ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಜು.2, 3 ವಿಶ್ವ ವೀರಶೈವ ಸಮ್ಮೇಳನ

By * ನಾಗರಾಜ ಎಂ., ಕನೆಕ್ಟಿಕಟ್, ಯುಎಸ್ಎ
|
Google Oneindia Kannada News

34th VSNA convention in USA
12ನೇ ಶತಮಾನದಲ್ಲಿ ನುಡಿದಂತೆ ನಡೆದು ವೀರಶೈವ ಧರ್ಮ ಪ್ರಾರಂಭಿಸಿದ ವಿಶ್ವಗುರು ಬಸವಣ್ಣ ಹಾಗು ಎಲ್ಲ ಶಿವ ಶರಣರ ವಚನಗಳನ್ನು, ಜಗದೆಲ್ಲೆಡೆ ಸಾರುವ ಉದ್ದೇಶದಿಂದ ಉತ್ತರ ಅಮೆರಿಕಾದಲ್ಲಿರುವ ವೀರಶೈವ ಸಮಾಜ ನ್ಯೂಇಂಗ್ಲಂಡ್ ಚಾಪ್ಟರ್(ಶಾಖೆ) ಬರುವ ಜುಲೈ 2 ಮತ್ತು 3, 2011ರಂದು 34ನೇ ವಿಶ್ವ ವೀರಶೈವ ಸಮ್ಮೇಳನವನ್ನು ಹಮ್ಮಿಕೊಂಡಿದೆ. ವಿಶ್ವ ಬಸವ ಚರ್ಚಾ ಗೋಷ್ಠಿಯನ್ನು ಜ್ಞಾನ - ಕಾಯಕ - ದಾಸೋಹ - ಸಮಾನತೆಗಳನ್ನೇ ಸಮ್ಮೇಳನದ ಧ್ಯೇಯ ಮಾಡಿಕೊಂಡು ಬೋಸ್ಟನ್ ನಗರಕ್ಕೆ ಹೊಂದಿಕೊಂಡಿರುವ Newton, MA - ಚಾರ್ಲ್ಸ್ ನದಿ ತೀರದಲ್ಲಿರುವ Marriott ಹೋಟೆಲ್ ನ ವಿಶಾಲವಾದ ಸಭಾಂಗಣದಲ್ಲಿ ಏರ್ಪಡಿಸಿದೆ.

ಜುಲೈ 2, 2011 ಶನಿವಾರದಂದು ಸಿದ್ದಗಂಗಾ ಮಠದ ನಡೆದಾಡುವ ದೇವರು ಡಾ| ಶ್ರೀ ಶ್ರೀ ಶಿವಕುಮಾರ ಸ್ವಾಮಿಜಿಗಳಿಂದ ವಿಧ್ಯುಕ್ತವಾಗಿ ತುಮಕೂರಿನಿಂದ ಉದ್ಗಾಟನೆಯಾಗಲಿರುವ (ಲೈವ್ ವಿಡಿಯೋ ಮೂಲಕ) ಈ ಸಮ್ಮೇಳನಕ್ಕೆ ಕೆಳಕಂಡ ಹೆಸರಾಂತ ಸನ್ಮಾನ್ಯ ಸ್ವಾಮೀಜಿಗಳು, ವಿವಿಧ ಕ್ಷೇತ್ರಗಳಲ್ಲಿ ಹೆಸರಾದ ಗಣ್ಯ ವ್ಯಕ್ತಿಗಳು ಆಗಮಿಸಲಿದ್ದಾರೆ.

