರಸ್ತುತ ಪಡಿಸಿದ ಕುಚಿಪುಡಿ ನೃತ್ಯ ಕಾರ್ಯಕ್ರಮ ಸುಂದರವಾಗಿ ಮೂಡಿಬಂತು. ಸುಮಾರು 30 ನಿಮಿಷಗಳ ಕಾಲ ಪ್ರೇಕ್ಷಕರನ್ನು ತಮ್ಮ ಅನೇಕ ಭಾವ-ಭಂಗಿಗಳಲ್ಲಿ ತಲ್ಲೀನಗೊಳಿಸಿದ ಯಶಸ್ಸು ಶಮಾ ಅವರದು. ಈಗಾಗಲೇ ಕುಸುಮಾಂಜಲಿ ಹಾಗೂ ಅನೇಕ ಕಿರುತೆರೆ ಧಾರಾವಾಹಿಗಳ ಮೂಲಕ ನಮಗೆಲ್ಲ ಪರಿಚಯವಾಗಿದ್ದ ಶಮಾ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮೆಚ್ಚುಗೆ ಸೂಸುವ ಅವಕಾಶವನ್ನು ಹಲವರು ಬಳಸಿಕೊಂಡುದು ವಿಶೇಷವಾಗಿತ್ತು.

ಮೂರ್ನಾಲ್ಕು ಘಂಟೆಗಳ ಕಾಲ ಕಾರ್ಯಕ್ರಮದ ನಡುವೆ ಕಾಫಿ ಹಾಗೂ ಲಘು ಉಪಹಾರವನ್ನು ಆಯೋಜಕರು ಒದಗಿಸಿದ್ದರು. ರಾತ್ರಿ ಎಂಟು ಘಂಟೆಯ ಹೊತ್ತಿಗೆ ಹಬ್ಬದೂಟವನ್ನು ಆಯೋಜಿಸಲಾಗಿತ್ತು. ಊಟದ ನಂತರ, ಮೇರಿಲ್ಯಾಂಡ್‌ನ ಭೂಮಿಕಾ ತಂಡದವರು "ಬೇವಾರ್ಸಿಯ ಬರಾವು" ಪ್ರಸ್ತುತ ಪಡಿಸಿದರು. 1935ರಲ್ಲಿ ಜಿ.ಪಿ.ರಾಜರತ್ನಂ ರಚಿಸಿದ ನಾಟಕವನ್ನು ವಿಜಯಾ ಕುಲಕರ್ಣಿಯವರು ನಿರ್ದೇಶಿಸಿದ್ದರು. ಈ ನಾಟಕದ ವಿಶೇಷತೆಯೆಂದರೆ ಮೈಸೂರು-ನಂಜನಗೂಡಿನ ಆಡು ಭಾಷೆಯಲ್ಲಿ ಅನೇಕ ರೂಪಕಗಳನ್ನು ರೋಚಕವಾಗಿ ಅಭಿನಯಿಸಿದ ಭೂಮಿಕಾ ಕಲಾವಿದರು ಪ್ರೇಕ್ಷಕರಿಂದ ಅಲ್ಲಲ್ಲಿ ಮೆಚ್ಚುಗೆ ಗಳಿಸಿದರು. ಹಿರಿಯರ ಜೊತೆಗೆ ಮಕ್ಕಳೂ ಸಹ ಈ ನಾಟಕವನ್ನು ಆನಂದಿಸಿದರು. [ಚಿತ್ರಪಟಕ್ಕೆ ಕ್ಲಿಕ್ಕಿಸಿ]

English summary
Ganeshotsava celebrated by Brindavana Kannada Koota in New Jersey on September 24, Saturday. The highlight of the celebration was the Ganesha idols were worshipped by children. Various cultural activities were organized. Jnanpith awardee Chandrashekhar Kambar was congratulated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X