ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರಿಜೋನಾದಲ್ಲಿ ಶ್ರೀಮನ್ನಾರಾಯಣ ಪ್ರತ್ಯಕ್ಷ!

By Prasad
|
Google Oneindia Kannada News

Sugunendra Teertha Swamiji inaugurated Venkateshwara temple in Arizona
ಟೆಂಪೆ, ಜೂ. 10 : ಅಮೆರಿಕದ ಅರಿಜೋನಾ ರಾಜ್ಯದ ಟೆಂಪೆ ನಗರದಲ್ಲಿ ಉಡುಪಿ ಪುತ್ತಿಗೆ ಮಠದ ವತಿಯಿಂದ ವೆಂಕಟೇಶ್ವರ ದೇವಸ್ಥಾನ ಆರಂಭಗೊಂಡಿದೆ. ಉಡುಪಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ 'ವೆಂಕಟ ಕೃಷ್ಣ ಕ್ಷೇತ್ರ' ಎಂದು ಹೆಸರಿಟ್ಟಿದ್ದಾರೆ.

ಅರಿಜೋನಾ ರಾಜ್ಯದಲ್ಲಿ ಆರಂಭಗೊಂಡಿರುವ ನೂತನ ಹರಿಯ ದೇವಸ್ಥಾನದಿಂದಾಗಿ 'ಹರಿಝೋನ್' ಹರಿ ವಲಯ ಎಂಬಂತಾಗಿದೆ ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಹರ್ಷ ವ್ಯಕ್ತಪಡಿಸಿದರು. ನೂರಾರು ಭಕ್ತಾದಿಗಳು ಈ ಸಮಾರಂಭದಲ್ಲಿ ಪಾಲ್ಗೊಂಡು ಹರಿ ಸ್ಮರಣೆ ಮಾಡಿ ಶ್ರೀಗಳ ಆಶೀರ್ವಾದ ಪಡೆದರು.

ಪುತ್ತಿಗೆ ಶ್ರೀಗಳ ನೇತೃತ್ವದಲ್ಲಿ ನಡೆದ ದೇವರ ವಿಗ್ರಹಗಳ ಪ್ರತಿಷ್ಠ್ಠಾಪನಾ ಸಮಾರಂಭದಲ್ಲಿ ಟೆಂಪೆ ನಗರದ ಮೇಯರ್ ಹ್ಯೂಗ್ ಹಾಲ್‌ಮನ್ ಪಾಲ್ಗೊಂಡಿದ್ದರು. ಶಾಂತಿ ಮತ್ತು ಭಕ್ತಿಯ ನೆಲೆಯೊಂದು ತಮ್ಮ ನಗರದಲ್ಲಿ ಆರಂಭವಾಗಿರುವುದಕ್ಕೆ ಅವರು ಸಂತಸ ವ್ಯಕ್ತಪಡಿಸಿದರು.

ದೇವಸ್ಥಾನ ನಿರ್ಮಿಸಲು ನೆರವಾದ ಅರಿಜೋನಾ ನಾಗರಿಕರ ಕೊಡುಗೆ ಮತ್ತು ಸಹಕಾರಕ್ಕೆ ಕೃತಜ್ಞತೆ ಸಲ್ಲಿಸಿದರು. ಪ್ರೀಸ್ಟ್ ಸ್ಟ್ರೀಟ್ ಸಮೀಪ ಸ್ಥಾಪನೆಗೊಂಡಿರುವ ಹಿನ್ನೆಲೆಯಲ್ಲಿ ಪ್ರದೇಶವನ್ನು 'ವೆಂಕಟ ಕೃಷ್ಣ ಕ್ಷೇತ್ರ' ಎಂದು ಘೋಷಿಸಿದ್ದಾರೆ.

English summary
Lord Venkateshwara temple inaugurated in Tempe, Arizona, US of A. Temple is a overseas project by Sri Sugunendra Teertha swamiji, seer of Puttige Mutt, Udupi. The city is named after the Vale of Tempe in Greece.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X