ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬೆಚ್ಚನೆ ಮುದ ನೀಡಿದ ಬೃಂದಾವನ ವಸಂತೋತ್ಸವ 2011

By Prasad
|
Google Oneindia Kannada News

Brindavana Vasantotsava 2011
ಮೇ 15ರ ಭಾನುವಾರದಂದು ನ್ಯೂ ಜೆರ್ಸಿಯ ಬೃಂದಾವನ ಕನ್ನಡ ಸಂಘದಿಂದ ಈಸ್ಟ್ ವಿಂಡ್ಸರ್‌ನಲ್ಲಿ ಈ ವರ್ಷದ ವಸಂತೋತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು. ಈ ವರ್ಷದಿಂದ ಬೃಂದಾವನದ ಸಾರಥ್ಯವನ್ನು ವಹಿಸಿರುವ ಮೈತ್ರಿ ತಂಡದವರ ಈ ಚೊಚ್ಚಲ ಕಾರ್ಯಕ್ರಮ ಹಲವಾರು ಸ್ಥಳೀಯ ಕಲಾವಿದರು ಹಾಗೂ ಆಹ್ವಾನಿತರ ಕಾರ್ಯಕ್ರಮಗಳ ಸಂಗಮವಾಗಿ ಶೋತೃಗಳ ಮನಸೆಳೆಯಿತು.

ಕಡು ಚಳಿಗಾಲದ ಅನುಭವಗಳ ಹಿನ್ನೆಲೆಯಲ್ಲೇ ನ್ಯೂ ಜೆರ್ಸಿಯ ಕನ್ನಡಿಗರು ಯುಗಾದಿಯ ಹೊಸ ವರ್ಷದ ಹುರುಪನ್ನು ಹಂಚಿಕೊಂಡರು. ಈ ತಿಂಗಳು ಇಲ್ಲಿನ ವಾತಾವರಣ ಯಾಕೋ ಮುನಿಸಿಕೊಂಡಿದೆ. ಈ ರೀತಿಯ ಮುಸುಕಿನ ಹವಾಮಾನದ ನಡುವೆಯೂ ತಮ್ಮ ಭಾನುವಾರದ ದಿನವನ್ನು ಸಹೃದಯ ಕನ್ನಡಿಗರೊಂದಿಗೆ ಹಂಚಿಕೊಂಡರು. ಸುಮಾರು ಮೂನ್ನೂರು ಜನರು ನೆರೆದ ಈ ಸಮಾರಂಭ ತುಸು ತಡವಾದರೂ ಎಂದಿನಂತೆ ರಾಷ್ಟ್ರಗೀತೆ-ಸಂಕೇತ ಗೀತೆಗಳೊಂದಿಗೆ ಆರಂಭವಾದವು.

ಮುಂಜಾನೆ ರಶ್ಮಿ ಕುರೋಡಿಯವರ ನಿರೂಪಣೆಯಲ್ಲಿ ಸ್ಥಳೀಯ ಪ್ರತಿಭೆಗಳ ಅನೇಕ ಕಾರ್ಯಕ್ರಮಗಳು ಶೋತೃಗಳ ಮನಸೆಳೆದವು. ಮೂರು ವರ್ಷ ಹಾಗೂ ಮೇಲ್ಪಟ್ಟ ಅನೇಕ ಮಕ್ಕಳು ಈ ಮೇಲಿನ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತಮ್ಮನ್ನು ತೊಡಗಿಸಿಕೊಂಡು, ಅವರದೇ ಶೈಲಿಯಲ್ಲಿ ಮುದ್ದಾಗಿ ಕನ್ನಡವನ್ನು ಮಾತನಾಡಿದ್ದು ಎಲ್ಲರ ಮನಸೆಳೆಯಿತು. ಮನಸೆಳೆದ ಕಾರ್ಯಕ್ರಮಗಳು ಕೆಳಗಿನಂತಿವೆ.

