• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಅಮೆರಿಕಾಗೆ ಹಾರಲಿದ್ದಾರೆ ನಮ್ಮ 'ಹುಡುಗರು'

By Prasad
|

ಕರ್ನಾಟಕದಲ್ಲಿ ಧೂಳೆಬ್ಬಿಸಿರುವ 'ಹುಡುಗರು' ಅಮೆರಿಕಾಗೆ ಹೋಗುತ್ತಿದ್ದಾರೆ. ಅವರೇನು ಅಮೆರಿಕಾಗೆ ತೆರಳಿ ಮಜಾ ಉಡಾಯಿಸಿ ಬರಲು ಹೊರಟಿಲ್ಲ. ಅಮೆರಿಕದಲ್ಲಿ ಬೀಡುಬಿಟ್ಟಿರುವ ಕನ್ನಡಿಗರನ್ನು ರಂಜಿಸಲು ಹೊರಟಿದ್ದಾರೆ.

ಹೌದು, ಯೋಗರಾಜ್ ಭಟ್ ಮತ್ತು ಜಯಂತ್ ಕಾಯ್ಕಿಣಿ ಜಂಟಿಯಾಗಿ ಚಿತ್ರಕಥೆ, ಹಾಡು ಬರೆದ, ಕೆ ಮಾದೇಶ್ ನಿರ್ದೇಶನದ 'ಹುಡುಗರು' ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಜು.15, 16 ಮತ್ತು 17ರಂದು ಪ್ರದರ್ಶನ ಕಾಣಲಿದೆ. ವಿ ಹರಿಕೃಷ್ಣ ಸಂಗೀತ ನೀಡಿರುವ ಹಾಡುಗಳು ಸೂಪರ್ ಹಿಟ್ ಆಗಿವೆ.

ಪುನೀತ್ ರಾಜಕುಮಾರ್ ಪ್ರಥಮಬಾರಿಗೆ ಮಲ್ಟಿಸ್ಟಾರ್ ಚಿತ್ರದಲ್ಲಿ ನಟಿಸಿದ್ದು, ಸದ್ಯದ ಬೇಡಿಕೆಯ ನಟರುಗಳಾದ ಶ್ರೀನಗರ ಕಿಟ್ಟಿ, 'ಲೂಸ್ ಮಾದ' ಯೋಗೀಶ್ ಮತ್ತು ರಾಧಿಕಾ ಪಂಡಿತ್ ನಟಿಸಿರುವ ಚಿತ್ರ ಭಾರೀ ಪ್ರಶಂಸೆಗೆ ಪಾತ್ರವಾಗಿದೆ. ತಮಿಳಿನ ನಾಡೋಡಿಗಳ್ ಚಿತ್ರದ ರಿಮೇಕ್ ಆದರೂ ಕನ್ನಡಿಗರ ಮನಸು ಗೆದ್ದಿದೆ.

ಉತ್ತಮ ನಿರೂಪಣೆ, ಬೋರು ಹೊಡೆಸದ ಚಿತ್ರಕಥೆ, ಅಭಿಮಾನಿಗಳಿಗೆ ನಿರಾಶೆ ಮಾಡದ ಪುನೀತ್, ಕಿಟ್ಟಿ ಮತ್ತು ಯೋಗೀಶ್ ಅಭಿನಯವಿದೆ. ಒಟ್ಟಿನಲ್ಲಿ ಇಡೀ ಕುಟುಂಬ ಕುಳಿತು ಎರಡು ತಾಸಿನ ಸಿನೆಮಾ ನೋಡಿ ಮಜಾ ಮಾಡಿ ಹೋಗಬೇಕು, ಹಾಗಿದೆ.

ಅಕ್ಕ ಮತ್ತು ಕಸ್ತೂರಿ ಮೀಡಿಯಾ ಜೊತೆಯಾಗಿ ಹುಡುಗರನ್ನು ತೆರೆಯ ಮೇಲೆ ತಂದು ನಿಲ್ಲಿಸುತ್ತಿವೆ. ಚಿತ್ರ ಪ್ರದರ್ಶನದ ದಿನಾಂಕ, ಸಮಯ ಮತ್ತು ಟಿಕೆಟ್ ವಿವರಗಳನ್ನು ಗುರುತು ಹಾಕಿಕೊಳ್ಳಿ.

ಥಿಯೇಟರ್ : ಸೆರಾ ಥಿಯೇಟರ್ಸ್

ವಿಳಾಸ : 200 Serra way #37, Milpitas, CA - 95035 (BIG LOTS Complex, bhind CHILIS)

ದಿನಾಂಕ ಮತ್ತು ಸಮಯ :

ಜು. 15, ಶುಕ್ರವಾರ, ಸಂಜೆ 8 ಗಂಟೆಗೆ

ಜು. 16, ಶನಿವಾರ, ಮಧ್ಯಾಹ್ನ 2.30 ಮತ್ತು ಸಂಜೆ 5.30 ಗಂಟೆಗೆ

ಜು. 17, ಭಾನುವಾರ, ಸಂಜೆ 5.30 ಗಂಟೆಗೆ

ಹೆಚ್ಚಿನ ವಿವರಗಳಿಗೆ : (510) 402-4633 ಅಥವಾ www.serratheatres.com ನೋಡಿರಿ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kannada movie Hudugaru will be screening in California, USA on July 15, 16, 17 at Serra theatres. Puneeth Rajkumar, Srinagar Kitty, Yogish and award winning actress Radhika Pandit are in the lead. Movie directed by K Maadesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more