ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಸಂತ ಸಾಹಿತ್ಯೋತ್ಸವ : ಗಿರಡ್ಡಿ ಬದಲು ನಾಡಿಗ

By Prasad
|
Google Oneindia Kannada News

ಅಮೆರಿಕದ ಸಾನ್ ಫ್ರಾನ್ಸಿಸ್ಕೋ ಬಳಿಯ ವುಡ್‌ಸೈಡ್ ನಲ್ಲಿ ಇದೇ ಏಪ್ರಿಲ್ 30-ಮೇ 1ರಂದು ನಡೆಯುತ್ತಿರುವ ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವಕ್ಕೆ ಎಲ್ಲರಿಗೂ ಸುಸ್ವಾಗತ! ಈ ಸಮ್ಮೇಳನದ ಒಂದು ಮುಖ್ಯ ವಿವರದಲ್ಲಿ ಆಗಿರುವ ಮಾರ್ಪಾಡನ್ನು ಇಲ್ಲಿ ತಿಳಿಸಬಯಸುತ್ತೇವೆ.

ಈ ಸಮ್ಮೇಳನಕ್ಕೆ ಡಾ. ಗಿರಡ್ಡಿ ಗೋವಿಂದರಾಜರನ್ನು ಮುಖ್ಯ ಅತಿಥಿಯಾಗಿ ಬರಲು ಆಹ್ವಾನಿಸಿದ್ದೆವು. ಅವರು ನಮ್ಮ ಆಹ್ವಾನವನ್ನು ಮನ್ನಿಸಿ ಬರಲು ಒಪ್ಪಿದ್ದರು. ಆದರೆ ಕಾರಣಾಂತರಗಳಿಂದ ಅವರು ಬರಲು ಸಾಧ್ಯವಾಗುತ್ತಿಲ್ಲ. ಅವರ ಸ್ಥಾನದಲ್ಲಿ ಕನ್ನಡದ ಖ್ಯಾತ ಕವಿ, ವಿಮರ್ಶಕರಲ್ಲೊಬ್ಬರಾದ ಡಾ. ಸುಮತೀಂದ್ರ ನಾಡಿಗರು ಮುಖ್ಯ ಅತಿಥಿಯಾಗಿ ಬರುತ್ತಿದ್ದಾರೆ. ಕನ್ನಡ ಸಾಹಿತ್ಯಾಭಿಮಾನಿಗಳು ದಯವಿಟ್ಟು ಈ ಬದಲಾವಣೆಯನ್ನು ಗಮನಿಸಬೇಕು ಎಂದು ಕೇಳಿಕೊಳ್ಳುತ್ತೇವೆ. ಡಾ. ನಾಡಿಗರು ಕನ್ನಡ ಸಾಹಿತ್ಯದಲ್ಲಿ 'ಪ್ರಬಂಧ ಪ್ರಕಾರ' ಎಂಬ ಬಗ್ಗೆ ತಮ್ಮ ಮುಖ್ಯ ಭಾಷಣ ಮಂಡಿಸಲಿದ್ದಾರೆ. ಈ ಸಂದರ್ಭದಲ್ಲಿ ಅಮೆರಿಕದ ಕನ್ನಡ ಲೇಖಕರೇ ಬರೆದ 'ಮಥಿಸಿದಷ್ಟೂ ಮಾತು' ಎಂಬ ಪ್ರಬಂಧ ಸಂಕಲವನ್ನೂ ಅವರು ಬಿಡುಗಡೆ ಮಾಡುತ್ತಿದ್ದಾರೆ.

ಸಮ್ಮೇಳನದ ನೋಂದಣಿ, ಪ್ರಯಾಣ, ವಸತಿ ಇತ್ಯಾದಿ ವಿವರಗಳನ್ನು ಕನ್ನಡ ಸಾಹಿತ್ಯ ರಂಗದ ಅಂತರ್ಜಾಲ ತಾಣ www.kannadasahityaranga.orgನಲ್ಲಿ ಅಥವ ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ತಾಣ www.kknc.orgನಲ್ಲಿ ಪಡೆಯಬಹುದು. ದಯವಿಟ್ಟು ಆ ತಾಣಗಳಿಗೆ ಇಂದೇ ಭೇಟಿ ಕೊಡಿ. ಹೊಟೇಲ್ ವಸತಿ ಅಪೇಕ್ಷಿಸುವವರು ಈ ತಿಂಗಳು 30ನೇ ತಾರೀಖಿನೊಳಗೆ ತಮ್ಮ ವಸತಿಯನ್ನು ಕಾದಿರಿಸಿದರೆ ರಿಯಾಯಿತಿ ದರ ಪಡೆಯಬಹುದು.

ಹೆಚ್ಚಿನ ವಿವರಗಳಿಗೆ ಡಾ. ಎಚ್.ವೈ. ರಾಜಗೋಪಾಲ್ ಅವರನ್ನು ಸಂಪರ್ಕ ಮಾಡಬಹುದು ([email protected])

English summary
Kannada sahitya ranga is conducting 5th Vasanta Sahityotsava in America from April 30 to May 1, 2011 in San Francisco. Kannada poet Dr Sumatheendara Nadig and humor writer Bhuvaneshwari Hegde are attending as guests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X