ಪುಷ್ಪಾಂಜಲಿ ನೃತ್ಯ - ವಿದ್ಯಾ ಮೂರ್ತಿ ತಂಡ
ಉಲ್ಲಾಸ ಉತ್ಸವ - ಸಪ್ನಾ ಲಂಬಿ ತಂಡ
ಗುಬ್ಬಿಗೂಡು - ಸೀಮಾ ಮೂರ್ತಿ ತಂಡ
ಸ್ವರಾಲಯ (ಜಾನಪದ ಗೀತೆ ಮತ್ತು ದೇವರ ನಾಮ) - ಶಾರದಾ ಕಂಡವಲ್ಲಿ ತಂಡ
ಹಬ್ಬ ನೃತ್ಯ ರೂಪಕ - ಸೀಮಾ ಮೂರ್ತಿ ತಂಡ

ಮುಖ್ಯ ಅತಿಥಿಯಾಗಿ ಆಗಮಿಸಬೇಕಿದ್ದ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಕಾರಣಾಂತರಗಳಿಂದ ತಮ್ಮ ಅಮೆರಿಕವನ್ನು ಪ್ರವಾಸವನ್ನು ರದ್ದು ಮಾಡಿದರು. ಅವರು ಬರದಿದ್ದರೂ ಅಕ್ಕ ಸಂಸ್ಥೆಯ ಅನೇಕ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದುದು ವಿಶೇಷ. ಅಕ್ಕ ವಿಶ್ವಸ್ಥ ಮಂಡಳಿಯ ಅಧ್ಯಕ್ಷ ಅಮರನಾಥ ಗೌಡ, ಅಧ್ಯಕ್ಷ ದಯಾಶಂಕರ ಅಡಪ್ಪ, ಮಾಜಿ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗೂ ಅಕ್ಕ ಖಜಾಂಚಿ ಮತ್ತು ಸ್ಥಳೀಯರೂ ಆದ ಮಧು ರಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಜೊತೆಗೆ ಯುನೈಟೆಡ್ ಲ್ಯಾಂಡ್ ಬ್ಯಾಂಕ್‌ನ ಪ್ರದೀಪ್‌ಕುಮಾರ್ ಕೂಡ ಮುಖ್ಯ ಅತಿಥಿಗಳಲ್ಲೊಬ್ಬರಾಗಿದ್ದರು. ಸಭಾಂಗಣದ ಹೊರಗಡೆ ಮಕ್ಕಳು ಯಾರೋ ಕೈ ತಪ್ಪಿನಿಂದ ಫೈರ್ ಅಲಾರ್ಮ್ ಅನ್ನು ಚಲಾಯಿಸಿದ್ದರಿಂದಾಗಿ ಎಲ್ಲರೂ ಸಭಾಂಗಣವನ್ನು ತೆರವುಗೊಳಿಸಿದುರಿಂದ ಸುಮಾರು ಇಪ್ಪತ್ತು ನಿಮಿಷಗಳ ಕಾಲ ತಡೆ ಉಂಟಾಯಿತು.

ಸಂಮೃದ್ಧ ಭೋಜನಾಂತರ ವಸುಂಧರಾರವರ ನಿರೂಪಣೆಯಲ್ಲಿ ಕಾರ್ಯಕ್ರಮಗಳು ಆರಂಭಗೊಂಡವು. ಇಲ್ಲೂ ಸಹ ಅನೇಕ ಸ್ಥಳೀಯರ ಕಾರ್ಯಕ್ರಮಗಳು ಅತಿಥಿಗಳ ಕಾರ್ಯಕ್ರಮಗಳ ಜೊತೆಗೆ ಬೆಸೆದುಕೊಂಡು ಶೋತೃಗಳಿಗೆ ಎಲ್ಲ ರೀತಿಯ ಮನೋರಂಜನೆಯನ್ನು ಉಣಬಡಿಸುವಲ್ಲಿ ಸಫಲವಾದವು. ಮನಸೆಳೆದ ಕಾರ್ಯಕ್ರಮಗಳು ಕೆಳಗಿನಂತಿವೆ.

