ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐದನೇ ವಸಂತ ಸಾಹಿತ್ಯೋತ್ಸವಕ್ಕೆ ಭರದ ಸಿದ್ಧತೆ

By Prasad
|
Google Oneindia Kannada News

5th Vasanta Sahityotsava
ಸಾನ್ ಫ್ರಾನ್ಸಿಸ್ಕೋಗೆ ಸುಮಾರು 30 ಮೈಲಿ ದಕ್ಷಿಣದಲ್ಲಿರುವ ವುಡ್‌ಸೈಡ್ ಎಂಬ ಊರಿನ ವುಡ್‌ಸೈಡ್ ಹೈಸ್ಕೂಲ್‌ನ ಸುಂದರ ನಿವೇಶನದಲ್ಲಿ ಏಪ್ರಿಲ್ 30 ಮತ್ತು ಮೇ 1ರಂದು ನಡೆಯಲಿರುವ ಐದನೇ ವಸಂತ ಸಾಹಿತ್ಯೋತ್ಸವಕ್ಕೆ ಕನ್ನಡ ಸಾಹಿತ್ಯ ರಂಗ ಸರ್ವಸಿದ್ಧತೆ ಮಾಡಿಕೊಳ್ಳುತ್ತಲಿದೆ.

ಅಮೆರಿಕಾದ ಸಾಹಿತ್ಯ ಪ್ರೇಮಿಗಳಿಗೆ ರಸದೌತಣ ನೀಡಲಿದೆ. ಕನ್ನಡ ಸಾಹಿತ್ಯ ರಂಗ ತನ್ನ ಐದನೆಯ ಪ್ರಕಟಣೆಯನ್ನು ಲೋಕಾರ್ಪಣೆ ಮಾಡುತ್ತಿದೆ. ನಮ್ಮ ಹೆಮ್ಮೆಯ ಬರಹಗಾರರು ಎಂಬ ಕಾರ್ಯಕ್ರಮದಡಿ ಅಮೆರಿಕಾದ ಬರಹಗಾರರು ಮತ್ತು ಅವರ ಕೃತಿಗಳನ್ನು ಪರಿಚಯ ಮಾಡಿಕೊಡುವ ಯತ್ನಕ್ಕೆ ಕನ್ನಡ ಸಾಹಿತ್ಯ ರಂಗ ಮುಂದಾಗಿದೆ.

ಸಾಹಿತ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಖ್ಯಾತ ಸಾಹಿತಿ ಸುಮತೀಂದ್ರ ನಾಡಿಗ್ ಅವರು ಬರುತ್ತಿದ್ದಾರೆ. ಅಲ್ಲದೆ ಕನ್ನಡದ ಅತ್ಯುತ್ತಮ ಹಾಸ್ಯ ಸಾಹಿತಿಗಳಲ್ಲೊಬ್ಬರಾದ ಭುವನೇಶ್ವರಿ ಹೆಗಡೆ ಅವರು ವಿಶೇಷ ಅತಿಥಿಯಾಗಿ ಬರುತ್ತಿದ್ದಾರೆ.

ಕಾರ್ಯಕ್ರಮದ ವಿಶೇಷಗಳು

* ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಮೌಖಿಕ ಭಾಷಣ.
* ಕನ್ನಡ ಸಾಹಿತ್ಯ ರಂಗದ 5ನೇ ಪ್ರಕಟಣೆ (ಪ್ರಬಂಧ ಸಂಕಲನ) ಮತ್ತು ಇತರ ಪುಸ್ತಕಗಳ ಲೋಕಾರ್ಪಣೆ.
* ಕವಿಗೋಷ್ಠಿ ಮತ್ತು ಸಾಹಿತ್ಯಗೋಷ್ಠಿಗಳು
* ಅತಿಥಿಗಳೊಂದಿಗೆ ಸಂವಾದ
* ಕನ್ನಡ ಕಲಿಯುತ್ತಿರುವ ಮಕ್ಕಳಿಂದ ಕಾರ್ಯಕ್ರಮ
* ಅಮೆರಿಕಾದ ಬರಹಗಾರರ ಇತ್ತೀಚಿನ ಕೃತಿಗಳ ಪರಿಚಯ
* ಪುಸ್ತಕಗಳ ಮಾರಾಟ

ಈ ಸಾಹಿತ್ಯ ಸಂಭ್ರಮದಲ್ಲಿ ಭಾಗವಹಿಸುವವರಿಗೆ ನೊಂದಣಿ ಮತ್ತು ಕಾರ್ಯಕ್ರಮದ ಸಂಪೂರ್ಣ ವಿವರಗಳನ್ನು ಸದ್ಯದಲ್ಲೇ ಪ್ರಕಟಿಸಲಾಗುವುದೆಂದು ಕನ್ನಡ ಸಾಹಿತ್ಯ ರಂಗದ ಸಂಘಟಕರು ಹೇಳಿದ್ದಾರೆ.

ಸಂಪರ್ಕಿಸಿ : ಎಚ್.ವೈ.ರಾಜಗೋಪಾಲ್ ([email protected]); ವಲ್ಲೀಶ ಶಾಸ್ತ್ರಿ ([email protected]); ಅಲಮೇಲು ಐಯಂಗಾರ್ ([email protected]); ಪದ್ಮಾ ರಾವ್ ([email protected]); ವಿಶ್ವನಾಥ ಹುಲಿಕಲ್ ([email protected])

English summary
Kannada sahitya ranga is conducting 5th Vasanta Sahityotsava in America from April 30 to May 1, 2011. Kannada laureate Sumatindra Nadig and humor writer Bhuvaneshwari Hegde are attending as guests.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X