• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬೃಂದಾವನ ವಸಂತೋತ್ಸವಕ್ಕೆ ಎಚ್ ಡಿ ಕುಮಾರಸ್ವಾಮಿ

By Prasad
|

ಹೊಸತನದ ಸಂಕೇತವಾಗಿರುವ ಯುಗಾದಿಯನ್ನು ಸಂಭ್ರಮದಿಂದ ಆಚರಿಸಲು ನ್ಯೂ ಜೆರ್ಸಿಯಲ್ಲಿರುವ ಕರ್ನಾಟಕ ಸಾಂಸ್ಕೃತಿಕ ಸಂಸ್ಥೆ ಬೃಂದಾವನದ 'ಮೈತ್ರಿ' ತಂಡ ಎಳೆ ಬಾಳೆಕಂಬ, ತಳಿರು ತೋರಣ ಕಟ್ಟುತ್ತಿದೆ. ಮೇ 15ರಂದು ಇಡೀ ದಿನ ನಡೆಯುತ್ತಿರುವ 'ವಸಂತೋತ್ಸವ 2011'ದಲ್ಲಿ ತರಹೇವಾರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಬಂಧು ಬಾಂಧವರಿಗೆ ಉಣಬಡಿಸಲು ವಿಶೇಷ ಅಡುಗೆಯ ತಯಾರಿಯಲ್ಲಿಯೂ ನಿರತವಾಗಿದೆ.

ಈ ಬಾರಿಯ ಯುಗಾದಿಯ ವಿಶೇಷವೆಂದರೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಹಾಲಿ ಸಂಸದ ಎಚ್ ಡಿ ಕುಮಾರಸ್ವಾಮಿ ಅವರು ಬೃಂದಾವನದ ಕನ್ನಡಿಗರೊಂದಿಗೆ ಖರನಾಮ ಸಂವತ್ಸರದಲ್ಲಿ ಬೇವು ಬೆಲ್ಲ ಹಂಚಿಕೊಳ್ಳಲು ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವುದು. ವಸಂತೋತ್ಸವದ ಉದ್ಘಾಟನೆಯನ್ನು ಕುಮಾರಸ್ವಾಮಿ ಮಾಡಲಿದ್ದಾರೆ. ವಿಶೇಷ ಅತಿಥಿಯ ಆಗಮನದಿಂದಾಗಿ 'ಮೈತ್ರಿ'ಕೂಟದ ಸದಸ್ಯರ ಸಡಗರವೂ ಇಮ್ಮಡಿಗೊಂಡಿದೆ.

ಮೇ 15ರ ಭಾನುವಾರ ಬೆಳಿಗ್ಗೆ 10.30ರಿಂದ ಸಂಜೆ 7 ಗಂಟೆಯವರೆಗೆ ಬೃಂದಾವನ ಕನ್ನಡ ಕೂಟದ ಸದಸ್ಯರಿಂದ ಹಾಡುಹಸೆ, ಚೈತ್ರಮಾಸವನ್ನು ಸ್ವಾಗತಿಸುವ ಕಾರ್ಯಕ್ರಮಗಳು, ಹಾಸ್ಯ ನಾಟಕ, ಸಂಗೀತ ಸಂಜೆಗಳು ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಬಡಿಸಲಿವೆ. ಜೊತೆಗೆ ಮಧ್ಯಾಹ್ನ ಹೋಳಿಗೆ ಊಟವಂತೂ ಇದ್ದೇ ಇದೆ. ಕಾರ್ಯಕ್ರಮ ನಡೆಯುವ ಸ್ಥಳ : ಕ್ರೆಪ್ಸ್ ಮಿಡ್ಲ್ ಸ್ಕೂಲ್, 5 ಕೆಂಟ್ ಲೇನ್, ಈಸ್ಟ್ ವಿಂಡ್ಸರ್, ನ್ಯೂ ಜೆರ್ಸಿ 08520.

ಕಾರ್ಯಕ್ರಮದ ವಿವರಗಳು

10.30 : ಬಂಧ, ಸ್ನೇಹಿತರೊಡನೆ ಭೇಟಿ

11.00 : ಸ್ವಾಗತ

11.15 : ಕುಮಾರಸ್ವಾಮಿಯಿಂದ ವಸಂತೋತ್ಸವದ ಉದ್ಘಾಟನೆ

12.00 : ಸದಸ್ಯರಿಂದ ಯುಗಾದಿ ಕುರಿತ ಕಾರ್ಯಕ್ರಮಗಳು

1.00 : ಹಬ್ಬದೂಟ

1.45 : ಯುಗಾದಿ ಕುರಿತ ಕಾರ್ಯಕ್ರಮಗಳು (ಭಾಗ 2)

2.45 : ಚೇತನ್ ಹೆಬ್ಬಾರ್ ಮತ್ತು ಅಖಿಲಾ ವಸುದೇವಮೂರ್ತಿ ಅವರಿಂದ 'ಪಂಚವಟಿ' ನೃತ್ಯನಾಟಕ

3.25 : ಮಲ್ಲಿ ಸಣ್ಣಪ್ಪನವರ್ ಅವರ ತಂಡದಿಂದ ಹಾಸ್ಯ ನಾಟಕ 'ಅಮೆರಿಕ ಅಳಿಯ'

3.40 : ಯುಗಾದಿ ಕುರಿತ ಕಾರ್ಯಕ್ರಮಗಳು (ಭಾಗ 3)

4.30 : ಸುರೇಶ್ ರಾಮಚಂದ್ರ ಮತ್ತು ಹರಿಣಿ ವಾಸುದೇವನ್ ಅವರಿಂದ ಸಂಗೀತ ಸಂಜೆ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Former Chief Minister of Karnataka HD Kumaraswamy will be participating in Vasantotsava 2011 - Ugadi celebration by Brindavana Kannada Koota's Maitri team in New Jersey on May 15, Sunday. Many cultural activities have been organized by Kannadigas in New Jersey, America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more