ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಅಮೆರಿಕಾದಲ್ಲಿ ವೈಭವದ ಗುರುರಾಯರ ಆರಾಧನೆ
ಮುಖ್ಯ ಅರ್ಚಕ ಯೋಗೀಂದ್ರ ಭಟ್ಟರ ನೇತೃತ್ವದಲ್ಲಿ ಶ್ರೀ ರಾಯರಿಗೆ ಪಂಚಾಮೃತ ಅಭಿಷೇಕ, ಅಷ್ಟೋತ್ತರ, ಮಹಾಪೂಜೆ, ಅಲಂಕಾರ ಪಂಕ್ತಿ, ಸಾಯಂ ರಂಗ ಪೂಜೆ, ಅಷ್ಟಾವಧಾನ ಇತ್ಯಾದಿ ಸೇವೆಗಳು ಸಂಪನ್ನಗೊಂಡವು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ವಿದುಷಿ ಸೀತಾಲಕ್ಷ್ಮಿ ಮಾಧವನ್ ಮತ್ತು ವೃಂದದವರಿಂದ ಸುಗಮ ಸಂಗೀತ, ಯೋಗೀಂದ್ರ ಭಟ್ ಇವರಿಂದ ಶ್ರೀ ರಾಯರ ಗ್ರಂಥಗಳ ಬಗ್ಗೆ ಉಪನ್ಯಾಸ ನಡೆಯಿತು.
ಕೆನಡಾದಲ್ಲಿ ಚಾತುರ್ಮಾಸ್ಯ ದೀಕ್ಷಿತರಾಗಿರುವ ಉಡುಪಿ ಶ್ರೀ ಪುತ್ತಿಗೆ ಮಠಾಧೀಶ ಪರಮಪೂಜ್ಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ವೀಡಿಯೋ ಸಂದೇಶದ ಮೂಲಕ ನೆರೆದ ಭಕ್ತರನ್ನು ಹರಸಿದರು.
ಸಾವಿರಾರು ಕನ್ನಡಿಗರು ಏಕಕಾಲದಲ್ಲಿ ಒಟ್ಟು ಸೇರಿ ಸಂಭ್ರಮಿಸುವ, ವಿದೇಶದಲ್ಲಿರುವ ಏಕೈಕ ಧಾರ್ಮಿಕ ಸಂಸ್ಥೆ ಎನ್ನುವ ಹಿರಿಮೆ ನ್ಯೂಜೆರ್ಸಿಯ ಶ್ರೀ ಕೃಷ್ಣವೃಂದಾವನದ್ದಾಗಿದೆ.
Comments
ರಾಘವೇಂದ್ರ ಸ್ವಾಮಿ ಆರಾಧನೆ ನ್ಯೂ ಜೆರ್ಸಿ ಅಮೆರಿಕ raghavendra swamiji aradhane new jersey america sugunendra teertha
English summary
Sri Raghavendra Swamiji aradhane was celebrated in Sri Krishna Vrundavana of branch of Puttige Mutt in New Jersey, USA. Sri Sugunendra Teertha Swamiji of Puttige Mutt blessed the devotees through video conference from Canada.
Story first published: Monday, August 22, 2011, 11:31 [IST]