ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಎಇ ಚುಟುಕು ಸಮ್ಮೇಳನದಲ್ಲಿ ತೇಜಸ್ವಿನಿ ಥಳಕು

By Prasad
|
Google Oneindia Kannada News

Kannada actress Tejaswini
ಸವಿ ಸವಿ ನೆನಪು, ಮಾತಾಡ್ ಮಾತಾಡು ಮಲ್ಲಿಗೆ ಮುಂತಾದ ಚಿತ್ರಗಳಲ್ಲಿ ಮನೋಜ್ಞವಾಗಿ ಅಭಿನಯಿಸಿರುವ ಖ್ಯಾತ ಕನ್ನಡ ನಟಿ ತೇಜಸ್ವಿನಿ ಪ್ರಕಾಶ್ ಅವರು ಧ್ವನಿ ಪ್ರತಿಷ್ಠಾನದ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿರುವ ಪ್ರಪ್ರಥಮ ಯು.ಇ.ಎ. ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ವಿಶೇಷ ಮನೋರಂಜನಾ ಕಾರ್ಯಕ್ರಮವನ್ನು ನೀಡಲಿದ್ದಾರೆ.

ತೇಜಸ್ವಿನಿ ಅವರು ಮಸಣದ ಮಕ್ಕಳು, ಸವಿ ಸವಿ ನೆನಪು (ಚಿತ್ರವಿಮರ್ಶೆ), ಅರಮನೆ, ಗಜ, ಪ್ರೀತಿ ಯಾಕೆ ಭೂಮಿ ಮೇಲಿದೆ, ಮತಾಡ್ ಮತಾಡು ಮಲ್ಲಿಗೆ (ಚಿತ್ರವಿಮರ್ಶೆ), ಬಂಧು ಬಳಗ, ಪ್ರೀತಿ ನೀ ಹೇಗೇಕೆ?, ಜೊತೆಯಾಗಿ ಹಿತವಾಗಿ ಮುಂತಾದ ಚಲನಚಿತ್ರಗಳಲ್ಲಿ ನಟಿಸಿ ಮನೆ ಮಾತಾಗಿದ್ದಾರೆ. ಇವರ ಹೊಸ ಚಲನಚಿತ್ರ 'ಈ ಪ್ರೀತಿ'ಯ ಚಿತ್ರೀಕರಣ ಭರದಿಂದ ನಡೆಯುತ್ತಿದೆ. 'ಮಸಣದ ಮಕ್ಕಳು' ಚಿತ್ರದಲ್ಲಿನ ಅಭಿನಯಕ್ಕೆ ದಕ್ಷಿಣ ಭಾರತೀಯ ಚಲನಚಿತ್ರ ಪ್ರಶಸ್ತಿ ಹಾಗೂ ಕನ್ನಡ ಚಲನಚಿತ್ರ ನಿರ್ದೆಶಕರ ಪ್ರಶಸ್ತಿ ದೊರೆತಿದೆ.

ಕಾರ್ಯಕ್ರಮವು ಏಪ್ರಿಲ್ 29, ಶುಕ್ರವಾರ ಮಧ್ಯಾಹ್ನ 3ಕ್ಕೆ, ದುಬೈನ ಗಿಸೈಸ್ ನಲ್ಲಿರುವ ಪಿಲ್ಡೆಲ್ಫಿಯ ಖಾಸಗಿ ಇಂಗ್ಲಿಷ್ ಶಾಲೆಯ ಸಭಾಂಗಣದಲ್ಲಿ ನಡೆಯಲಿದೆ. ಖ್ಯಾತ ಚುಟುಕು ಕವಿ ಎಚ್ ದುಂಡಿರಾಜ್ ಅವರು ಸಮ್ಮೇಳನದ ಅಧ್ಯಕ್ಷತೆ ವಸಿರುತ್ತಿದ್ದಾರೆ. ಸಮಾರಂಭಕ್ಕೆ ಪ್ರವೇಶ ಉಚಿತವಾಗಿದ್ದು, ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿ ಕೊಂಡಿರುವರು.

English summary
Kannada actress Tejaswini Prakash of Savi Savi Nenapu and Matad Matadu Mallige fame will be performing in short poetry convention to be held in Dubai, UAE on April 29. Chutuku kavi H Dundiraj will be presiding over the convention.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X