ಸನ್ಮಾನ್ಯ ಸ್ವಾಮೀಜಿಗಳಾದ..
- ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ
- ತರಳುಬಾಳು ಜಗದ್ಗುರು ಡಾ| ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ
- ಶ್ರೀ ಸಿದ್ದೇಶ್ವರ ಸ್ವಾಮೀಜಿ - ಜ್ಞಾನ ಯೋಗಾಶ್ರಮ, ಬಿಜಾಪುರ
- ಡಾ | ಶ್ರೀ ಶಿವಮೂರ್ತಿ ಮುರುಘ ಶರಣರು - ಚಿತ್ರದುರ್ಗ
- ಶ್ರೀ ತೋಂಟದಾರ್ಯ ಶಿವಾಚಾರ್ಯ ಸ್ವಾಮೀಜಿ - ಗದಗ
- ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾ ಸ್ವಾಮೀಜಿ
- ಶ್ರೀ ಬಸವಾನಂದ ಸ್ವಾಮೀಜಿ - ಮನಗುಂಡಿ, ಧಾರವಾಡ
- ಶ್ರೀ ಅಕ್ಕ ರೂಪಕ - Basava Divine Center, USA

ರಾಜಕೀಯ ಗಣ್ಯರಾದ...
- Deval Patrick, Governor of Massachusetts, USA
- Dannel P. Malloy, Governor ಕನೆಕ್ಟಿಕಟ್, USA
- ಬಿ.ಎಸ್. ಯಡಿಯೂರಪ್ಪ , ಮುಖ್ಯಮಂತ್ರಿಗಳು ಕರ್ನಾಟಕ ಸರ್ಕಾರ
- ಎಸ್.ಎಮ್. ಕೃಷ್ಣ , ಭಾರತದ ವಿದೇಶಾಂಗ ಸಚಿವರು
- ಪ್ರಭಾಕರ್ ಕೋರೆ, ಲೋಕಸಭಾ ಸದಸ್ಯ
- ಸುರೇಶ ಅಂಗಡಿ, ಲೋಕಸಭಾ ಸದಸ್ಯ
- ಜಿಎಮ್ ಸಿದ್ದೇಶ್, ಲೋಕಸಭಾ ಸದಸ್ಯ
- ಶಿವರಾಂ ಗೌಡ , ಲೋಕಸಭಾ ಸದಸ್ಯ
- ವಿ. ಸೋಮಣ್ಣ, ಹೌಸಿಂಗ್ ಡೆವೆಲಪ್ಮೆಂಟ್ ಮಿನಿಸ್ಟರ್
- ಜಗದೀಶ್ ಶೆಟ್ಟರ್, ಗ್ರಾಮೀಣ ಅಭಿವೃದ್ದಿ ಸಚಿವ
- ಪರಣ್ಣ ಮುನವಳ್ಳಿ, ಶಾಸಕ
- ಶಾಮನೂರು ಶಿವಶಂಕರಪ್ಪ, ಶಾಸಕ
- ರಾಣಿ ಸತೀಶ್ - ಮಾಜಿ ಸಚಿವೆ
- ಬಸವರಾಜ್ ಬೊಮ್ಮಾಯಿ , ನೀರಾವರಿ ಸಚಿವ
- ಮನು ಬಳಿಗಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ
- ಉಮೇಶ್ ಕತ್ತಿ , ಕೃಷಿ ಸಚಿವ

ಹೆಸರಾಂತ ಸಮಾಜ ಸೇವಾಕರ್ತರಾದ..
- ಅರವಿಂದ್ ಜತ್ತಿ - ಬಸವ ಸಮಿತಿ ಅಧ್ಯಕ್ಷರು
- ಡಾ| ಎಂ.ಎಂ. ಕಲಬುರ್ಗಿ, ಸಂಶೋಧಕ
- ರಾಷ್ಟ್ರಕವಿ ಡಾ| ಜಿ.ಎಸ್. ಶಿವರುದ್ರಪ್ಪ
- ಗೊರೂರು ಚನ್ನಬಸಪ್ಪ - ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರು
- ಜಿ.ವಿ. ಜಯ ರಾಜಶೇಖರ್
- ಪ್ರೊ. ರಂಜಾನ್ ದರ್ಗಾ - ಬಸವಾದಿ ಶರಣರ ಪೀಠ, ಗುಲ್ಬರ್ಗ ವಿಶ್ವವಿದ್ಯಾಲಯ
- ಡಾ| ಸಿ. ಸೋಮಶೇಖರ - ಐಎಎಸ್, ಜಿಲ್ಲಾಧಿಕಾರಿಗಳು, ತುಮಕೂರು
- ಡಾ| ವೀರಣ್ಣ ರಾಜೂರ್ - ಬರಹಗಾರ
- ಡಾ| ಎನ್. ಪ್ರಭುದೇವ್ - ಕುಲಪತಿಗಳು, ಬೆಂಗಳೂರು ವಿಶ್ವವಿದ್ಯಾಲಯ
- ಎಚ್.ವಿ. ನಾಗೇಂದ್ರಪ್ಪ - ಅಖಿಲ ಭಾರತ ವೀರಶೈವ ಮಹಾಸಭಾ, ಉಪಾಧ್ಯಕ್ಷರು
- ಜರಗನಹಳ್ಳಿ ಶಿವಶಂಕರ್ - ಬರಹಗಾರ
- ಕಸ್ತೂರಿ ಶಂಕರ್ - ಖ್ಯಾತ ಹಿನ್ನೆಲೆಗಾಯಕಿ

