ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ವನಿ ವಿಶ್ವ ನಾಟಕ ಹಾಗೂ ರಂಗ ಪ್ರಶಸ್ತಿ ಪ್ರಕಟ

By Prasad
|
Google Oneindia Kannada News

Dr. Jayaprakash Mavinakuli
ದುಬೈ, ಏ. 13 : ಧ್ವನಿ ಪ್ರತಿಷ್ಠಾನ ಬೆಳ್ಳಿ ಹಬ್ಬ ಆಚರಣೆಯ ಅಂಗವಾಗಿ ಅಯೋಜಿಸಿದ್ದ ಅಂತಾರಾಷ್ಟ್ರೀಯ ವಿಶ್ವ ಕನ್ನಡ ನಾಟಕ ರಚನಾ ಸ್ಪರ್ಧೆಯಲ್ಲಿ ಡಾ. ಜಯಪ್ರಕಾಶ್ ಮಾವಿನಕುಳಿಯವರ ನಾಟಕ "ಅಭಿಯಾನ" 'ರಜತ ಧ್ವನಿ ವಿಶ್ವ ನಾಟಕ' ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಶಸ್ತಿಯು ಇಪ್ಪತ್ತೈದು ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಹೊಂದಿದೆ.

ಡಾ.ಜಯಪ್ರಕಾಶ್ ಮಾವಿನಕುಳಿಯವರು ಪ್ರಸ್ತುತ ಕಾರ್ಕಳದ ಭುವನೇಂದ್ರ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ತರಾಗಿರುವರು. ಶ್ರೀಯುತರ ಇಪ್ಪತೈದಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿದ್ದು ಇವುಗಳಲ್ಲಿ ಆರು ನಾಟಕಗಳು ಸೇರಿವೆ. ನಾಟಕ ಅಕಾಡೆಮಿ ಪುಸ್ತಕ ಪ್ರಸಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರ ಸಾಹಿತ್ಯ ಕೃಷಿಗೆ ದೊರೆತಿವೆ.

ಧ್ವನಿ ಶ್ರೀರಂಗ ಪ್ರಶಸ್ತಿ : ಧ್ವನಿ ಕಳೆದ ಹಲವಾರು ವರ್ಷಗಳಿಂದ ನಾಟಕಗಾರ ಆದ್ಯ ರಂಗಾಚಾರ್ಯರ ನೆನಪಿನಲ್ಲಿ ಕನ್ನಡ ರಂಗಕರ್ಮಿಗಳಿಗೆ ನೀಡುತ್ತಾ ಬಂದಿರುವ ಅಂತಾರಾಷ್ಟ್ರೀಯ 'ಧ್ವನಿ ಶ್ರೀರಂಗ" ಪ್ರಶಸ್ತಿಗೆ ರಂಗಕರ್ಮಿ ಹಾಗೂ ಸಾಹಿತಿ ಡಾ. ನಾ. ದಾಮೋದರ ಶೆಟ್ಟಿ ಅವರು ಆಯ್ಕೆಗೊಂಡಿರುವರು. ಪ್ರಶಸ್ತಿಯು ಇಪತ್ತೈದು ಸಾವಿರ ರು. ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಡಾ. ನಾ. ದಾಮೋದರ ಶೆಟ್ಟಿಯವರ 'ರಂಗ ಶೋಧನೆ' ಕೃತಿ ಸೇರಿದಂತೆ ರಂಗಭೂಮಿಗೆ ಸಂಬಂಧಿಸಿದಂತೆ ನಾಲ್ಕು ನೂರಕ್ಕೂ ಹೆಚ್ಚು ಲೇಖನಗಳು ಪ್ರಕಟಗೊಂಡಿವೆ. ಇವರ ವಿವಿಧ ಸಾಹಿತ್ಯ ಪ್ರಕಾರಗಳನೊಳಗೊಂಡ ಇಪ್ಪತ್ತೆಂಟಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಮೂವತ್ತಾರು ವರ್ಷ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದು, ಚಲನಚಿತ್ರ, ಟಿವಿ ಧಾರವಾಹಿಗಳಲ್ಲೂ ಪ್ರಖ್ಯಾತ ನಿರ್ದೇಶಕರೊಂದಿಗೆ ಅಭಿನಯಿಸಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಕನ್ನಡ ಚುಟುಕು ಸಾಹಿತ್ಯ ಸಮ್ಮೇಳನದೊಂದಿಗೆ 29.04.2011ರಂದು ಶುಕ್ರವಾರ ಅಪರಾಹ್ನ ಮೂರು ಗಂಟೆಗೆ ದುಬೈಯ ಗುಸೈಸ್ ನಲ್ಲಿರುವ ಫಿಲ್ಡೆಲ್ಫಿಯ ಪ್ರೈವೆಟ್ ಸ್ಕೂಲ್ ನ ಸಭಾಂಗಣದಲ್ಲಿ ನೆರವೇರಿಸಲಾಗುವುದು. ಸಮಾರಂಭಕ್ಕೆ ಚುಟುಕು ಕವಿ ಡುಂಡಿರಾಜ್ ಅಧ್ಯಕ್ಷತೆ ವಹಿಸಲಿರುವರು. ಅನಿವಾಸಿ ಉದ್ಯಮಿ ಶ್ರೀನಿವಾಸ ಶ್ರೀರಂಗಂ ಸಮಾರಂಭವನ್ನು ಉಧ್ಘಾಟಿಸಲಿದ್ದಾರೆ.

ಯಾರ್ಯಾರು ಬರ್ತಿದ್ದಾರೆ : ಕರ್ನಾಟಕದ ಇಂಧನ ಸಚಿವೆ ಕುಮಾರಿ ಶೋಭಾ ಕರಂದ್ಲಾಜೆ, ರಂಗ ಹಾಗೂ ಚಲನಚಿತ್ರ ನಟಿ ಗಿರಿಜಾ ಲೋಕೇಶ್, ನವಿನ್ ಕುಮಾರ್ ಕಟೀಲ್, ಎಂ.ಪಿ., ಆನಿವಾಸಿ ಕನ್ನಡಿಗ ಫೋರಂನ ಉಪಾಧ್ಯಕ್ಷ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ನಟಿ ತೇಜಸ್ವಿನಿ ಪ್ರಕಾಶ್ ಅತಿಥಿಗಳಾಗಿ ಅಗಮಿಸಲಿರುವರು. ಸಮಾರಂಭಕ್ಕೆ ಪ್ರವೇಶ ಉಚಿತವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಯು.ಇ.ಎ. ಕನ್ನಡಿಗರು ಭಾಗವಹಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

English summary
Dhwani Pratishthana on the occasion of its silver jubilee celebration has announced two awards to Kannada theatre personalities from Karnataka. Dr Jayaprakash Mavinakuli for Dhwani Vishwa Nataka award and Dr Damodar Shetty for Dhwani Sriranga award. Congratulations to both.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X