ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜೆರ್ಸಿ ಭಕ್ತರ ಕೈಗೆ ಒರಿಜಿನಲ್ ತಿರುಪತಿ ಲಡ್ಡು

By Mahesh
|
Google Oneindia Kannada News

Sinivasa Kalyanam, NJ on July 16,2011
ನ್ಯೂಜೆರ್ಸಿ ಜು 13:ತಿರುಮಲ ತಿರುಪತಿ ದೇವಸ್ಥಾನದಿಂದ ನ್ಯೂಜೆರ್ಸಿಗೆ ಲಡ್ಡು ಪ್ರಸಾದ ಪಾರ್ಸೆಲ್ ಆಗಿದೆ. ಜು 16 ರಂದು ನಡೆಯಲಿರುವ ಅಮೆರಿಕದ ಹಿಂದೂ ಭಕ್ತಾದಿಗಳು ಶ್ರೀನಿವಾಸ ಕಲ್ಯಾಣ ಮಹೋತ್ಸವದಲ್ಲಿ ಭಾಗವಹಿಸಿ, ವೆಂಕಟೇಶ್ವರನ ಆಶೀರ್ವಾದ ಪಡೆದು ಪ್ರಸಾದ ಪಡೆಯಬಹುದು ಎಂದು ಅಮೆರಿಕದ ಹಿಂದೂ ದೇಗುಲ ಹಾಗೂ ಸಾಂಸ್ಕೃತಿಕ ಕೇಂದ್ರ(HATCC) ಹೇಳಿದೆ.

ನ್ಯೂಜೆರ್ಸಿಯ ಮಾರ್ಗನ್ ವಿಲ್ಲೆಯಲ್ಲಿರುವ ಶ್ರೀ ಗುರುವಾಯುರಪ್ಪನ್ ದೇಗುಲ(ಶ್ರೀಕೃಷ್ಣಮಂದಿರ) ಮಾಡಿದ ಮನವಿಗೆ ಪುರಸ್ಕರಿಸಿರುವ ಟಿಟಿಡಿ, ಲಡ್ಡು ಪ್ರಸಾದ, ಅರಿಶಿನ, ಕುಂಕುಮ ಮುಂತಾದ ದೇವತಾ ಸಾಮಾಗ್ರಿಗಳನ್ನು ಕಳಿಸಿಕೊಟ್ಟಿದೆ. ಶ್ರೀದೇವಿ, ಭೂದೇವಿ ಸಮೇತ ಶ್ರೀನಿವಾಸ ಮೂರ್ತಿಯ ಸುಂದರ ಪ್ರತಿಮೆಗಳನ್ನು ಹೊತ್ತ ನೂರಾರು ಜನ ಅರ್ಚಕರು, ಸಾವಿರಾರು ಜನ ಭಕ್ತಾದಿಗಳ ಪರವಾಗಿ ವಿವಾಹವನ್ನು ನೆರವೇರಿಸಲಿದ್ದಾರೆ.

ನ್ಯೂಜೆರ್ಸಿ ದೇಗುಲದಲ್ಲಿ ಮದುವೆ ಸಿದ್ಧತೆ ಭರದಿಂದ ಸಾಗಿದೆ. ಕಾರ್ಯಕ್ರಮದ ವಿವರಗಳನ್ನು ಪ್ರಕಟಿಸಲಾಗಿದ್ದು, ಭಕ್ತಾದಿಗಳು ಮುಂಚಿತವಾಗಿ ತಮ್ಮ ಸ್ಥಳವನ್ನು ಕಾಯ್ದಿರಿಸುವಂತೆ ಕೋರಲಾಗಿದೆ.

8.30 ಗಂಟೆ: ಸುಪ್ರಭಾತಂ, ತೋಮಾಲಾ ಸೇವಾ, ಸಂಕಲ್ಪಂ
10.30 ಗಂಟೆ: ಶ್ರೀನಿವಾಸ ಕಲ್ಯಾಣಂ
ಸಂಜೆ 5.00 ಗಂಟೆ: ಸಾಂಸ್ಕೃತಿಕ ಸೇವೆ
8.30 ಗಂಟೆ: ಶಯನೋತ್ಸವ ಸೇವೆ

ಕಳೆದ ವರ್ಷ ಕೂಡಾ ವಿಜೃಂಭಣೆಯಿಂದ ಶ್ರೀನಿವಾಸ ದೇವರ ವಿವಾಹವನ್ನು ಇಲ್ಲಿ ಆಯೋಜಿಸಲಾಗಿತ್ತು. ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ: ಶ್ರೀಕೃಷ್ಣ ದೇಗುಲದ ವೆಬ್ ತಾಣ;73297 25552 or 73279 40475

English summary
Srinivasa Kalyanam organised at Hindu American Temple and Cultural Center, Sri Krishnaji Mandir Morganville New Jersy on July 16. Original Tirupathi Laddu prasadam brought directly from Tirumala, Andra Pradesh. Devotees are requested to witness the celestial wedding of lord Venkateswara and get blessings from deity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X