ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಮಾಮಣಿ ಭಟ್ಟರ ಸ್ಪೆಷಲ್ ಕಡುಬು ಊಟ

By * ಮಧುಸೂಧನ್ ಅಕ್ಕಿಹೆಬ್ಬಾಳ್
|
Google Oneindia Kannada News

Ganeshotsava in NEKK
ಗಣೇಶ ದೇಸಾಯಿ ಸಂಗೀತ ಇನ್ನಷ್ಟು ಕೇಳಬೇಕು ಅನ್ನೋ ಮನಸಿದ್ದರೂ ಕಾಲಾವಕಾಶದ ಒತ್ತಡದಿಂದ ಭೋಜನ ಶಾಲೆಯಿಂದ ಕರೆ ಬಂತು. ಕಾರ್ಯಕ್ರಮಗಳಿಂದ ಹೇಗೆ ಕಣ್ಣು, ಕಿವಿ ಹಾಗೂ ಮನ ತಣಿದಿದ್ದವೋ ಹಾಗೆ ರುಚಿಯಾದ ಊಟದಿಂದ ಹೊಟ್ಟೆ ತಣಿಯಿತು. ರಾಮಗೋಪಾಲ್ ದೇಶಪಾಂಡೆ ಹಾಗೂ ಅವರ ಭೋಜನ ಸಮಿತಿಯವರು ಮುತುವರ್ಜಿ ವಹಿಸಿ ಊಟದ ವ್ಯವಸ್ಥೆ ಮಾಡಿದ್ದರು. ಮದ್ರಾಸ್ ಗ್ರಿಲ್ ಅವರ ರುಚಿಕರ ಬಿಸಿಬೇಳೆ ಭಾತ್, ಕೋಸಂಬರಿ, ಪಲ್ಯ, ಆಂಬೊಡೆ, ಮೊಸರನ್ನ, ಹಾಗು ರಮಾಮಣಿ ಭಟ್ಟರ ಗಣೇಶೋತ್ಸವ ಸ್ಪೆಷಲ್ ಆದ ಕಡುಬು ಊಟ ಮುಗಿದಾಗ ರಾತ್ರಿ ಒಂಭತ್ತು. ಆದರೂ ಯಾರಿಗೂ ಮನೆಗೆ ಹೋಗಲು ಅವಸರ ಕಂಡು ಬರಲಿಲ್ಲ! ಯಕ್ಷಗಾನದ ಮುಂಚೆ ಕೂಟದ ಕಾರ್ಯದರ್ಶಿ ಭಾನುಪ್ರಕಾಶ್ ಅವರಿಂದ ವಂದರ್ನಾರ್ಪಣೆ.

ಪ್ರವೀಣ ನಡುತೋಟ ಹಾಗೂ ತಂಡದವರು ನಡೆಸಿಕೊಟ್ಟ "ಮಾಗಧ ವಧೆ" ಎಂಬ ಯಕ್ಷಗಾನ ಪ್ರಸಂಗದಲ್ಲಿ ಕಣ್ಣು ಸೆಳೆಯುವ ಉಡುಗೆ ತೊಟ್ಟು ತಮ್ಮ ಪ್ರತಿಭೆ ಮೆರೆದವರೆಲ್ಲ ಅಮೆರಿಕ ವಾಸಿಗಳು ಎನ್ನುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆ ತರುವಂಥದು. ದೂರದ ಊರಿನಲ್ಲಿ ನಮ್ಮ ಸಂಸ್ಕೃತಿಯ ಪ್ರತೀಕವಾದ ಯಕ್ಷಗಾನ ಒಂದು ವಿಭಿನ್ನ ಪ್ರಯತ್ನ, ಅದರಲ್ಲಿ ಈ ತಂಡ ಪೂರ್ಣ ಯಶಸ್ಸು ಕಂಡಿತು. ಇದರ ನಂತರ ಖಜಾಂಚಿ ಶಾಂತರಾಜು ಅವರು ಎಲ್ಲರಿಗೂ ವಂದನೆ ಅರ್ಪಿಸಿದರು.

ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡ ಕೂಟದ ಪ್ರಾಮುಖ್ಯತೆಗೆ ಸಾಕ್ಷಿ ಅನ್ನುವಂತೆ ನಾನೂರಕ್ಕೂ ಮಿಗಿಲಾಗಿ ಜನ ಸೇರಿ ಈ ಕಾರ್ಯಕ್ರಮ ಆನಂದಿಸಿದರು. ಗಣೇಶ ದೇಸಾಯಿ ಅವರು ಹಾಡಿದ "ಎದೆ ತುಂಬಿ ಹಾಡಿದೆನು ಅಂದು ನಾನು" ಅನ್ನು ಮೆಲುಕು ಹಾಕುತ್ತಾ ಮನೆಗೆ ಹೊರಟಾಗ ರಾತ್ರಿ ಹನ್ನೊಂದು ಮೀರಿತ್ತು. ಸ್ನೇಹಿತರ ಜೊತೆ ರಂಗಿನ ಕಾರ್ಯಕ್ರಮಗಳನ್ನು ನೋಡುತ್ತಾ ಕಾಲ ಹೋಗಿದ್ದು ತಿಳಿಯಲೇ ಇಲ್ಲ ಅಂತ ಸ್ನೇಹಿತರೊಬ್ಬರು ಉಲಿದಾಗ ಮುಗುಳ್ನಗೆಯಿಂದ ನನ್ನ ಸಹಮತ ಸೂಚಿಸಿದೆ.

English summary
Ganeshotsava was celebrated in a grand fashion at New England Kannada Koota (NEKK) on September 24. Americannadigas gathered in huge number to make the function a grand success. A report by Madhusudhan Akkihebbal.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X