ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂ ಜೆರ್ಸಿಯ ಬೃಂದಾವನದಲ್ಲಿ ಗಣೇಶೋತ್ಸವ

By Prasad
|
Google Oneindia Kannada News

Ganeshotsava in Brindavana New Jersey
ಸೆಪ್ಟೆಂಬರ್ 24ರ ಶನಿವಾರ ಎಡಿಸನ್ ಹೈ ಸ್ಕೂಲ್ ಸಭಾಂಗಣದಲ್ಲಿ ನ್ಯೂ ಜೆರ್ಸಿ ಬೃಂದಾವನ ಕನ್ನಡ ಸಂಘದವರು ಆಯೋಜಿಸಿದ್ದ ಗಣೇಶೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಪ್ರತಿವರ್ಷದಂತೆ ಮಕ್ಕಳಿಂದ ಗಣೇಶ ಪೂಜೆ ಮಾಡಿಸುವ ಮೂಲಕ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಎಂ.ಜಿ. ಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಹದಿನೈದು ಮಕ್ಕಳು ತಮಗೆ ನೀಡಿದ್ದ ಪುಟ್ಟ ಗಣೇಶನಿಗೆ ಪೂಜೆ ಸಲ್ಲಿಸಿದರು. ಗಣೇಶನ ಬಗ್ಗೆ ಹಾಗೂ ಪೂಜಾ ವಿಧಿವಿಧಾನಗಳ ಬಗ್ಗೆ ಅಚ್ಚುಕಟ್ಟಾಗಿ ವಿವರಿಸಿದ ಪ್ರಸಾದ್ ಅವರು, ಮಕ್ಕಳೆಲ್ಲರಿಗೂ ವಕ್ರತುಂಡನ ಕುರಿತು ಮಂತ್ರವನ್ನು ಹೇಳಿದರು.

ನಂತರದ ಕಾರ್ಯಕ್ರಮಗಳು ವಿದ್ಯಾ ಮೂರ್ತಿ ಮತ್ತು ಅಶೋಕ್ ಕಟ್ಟೀಮನಿ ಅವರ ನಿರೂಪಣೆಯಲ್ಲಿ ಮೂಡಿಬಂದವು. ಈ ಗಣೇಶೋತ್ಸವ ವಿಶೇಷವೆಂದರೆ ಪ್ರತಿಯೊಂದು ಕಾರ್ಯಕ್ರಮವೂ ಆಮಂತ್ರಿಸಿದ ಅತಿಥಿ ಕಲಾವಿದರು ಪ್ರಸ್ತುತಪಡಿಸಿದವಾಗಿದ್ದವು. ಮೊದಲಿಗೆ ಸೋಮಸುಂದರಂ ಮತ್ತು ತಂಡದವರಿಂದ ಸುಗಮ ಸಂಗೀತ. ಕೀ ಬೋರ್ಡ್ ಹಾಗೂ ತಬಲಾ ಪಕ್ಕವಾದ್ಯದವರ ಸಹಾಯದೊಂದಿಗೆ ಸೋಮಸುಂದರಂ ಕುಟುಂಬದವರು ಹಾಗೂ ಸ್ನೇಹಿತರು ಸೇರಿ ಒಟ್ಟು ಆರು ಜನ ಹಾಡುಗಾರರು ಅನೇಕ ಭಾವಗೀತೆ ಹಾಗೂ ಜನಪದಗೀತೆಗಳನ್ನು ಹಾಡಿದರು. ಮಾಯದಂಥ ಮಳೆ ಮೊದಲಾದ ಹಾಡುಗಳಿಗೆ ಅಲ್ಲಲ್ಲಿ ಪ್ರೇಕ್ಷಕರು ಚಪ್ಪಾಳೆಯೊಂದಿಗೆ ತಾಳ ಸೇರಿಸಿದರು. ಸೋಮಸುಂದರಂ ತಂಡದವರಿಗೆ ಎಂ.ಜಿ.ಪ್ರಸಾದ್ ಬೃಂದಾವನ ಫಲಕವನ್ನು ನೀಡಿ ಗೌರವಿಸಿದರು.

ತದನಂತರ ಜ್ಯೂನಿಯರ್ ಅಕ್ಕ ಐಡಲ್ ಪ್ರಶಸ್ತಿ ವಿಜೇತೆ ಕುಮಾರಿ ಸಾನಿಕಾ ಮಹಾಶೆಟ್ಟಿ ನಾಲ್ಕು ಹಾಡುಗಳನ್ನು ಹಾಡಿದರು. ದೂರದ ಮೇರಿಲ್ಯಾಂಡ್‌ನಿಂದ ತಂದೆಯ ಜೊತೆ ನಾಟಕದ ಟೀಮಿನೊಂದಿಗೆ ಬಂದ ಸಾನಿಕ ತನಗೆ ಸಿಕ್ಕ ಅವಕಾಶವವನ್ನು ಚೆನ್ನಾಗಿ ಬಳಸಿಕೊಂಡು ನಾಲ್ಕು ಹಾಡುಗಳನ್ನು ಹಾಡುವುದರ ಮೂಲಕ ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು. ಈಗಾಗಲೇ ಹಿಂದೂಸ್ತಾನಿ ಸಂಗೀತವನ್ನು ಕಲಿಯುತ್ತಿರುವ ಸಾನಿಕ ಹಾಡಿದ ಹಾಡುಗಳು, ಶೈಲಿ ಹಾಗೂ ಧ್ವನಿ ಇವೆಲ್ಲವೂ ಈ-ಟಿವಿಯ ಎದೆ ತುಂಬಿ ಹಾಡುವೆನು ಕಾರ್ಯಕ್ರಮವನ್ನು ನೆನಪಿಗೆ ತಂದಿತು. ಸಾನಿಕ ಪ್ರತಿಯೊಂದು ಹಾಡುಗಳನ್ನು ನೆನಪಿನಲ್ಲಿಟ್ಟುಕೊಂಡು ಹಾಡಿದ್ದೂ ಅಲ್ಲದೇ ಕ್ಯಾರಿಒಕಿ ಹಿಮ್ಮೇಳಕ್ಕೆ ತಕ್ಕಂತೆ ಬಹಳ ಇಂಪಾಗಿ ಹಾಡಿದ್ದು ಪ್ರೇಕ್ಷಕರಿಗೆ ಮೆಚ್ಚುಗೆಯಾಯಿತು. ಸಾನಿಕಾಗೆ ಕಿರುಕಾಣಿಕೆಯನ್ನು ಉಷಾ ಪ್ರಸನ್ನಕುಮಾರ್ ಅವರು ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.

English summary
Ganeshotsava celebrated by Brindavana Kannada Koota in New Jersey on September 24, Saturday. The highlight of the celebration was the Ganesha idols were worshipped by children. Various cultural activities were organized. Jnanpith awardee Chandrashekhar Kambar was congratulated.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X