ಮಕ್ಕಳ ಜಾನಪದ ನೃತ್ಯ - ರಶ್ಮಿ ತಂಡ
ವಸಂತ ಗೀತೆ - ಪ್ರಭಾ ನಾಗಪ್ರಸಾದ್ ತಂಡ
ಮಕ್ಕಳ ತಬಲಾ ವಾದನ - ಪ್ರಭಾಕರ್ ತಂಡ
ಜಾನಪದ ನೃತ್ಯ - ಮಲ್ಲಿ ಸಣ್ಣಪ್ಪನವರ ತಂಡ
ದೇವರನಾಮ ಮತ್ತು ಭಕ್ತಿಗೀತೆ - ಮಂಜುಳಾ ರಾವ್ ಮತ್ತು ಪ್ರಭಂಜನ್
ಪಂಚವಟಿ ನೃತ್ಯ ರೂಪಕ - ಭಾರತಿ ಮತ್ತು ಚೇತನ್ ಹೆಬ್ಬಾರ್
ಅಮೆರಿಕ ಅಳಿಯ ಹಾಸ್ಯ ನಾಟಕ - ಮಲ್ಲಿ ಸಣ್ಣಪನವರ ತಂಡ
ರಸಮಂಜರಿ - ಸಂಗೀತ ಸಂಜೆ - ಸುರೇಶ್ ರಾಮಚಂದ್ರ ಮತ್ತು ಹರಿಣಿ ವಾಸುದೇವನ್

ಸುಮಾರು ಬೆಳಿಗ್ಗೆ 11 ಗಂಟೆಯಿಂದ ಆರಂಭವಾಗಿ ಸಂಜೆ 7ರವರೆಗೆ ಕಾರ್ಯಕ್ರಮ ನಡೆದರೂ ಶೋತೃಗಳು ಪ್ರತಿಯೊಂದಕ್ಕೂ ಚಪ್ಪಾಳೆ ತಟ್ಟಿ ಮೆಚ್ಚುಗೆ ಸೂಸುತ್ತಿದ್ದರು. ನಿರಂತರವಾಗಿ ಸರಬರಾಜುಗುತ್ತಿದ್ದ ಚಹಾ, ಕಾಫಿ ಹಾಗೂ ಲೆಮನೇಡ್ ವಿತರಣೆಯ ಸ್ಥಳಗಳಲ್ಲಿ ತಮ್ಮ ಬಂಧು-ಮಿತ್ರರನ್ನು ಕೈ ಕುಲುಕಿ ಮಾತನಾಡಿಸುತ್ತಿದ್ದುದು ಗಮನ ಸೆಳೆಯಿತು. ಈ ಕಾರ್ಯಕ್ರಮಗಳ ನಡುವೆ ಈ ಸಮಾರಂಭವನ್ನು ಪ್ರಾಯೋಜಿಸಿದ ಹತ್ತು ಕಂಪನಿಗಳ ಪ್ರತಿನಿಧಿಗಳನ್ನು ವೇದಿಕೆಯ ಮೇಲೆ ಕರೆದು ಪರಿಚಯಿಸಿ ಸನ್ಮಾನಿಸಲಾಯಿತು.

ಬೃಂದಾವನದ ಮುಂದಿನ ಕಾರ್ಯಕ್ರಮ : ಜುಲೈ 16, 2011, ಶನಿವಾರ - ಪಿಕ್‌ನಿಕ್ (ಬೃಂದಾವನ ವಿಹಾರ), ಸ್ಥಳ ಮೊದಲಾದ ವಿವರಗಳನ್ನು ಮುಂದೆ ತಿಳಿಸಲಾಗುವುದು.

English summary
Kannadigas of New Jersey, USA celebrated Vasantotsava 2011 in New Jersey on May 15. In the absence of Karnataka former Chief Minister HD Kumaraswamy AKKA office bearers presided over as the chief guests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X