ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏ.9ರಂದು ಮೆಲ್ಬರ್ನ್ ಕನ್ನಡ ಸಂಘದ ರಜತೋತ್ಸವ

By Prasad
|
Google Oneindia Kannada News

Kannada novelist SL Bhyrappa
ಇಪ್ಪತ್ತೈದು ವಸಂತಗಳನ್ನು ಪೂರೈಸಿರುವ ಮೆಲ್ಬರ್ನ್ ಕನ್ನಡ ಸಂಘ ಏಪ್ರಿಲ್ 9ರಂದು ರಜತೋತ್ಸವವನ್ನು ಅತ್ಯಂತ ಸಂಭ್ರಮದಿಂದ ಆಚರಿಸುತ್ತಿದೆ. ಈ ಸಂಭ್ರಮ ಇಡೀ ದಿನ ನಡೆಯಲಿದ್ದು ಖ್ಯಾತ ಸಾಹಿತಿ ಎಸ್ಎಲ್ ಭೈರಪ್ಪ, ಮುಖ್ಯಮಂತ್ರಿ ಚಂದ್ರು, ಗಣೇಶ್ ಕಾರ್ನಿಕ್ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

25 ವಸಂತಗಳನ್ನು ಕಂಡ ಮೆಲ್ಬರ್ನ್ ಕನ್ನಡ ಸಂಘದ ಇತಿಹಾಸದಲ್ಲಿ ಇದೊಂದು ಹೊಸ ಮೈಲಿಗಲ್ಲು. ಮೆಲ್ಬರ್ನಿನ ಸ್ಪ್ರಿಂಗ್ ವೇಲ್ ನಲ್ಲಿರುವ ಸ್ಪ್ರಿಂಗ್ ವೇಲ್ ಟೌನ್ ಹಾಲ್ ನಲ್ಲಿ ಈ ಕಾರ್ಯಕ್ರಮವನ್ನು ನಡೆಸಲಿದ್ದು, ಸಂಘವು ಇಡೀ ದಿನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಘದ ಅಧ್ಯಕ್ಷೆ ಉಮಾ ಪಾಟೀಲ್ ಹಾಗು ರಜತೋತ್ಸವ ಆಚರಣೆಯ ಅಧ್ಯಕ್ಷರಾದ ಡಾ. ಹನುಮಂತ ರೆಡ್ಡಿಯವರ ಮೇಲ್ವಿಚಾರಣೆಯಲ್ಲಿ ಸಿದ್ಧತೆ ನಡೆದಿದೆ.

ಕನ್ನಡ ಪ್ರಾಧಿಕಾರದ ಅಧ್ಯಕ್ಷರಾದ ಡಾ. 'ಮುಖ್ಯಮಂತ್ರಿ' ಚಂದ್ರು, ಖ್ಯಾತ ಸಾಹಿತಿ ಡಾ. ಎಸ್.ಎಲ್. ಭ್ಯೆರಪ್ಪ, ಪ್ರಣಯರಾಜ ಡಾ. ಶ್ರೀನಾಥ್, ಅನಿವಾಸಿ ಭಾರತೀಯ ಸಮಿತಿಯ ಉಪಾಧ್ಯಕ್ಷರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಹಾಗೂ ಇತರರು ಈ ರಜತೋತ್ಸವಕ್ಕೆ ಅತಿಥಿಗಳಾಗಿ ಆಗಮಿಸಲಿದ್ದು, ವಿಶೇಷ ಅತಿಥಿಗಳಾಗಿ ಸ್ಥಳೀಯ ವಿಕ್ಟೋರಿಯಾದ Planning Minister, Matthew Guy, State Member for South Eastern Metropolitan Region, Inga Peulich, MLC ಮತ್ತು City of Greater Dandenong ಮೇಯರ್ Cr. Roz Blades ರವರು ಪಾಲ್ಗೊಳ್ಳಲಿದ್ದಾರೆ.

ಮೆಲ್ಬರ್ನಿನ ಕನ್ನಡಿಗರಿಗೆ ಸಂಗೀತದ ರಸದೌತಣ ಉಣಿಸಲು ಖ್ಯಾತ ಹಿನ್ನೆಲೆ ಗಾಯಕರಾದ ಜೈಹೋ ಖ್ಯಾತಿಯ ವಿಜಯ್ ಪ್ರಕಾಶ್, ಅರ್ಚನಾ ಉಡುಪ ಮತ್ತು ತಂಡದವರು ಸಹ ಆಗಮಿಸಲಿದ್ದಾರೆ. ಮತ್ತು ಮೆಲ್ಬರ್ನಿನ ಸ್ಥಳೀಯ ಕನ್ನಡ ಕಲಾವಿದರುಗಳು ಸಹ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಲಿದ್ದಾರೆ.

ಕಾರ್ಯಕ್ರಮದ ವಿಶೇಷಗಳು

* ಡಾ. ಎಸ್ಎಲ್ ಭೈರಪ್ಪರವರ ಜೊತೆ ಸಾಹಿತ್ಯ ಸಂವಾದ.
* ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರ ಜೊತೆ ಪರಸ್ಪರ ಮಾತುಕತೆ.
* ರಜತೋತ್ಸವದ ಸ್ಮರಣ ಸಂಚಿಕೆ ಬಿಡುಗಡೆ
* ಅತಿಥಿಗಳೊಂದಿಗೆ ಸಂವಾದ
* ಮೆಲ್ಬರ್ನಿನ ಸ್ಥಳೀಯ ಕನ್ನಡ ಕಲಾವಿದರ ಕಾರ್ಯಕ್ರಮ
* ಮೆಲ್ಬರ್ನ್ ಕನ್ನಡ ಸಂಘದ ಗ್ರಂಥಾಲಯದಿಂದ ನೆನಪಿನ ಕಾಣಿಕೆಯಾಗಿ ಕನ್ನಡ ಪುಸ್ತಕ
* ಕನ್ನಡ ಗ್ರಂಥಾಲಯದ ಪುಸ್ತಕಗಳ ಪ್ರದರ್ಶನ

ಈ ರಜತೊತ್ಸವದಲ್ಲಿ ಭಾಗವಹಿಸುವವರಿಗೆ ನೊಂದಣಿ ಮತ್ತು ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು www.mks.org.au ಪ್ರಕಟಿಸಲಾಗಿದೆ.

English summary
Melbourne Kannada Sangha is getting ready to celebrate 25th year of its existance. Kannada novelist SL Bhyrappa, actor Srinath, Mukhyamantri Chandru, Capt Ganesh Karnic are gracing the Silver Jubilee celebrations on April 9, 2011.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X