ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಂಗಳೂರಿನಲ್ಲಿ ಎರಡು ದಿನಗಳ ನಾವಿಕ ಅಮೆರಿಕನ್ನಡೋತ್ಸವ

By Shami
|
Google Oneindia Kannada News

ಬೆಂಗಳೂರು, ಜು 4: ಕರ್ನಾಟಕದ ಪ್ರತಿಭೆಗಳು ವಿದೇಶಗಳಿಗೆ ತೆರಳಿ ಅಲ್ಲಿ ತಮ್ಮ ಪ್ರತಿಭಾ ಪ್ರದರ್ಶನ ಮಾಡುವುದು ವಾಡಿಕೆ. ಆದರೆ, ಇದೀಗ ಪ್ರತಿಭಾ ಪ್ರದರ್ಶನ 360 ಕೋನದಲ್ಲಿ ತಿರುವು ಮುರುವಾಗುತ್ತಿದೆ!

ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಕನ್ನಡನಾಡಿಗೆ ಆಗಮಿಸಿ ಬೆಂಗಳೂರಿನಲ್ಲಿ ತಮ್ಮ ಕಲಾ ನೈಪುಣ್ಯವನ್ನು ಪ್ರದರ್ಶನಕ್ಕೆ ಇಡಲು ಸಜ್ಜಾಗಿದ್ದಾರೆ. ಈ ಪೂರ್ವ ಪ್ರವಾಹಕ್ಕೆ ವೇದಿಕೆ ಕಲ್ಸಿಸುತ್ತಿರುವವರು ನಾವಿಕ. ಎರಡು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ವಾಣಿಜ್ಯ, ಕಲೆ, ಸಂಸ್ಕೃತಿ ಹಬ್ಬ ನಡೆಯಲಿದೆ.

ನಾವಿಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಂಟಿಯಾಗಿ ಆಯೋಜಿಸಿರುವ ಜು 9 ಹಾಗೂ ಜು 10 ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಜು9 ರಂದು ವಿಧಾನಸೌಧದ ಬಾಂಕ್ವೆಟ್ ಹಾಲ್ ನಲ್ಲಿ ಕರ್ನಾಟಕ ಹಾಗೂ ಯುಎಸ್ ಎ ವಾಣಿಜ್ಯ ವ್ಯವಹಾರ ಸಭೆ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳ ಪ್ರಾಯೋಜಕತ್ವವನ್ನು ಬೆಂಗಳೂರಿನ ಮೈಯ್ಯಾಸ್ ರೆಸ್ಟೋರೆಂಟ್ ವಹಿಸಿಕೊಂಡಿದೆ.

ಕಾರ್ಯಕ್ರಮ ವಿವರಗಳು:

ಕರ್ನಾಟಕ ಯುಎಸ್ ಎ ಉದ್ಯಮಿಗಳ ಸಭೆ
ದಿನಾಂಕ/ದಿನ: ಜು 8, 2011, ಶುಕ್ರವಾರ
ಸಮಯ: ಮಧ್ಯಾಹ್ನ 3 ಗಂಟೆ
ಉದ್ಘಾಟನೆ: ಮುರುಗೇಶ್ ನಿರಾಣಿ, ಕೈಗಾರಿಕಾ ಸಚಿವ
ಮುಖ್ಯ ಅತಿಥಿಗಳು: ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ, ವಿಜಯಶಂಕರ್
ಸ್ಥಳ: ಬಾಂಕ್ವೆಟ್ ಹಾಲ್, ವಿಧಾನಸೌಧ

ಅಮೆರಿಕನ್ನಡೋತ್ಸವ ಕಾರ್ಯಕ್ರಮಗಳು:

ದಿನಾಂಕ/ದಿನ: ಜು 9, ಶನಿವಾರ
ಸಮಯ: ಬೆಳಗ್ಗೆ 9.30
ಸ್ಥಳ: ರವೀಂದ್ರ ಕಲಾಕ್ಷೇತ್ರ ಬೆಂಗಳೂರು
ಉದ್ಘಾಟನೆ: ಬಿಎಸ್ ಯಡಿಯೂರಪ್ಪ, ಮುಖ್ಯಮಂತ್ರಿ ಕರ್ನಾಟಕ ಸರ್ಕಾರ
ಅಧ್ಯಕ್ಷತೆ: ಗೋವಿಂದ ಕಾರಜೋಳ
ಮುಖ್ಯ ಅತಿಥಿಗಳು: ಆರ್ ಅಶೋಕ್, ಗಣೇಶ್ ಕಾರ್ಣಿಕ,
ವಿಶೇಷ ಆಹ್ವಾನಿತರು: ಅನಂತ್ ಕುಮಾರ್, ಹೇಮಚಂದ್ರ ಸಾಗರ, ವಿಶ್ವೇಶ್ವರ ಭಟ್, ಸದಾನಂದ ಮಯ್ಯ

ಸಮಾರೋಪ ಸಮಾರಂಭ:

ದಿನಾಂಕ/ದಿನ: ಜು 10, ಭಾನುವಾರ
ಸಮಯ: ಸಂಜೆ 7 ಗಂಟೆಗೆ
ಸ್ಥಳ: ರವೀಂದ್ರ ಕಲಾಕ್ಷೇತ್ರ ಬೆಂಗಳೂರು
ಮುಖ್ಯ ಅತಿಥಿಗಳು: ಸಚಿವ ಸುರೇಶ್ ಕುಮಾರ್, ರಮೇಶ್ ಅರವಿಂದ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್
ಅಧ್ಯಕ್ಷತೆ: ನಾವಿಕ ಚೇರ್ ಮನ್ ಶರಣ ಬಸವ ರಾಜುರ್

ಗುರುಸಂಸ್ಥೆಯ ಯಶವಂತ ಸರದೇಶಪಾಂಡೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಹಾಗೂ ನಾವಿಕ ಅಧ್ಯಕ್ಷ ಕೇಶವ ಬಾಬು, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷ ಗಣೇಶ್ ಕಾರ್ಣಿಕ್ ಅವರು ಎಲ್ಲ ಕಾರ್ಯಕ್ರಮಕ್ಕೆ ಆದರದ ಸ್ವಾಗತವನ್ನು ಕೋರಿದ್ದಾರೆ. [ಸ್ನೇಹಸೇತು ಕಟ್ಟಲು ನಾವಿಕ ತವಕ]

English summary
Two day Amerikannadotsava in Bangalore 9-10 July 2011. Ravindra Kalakshetra. Business, Culture and Literature exchange program organized by Navika and Kannada and culture department, NRI cell, sponsored by Maiya's Restaurants
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X