ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಕನ್ನಡ ಕಲಿ ದಿನ

By * ವಿಶ್ವೇಶ್ವರ ದೀಕ್ಷಿತ
|
Google Oneindia Kannada News

Kannada Kali children
ಕಳೆದ ವರ್ಷ ತಾನೆ ತನ್ನ ಹತ್ತು ವರ್ಷದ ಹುಟ್ಟು ಹಬ್ಬವನ್ನು ಆಚರಿಸಿ ಸಂಭ್ರಮಿಸಿದ ಕನ್ನಡ ಕಲಿ, ಮತ್ತೆ ವಾಷಿಕೋತ್ಸವಕ್ಕೆ ಸಿದ್ಧವಾಗಿದೆ. ದಕ್ಷಿಣ ಕ್ಯಾಲಿಫೊರ್ನಿಯಾದ ನಾಲ್ಕು ದಿಕ್ಕುಗಳಲ್ಲಿ ಹರಡಿಕೊಂಡಿರುವ ನಾಲ್ಕು ಕನ್ನಡ ಕಲಿ ಅಧ್ಯಾಯಗಳು ಸೇರಿ ಕನ್ನಡ ಕಲಿ ದಿನವನ್ನು ಮಾರ್ಚ್ 26, ಶನಿವಾರದಂದು ವ್ಯಾಲಿ ವ್ಯೂ ಮಿಡಲ್ ಸ್ಕೂಲ್, ಸಿಮಿ ವ್ಯಾಲಿಯಲ್ಲಿ ಆಚರಿಸುತ್ತಿವೆ. ಈ ವರ್ಷ 100ಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ!

ಕನ್ನಡ ಕಲಿ ತರಗತಿಗಳಲ್ಲಿ, ಕನ್ನಡ ನುಡಿ, ಕರ್ನಾಟಕ, ಮತ್ತು ಕನ್ನಡ ಸಂಸ್ಕೃತಿಗಳನ್ನು ನಿಯತವಾಗಿ ಅಭ್ಯಸಿಸುತ್ತಿರುವ ವಿದ್ಯಾರ್ಥಿಗಳಿಗೆ ಒಂದೆಡೆ ಸೇರಿ ತಮ್ಮ ಸಾಧನೆಗಳೊಂದಿಗೆ ಜ್ಞಾನ ಪ್ರತಿಭೆಗಳನ್ನು ಪ್ರದರ್ಶಿಸಲು ಸುವರ್ಣಾವಕಾಶ; ಕನ್ನಡ ಕುಡಿಗಳನ್ನು ಬೆಳೆಸಿದ ತಂದೆ ತಾಯಿಗಳಿಗೆ ಇದೊಂದು ಹೆಮ್ಮೆಯ ಗಳಿಗೆ. ನಿಸ್ವಾರ್ಥದಿಂದ ವರ್ಷವಿಡೀ ದುಡಿದ ಕನ್ನಡ ಕಲಿಯ ಶಿಕ್ಷಕರಿಗೆ ಮತ್ತು ಸ್ವಯಂಸೇವಕರಿಗೆ ಕೃತಕೃತ್ಯತೆಯ ದಿನ. ಹತ್ತು ವರ್ಷಗಳಿಂದ ಕನ್ನಡ ತರಗತಿಗಳನ್ನು ನಡೆಸುತ್ತ ಈ ವರ್ಷ 101 ವಿದ್ಯಾರ್ಥಿಗಳನ್ನು ಹೊಂದಿದ ಕನ್ನಡ ಕಲಿಗೆ ಇದೊಂದು ದಾಖಲೆ ದಿನ. ಅಂತೂ ಎಲ್ಲ ಕನ್ನಡಿಗರಿಗೂ ಗೆಲುವಿನ ದಿನ.

ಎಲ್ಲ ವಿದ್ಯಾರ್ಥಿಗಳು ಸ್ವರದುಂಬಿಯಿಂದ ಜಾಣ-ಪ್ರವೀಣ ಹಂತಗಳವರಗೂ ವಾರ್ಷಿಕ ಪರೀಕ್ಷೆಗಳನ್ನು, ಮೌಖಿಕ ಮತ್ತು ಲಿಖಿತ ರೂಪದಲ್ಲಿ, ತೆಗೆದುಕೊಳ್ಳುತ್ತಿದ್ದಾರೆ. ಕನ್ನಡ ಕಲಿ ಮತ್ತು ಹೈಸ್ಕೂಲುