• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕನೆಕ್ಟಿಕಟ್ ಕನ್ನಡಿಗರಿಂದ ವಸಂತನ ಸ್ವಾಗತ

By * ನಾಗರಾಜ್ ಮಹೇಶ್ವರಪ್ಪ, ಕನೆಕ್ಟಿಕಟ್
|

America Aliya comedy play
ಚಳಿಗಾಲ ಹೋಗಿ ವಸಂತಕಾಲ ಹೆಜ್ಜೆ ಇಟ್ಟ ಈ ಸಮಯದಲ್ಲಿ, ಎಲ್ಲೆಡೆ ಗಿಡಮರಗಳ ಮೇಲೆ ಎಲೆಗಳು ಚಿಗುರಿ, ಹೂವು ಅರಳುವುದನ್ನೇ ಕಾಯುತ್ತಿರುವ ದುಂಬಿಗಳ ಝೇಂಕಾರ, ಪಕ್ಷಿಗಳ ಚಿಲಿಪಿಲಿ, ಮಳೆ ಬಂದು ಹೋದ ಮೇಲಿನ ಆಹ್ಲಾದಕರ ವಾತಾವರಣವನ್ನು ನೋಡುತ್ತಾ ನಿಂತಿರುವಾಗ... ಎಲ್ಲಿಂದಲೋ ತೇಲಿಬಂದ "ಅ ಆ ಇ ಈ ..ಕನ್ನಡದ ಅಕ್ಷರಮಾಲೆ" 70ರ ದಶಕದ ಪುಟ್ಟಣ್ಣ ಕಣಗಾಲರ 'ಕರುಳಿನ ಕರೆ'ಯ ಸುಮಧುರ ಹಾಡು ಕನ್ನಡಾಂಬೆಯ ಮಡಿಲಲ್ಲಿ ಹುಟ್ಟಿದ ನಾವೇ ಧನ್ಯರು ಎಂಬ ಭಾವನೆ ತಂದಿದ್ದು ಸುಳ್ಳಲ್ಲ.

ಏಪ್ರಿಲ್ 23ರಂದು ಶನಿವಾರ, ಕನೆಕ್ಟಿಕಟ್ನ ನ್ಯೂ ವಿಂಗ್ಟನ್ ನಲ್ಲಿರುವ ಶ್ರೀ ವಲ್ಲಬ್ಧಂ (ಶ್ರೀ ಕೃಷ್ಣ) ಮಂದಿರದ ವಿಶಾಲ ಸಭಾಂಗಣದಲ್ಲಿ ಹೊಸದಾಗಿ ಆಯ್ಕೆಯಾದ HKK ಕಮಿಟಿ ಸದಸ್ಯರ ನೇತೃತ್ವದಲ್ಲಿ ಚಂದ್ರಶೇಖರ್ ಭಟ್, ಪ್ರಿಯಾ ಹರ್ಯಾಡಿ, ಅನಿತಾ ಜೋಯಿಸ್ ರವರ ಸುಂದರ ನಿರೂಪಣೆಯೊಂದಿಗೆ ಹೊಯ್ಸಳ ಕನ್ನಡ ಕೂಟ, ಕನೆಕ್ಟಿಕಟ್ ಯುಗಾದಿ 2011 ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಸರಿಯಾಗಿ ಮಧ್ಯಾಹ್ನ 3 ಗಂಟೆಗೆ ಶ್ರೀ ಗಣೇಶ ಪಂಚರತ್ನ ಸ್ತೋತ್ರದೊಂದಿಗೆ ಆರಂಭವಾದ ನಂತರ ಶ್ರೀವಿದ್ಯಾ - ಯಶವಂತ್ ಗಡ್ಡಿರವರಿಂದ ಕನ್ನಡದ ನಾಡಗೀತೆ ಶುರುವಾದ ತಕ್ಷಣ ಎಲ್ಲ ಹಿರಿಯರು, ಕಿರಿಯರು ಎದ್ದು ನಿಂತು ತಾವೂ ಧ್ವನಿಗೂಡಿಸಿದ್ದು ತುಂಬಾ ವಿಶೇಷವಾಗಿತ್ತು.

ನಂತರ ಅನಿತಾ ಜೋಯಿಸ್ ರವರ ಸಂಯೋಜನೆಯಲ್ಲಿ ನಡೆದ ಚಿಣ್ಣರ ವೇಷ-ವೈಖರಿಯಲ್ಲಿ ಮುದ್ದಾದ ಮಕ್ಕಳು, ಹಳ್ಳಿ ಹುಡುಗಿ, ಬೆಂಗಳೂರು ಹುಡುಗಿ, ಹವಾಹಿಯನ್ ಗರ್ಲ್, ರಾಜ್, ಉಪೇಂದ್ರ, ಮಧ್ವಾಚಾರ್ಯರು, ವಧು-ವರ, ರಾಜ-ಮಹಾರಾಜ ಹೀಗೆ ವಿವಿಧ ವೇಷ-ಭೂಷಣಗಳಲ್ಲಿ ವೇದಿಕೆಮೇಲೆ ನಡೆದುಬಂದಾಗ ಫೋಷಕರ ಕಂಗಳಲ್ಲಿ ಆನಂದಭಾಷ್ಪ, ನೆರೆದ್ದಿದ್ದವರ ಕಣ್ಣುಗಳಿಗೆ ಹಬ್ಬವನ್ನುಂಟು ಮಾಡಿ ನಿಜವಾಗಲು ಚಿಣ್ಣರ-ಕಿನ್ನರ ಲೋಕಕ್ಕೆ ಕರೆದೊಯ್ದರು.

ಇದಾದ ನಂತರ ಈ ಕೆಳಕಂಡ ಕಾರ್ಯಕ್ರಮಗಳು ನೆರೆದ್ದಿದ್ದವರನ್ನು ರಂಜಿಸಿದವು.

* ಕವಿರತ್ನ ಕಾಳಿದಾಸ - ಸಂಗೀತ ರೂಪಕ - ಯಶವಂತ್ ಗಡ್ಡಿಯವರ ನಿರೂಪಣೆಯಲ್ಲಿ.

* ವಿವಿಧ ನೃತ್ಯ-ವಾದ್ಯ ರೂಪಕ - ಪ್ರಿಯಾ ಮತ್ತು ಉಮಾರವರ ನಿರ್ದೇಶನದಲ್ಲಿ.

* ಜಾಲಿ ಡೇಸ್ ನೃತ್ಯ - ಪ್ರಿಯಾರವರ ನಿರ್ದೇಶನದಲ್ಲಿ.

* "ಓ ವಸಂತ" - ಚಲನಚಿತ್ರಗೀತೆಗಳ ನೃತ್ಯ ಸಂಗಮ.

* ಅಮೆರಿಕನ್ನಡ ಶಾಲೆಯ ಮಕ್ಕಳಿಂದ "ಜಾಣ ನರಿ" - ಮಕ್ಕಳ ನೀತಿ ಕಥಾ ರೂಪಕ ಅನಿತಾರವರ ಸಂಯೋಜನೆಯಲ್ಲಿ.

* ಶ್ರೀ ರಾಮಸ್ತುತಿ ನೃತ್ಯ ರೂಪಕ - ರಶ್ಮಿ ವಿಶ್ವನಾಥ್ ಸಂಯೋಜನೆಯಲ್ಲಿ.

ಮಧ್ಯೆ ಚಿಕ್ಕ ವಿರಾಮದ ನಂತರ ಕನ್ನಡ ಕೂಟದ ಅಜೀವ ಸದಸ್ಯರಿಂದ ಪುಟಾಣಿಗಳಿಗೆ ಪ್ರಶಸ್ತಿ ಪ್ರದಾನ ಸಮಾರಂಭ.

* "ಯುಗ-ಯುಗಾದಿ ಕಳೆದರೂ" - ಯುಗಾದಿ ಗೀತೆ ರಘು ಸೋಸಲೆ ತಂಡದವರಿಂದ.

* "ಗಾಂಪ ಗುರು ಹಾಗು ಆತನ ಶಿಷ್ಯರು" ಕಿರು ಹಾಸ್ಯ ನಾಟಕ - ಅನು ಸೋಮನಾಥ್ ತಂಡದವರಿಂದ.

* ಭರತ ನಾಟ್ಯ "ಬಾರೋ ಕೃಷ್ಣಯ್ಯ" - ತೇಜಸ್ವಿನಿ ರಾಮಸ್ವಾಮಿಯವರಿಂದ.

* "ಹೊಯ್ಸಳ ಕರೆ ಮಾಡಿ ನಿಮಗಾಗಿ" ವೈವಿದ್ಯಮಯ ಪ್ರದರ್ಶನ - ಫೋನ್ ಕರೆಮಾಡಿ ತಮಗೆ ಇಷ್ಟವಾದ ಹಾಡು-ನೃತ್ಯಗಳ ಬೇಡಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟವರು ಸರಿತಾ-ಸದಾನಂದ್, ಸ್ವರ್ಣ ಮೋದಿ ಮತ್ತು ರಘು ಸೋಸಲೆ ತಂಡದವರಿಂದ.

* "ಭಾಗ್ಯದ ಬಳೆಗಾರ" ಜಾನಪದ ನೃತ್ಯ - ಪ್ರಿಯಾ ಹರ್ಯಾಡಿ ಮತ್ತು ರೂಪ ಕುಮಾರ್ ತಂಡದವರಿಂದ

* ದಶಾವತಾರ ನೃತ್ಯ ರೂಪಕ - ರಶ್ಮಿ , ಶ್ರೀವಿದ್ಯಾರವರ ಸಂಯೋಜನೆ, ನೃತ್ಯ ನಿರ್ದೇಶನದಲ್ಲಿ.

ಅಮೆರಿಕ ಅಳಿಯ ನಗೆ ನಾಟಕ : ಹೀಗೆ ಹತ್ತು ಹಲವಾರು ವಿವಿಧ ಕಾರ್ಯಕ್ರಮಗಳು ನಡೆದ ಮೇಲೆ ವೇದಿಕೆ ಮೇಲೆ ಬಂದಿದ್ದು "ಅಮೆರಿಕ ಅಳಿಯ" - ಮಲ್ಲಿ ಸಣ್ಣಪ್ಪನವರ ವಿರಚಿತ ಸೂಪರ್ ಕಾಮಿಡಿ ನಗೆ-ನಾಟಕ. ನಮ್ಮ ಮಗಳಿಗೆ ಅಮೆರಿಕ ಗಂಡೇ ಬೇಕು ಎಂಬ ತಂದೆ-ತಾಯಿಯರ ಪ್ರತಿಷ್ಠೆ, ಹಳ್ಳಿಯ ಸುಂದರ ಕನ್ಯೆಯನ್ನು ವರಿಸಬೇಕೆಂದು ಕಣ್ತುಂಬಾ ಆಸೆಯಿರಿಸಿಕೊಂಡು ದೂರದ ಅಮೆರಿಕಾದಿಂದ ಕನಸುಗಳ ಹೊತ್ತು ಬಂದ ಹುಡುಗರು ಅನುಭವಿಸುವ ಸಿಹಿ-ಕಹಿ ಘಟನೆಗಳು, ಹಳ್ಳಿಯಲ್ಲಿ ಇದ್ದರೂ ದಿಲ್ಲಿ ಹುಡುಗಿ ತರಹ ನಟಿಸುವ ಹುಡುಗಿ - ಈ ಎಲ್ಲಾ ಸನ್ನಿವೇಶಗಳನ್ನು ನಗೆರೂಪದಲ್ಲಿ ನಿರೂಪಿಸಿ - ನಟಿಸಿ ಪ್ರೇಕ್ಷಕರ ಮನಸೂರೆಗೊಂಡಿದ್ದು ಮಲ್ಲಿ ಮತ್ತು ತಂಡದವರಿಂದ. [ಚಿತ್ರಪಟ]

ಹೀಗೆ ಸರಿಸುಮಾರು 5 ಗಂಟೆಗಳ ತನಕ ನಡೆದ ಈ ಯುಗಾದಿ ಕಾರ್ಯಕ್ರಮ ಕೊನೆಗೊಂಡಿದ್ದು ರಘು ಸೋಸಲೆಯವರ ವಂದನಾರ್ಪಣೆಯೊಂದಿಗೆ. ಅಣ್ಣಾವ್ರ ಹುಟ್ಟುಹಬ್ಬದ ಸಮಯದಲ್ಲಿ ನಡೆದ ಈ ಸುಂದರ ಕಾರ್ಯಕ್ರಮಕ್ಕೆ ಈ ಬಾರಿ ಪಕ್ಕದ ನ್ಯೂ ಜೆರ್ಸಿಯಿಂದಲೂ ಕನ್ನಡಿಗರು ಆಗಮಿಸಿದ್ದು ವಿಶೇಷವಾಗಿತ್ತು.

ಅಣ್ಣಾವ್ರ "ವಸಂತ ಕಾಲ ಬಂದಾಗ ..ಮಾವು ಚಿಗುರಲೇಬೇಕು - ಕೋಗಿಲೆ ಹಾಡಲೇ ಬೇಕು" ಎಂಬ ಸುಂದರ ಹಾಡನ್ನು ಮೆಲ್ಲಗೆ ಗುನುಗುತ್ತಾ, ಕುಣಿದು ಕುಪ್ಪಳಿಸುವ ಚಿಣ್ಣರ, ಹೊರಗಡೆ ನಳ ನಳಿಸುತ್ತಿರುವ ಚಿಗುರೆಲೆ-ಹೂಗಳನ್ನು ನೋಡಿ ನಾವೂ ಏನು ಕಡಿಮೆ ಇಲ್ಲ ಎನ್ನುವಂತೆ ದೊಡ್ಡವರು ಸಹಾ ಹೊಸ ಹುರುಪು ಹುಮ್ಮಸ್ಸಿನಿಂದ ನಲಿಯುತ್ತ ಹೋಳಿಗೆ ಊಟ ಮಾಡಿ ಮನೆಕಡೆಗೆ ಹೊರಟಾಗ ರಾತ್ರಿ ಒಂಬತ್ತಾಗಿತ್ತು.

English summary
Hoysala Kannada Koota in Connecticut, USA celebratred Ugadi, hindu new year with loads of Kannada cultural activities. Malli Sannappanavar's comedy kannada play America Aliya was the highlight of the evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X