ಧಾರ್ಮಿಕ ಹಾಗು ಸಾಂಸ್ಕೃತಿಕ ಕಾರ್ಯಕ್ರಮ

- ಆರೋಗ್ಯ ಶಿಬಿರ, ಯೋಗ, ಧ್ಯಾನ ಶಿಬಿರ
- ನೃತ್ಯ, ನಾಟಕ
- ಹಿರಿಯರ ಚರ್ಚೆಗಳು
- ವೀರಶೈವ ವಧು-ವರರ ಭೇಟಿ
- ಮಕ್ಕಳ ಸಾಂಸ್ಕೃತಿಕ ಹಾಗೂ ಮನೋರಂಜನಾ ಕಾರ್ಯಕ್ರಮ
- ವಿಶ್ವ ದಾಸೋಹ ದಿನಾಚರಣೆ
- VSNA got talent
- ಮಹಿಳೆಯರ ಆರೋಗ್ಯ ಶಿಬಿರ

ಅಮೆರಿಕ, ಕೆನಡಾ, ಮೆಕ್ಸಿಕೋ, ಯುರೋಪ್, ಭಾರತ ಹೀಗೆ ಎಲ್ಲೆಡೆಯಿಂದ ನೂರಾರು ಶಿವ ಶರಣ-ಶರಣೆಯರು ಆಗಮಿಸಲಿರುವ ಈ ಸಮ್ಮೇಳನಕ್ಕೆ ನಿಮಗೆಲ್ಲರಿಗೂ ಸ್ವಾಗತ .. ಬನ್ನಿ ಭಾಗವಹಿಸಿ .. ಶಿವಶರಣರ ವಚನಗಳ ತತ್ವವನ್ನು, ಸಾರವನ್ನು ನಾವೆಲ್ಲರೂ ತಿಳಿದು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಹಾಗೆಯೇ ಅಂಧಕಾರ, ಅಹಂಕಾರ ತುಂಬಿರುವ ಈ ಜಗದ ಎಲ್ಲೆಡೆ ಸಾರೋಣ ...

ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ
ಜ್ಯೋತಿಯ ಬಲದಿಂದ ಅಂಧಕಾರದ ಕೇಡು ನೋಡಯ್ಯ
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ
ಕೂಡಲ ಸಂಗನ ಶರಣರ ಬಲದಿಂದ ಆತ್ಮನ ಅಹಂಕಾರದ ಕೇಡು ನೋಡಯ್ಯ
- ಕೂಡಲ ಸಂಗಮ ದೇವ......

ಹೆಚ್ಚಿನ ಮಾಹಿತಿಗಾಗಿ : http://www.vsnaconvention.com

English summary
Veershaiva Samaja of North America, New England chapter is hosting 34th Annual VSNA Convention 2011. Mega Kannada event will take place on July 2-3, 2011 at Marriott Hotel, Newton MA of USA. Swamijies, ministers, artists from Karnataka are participating.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X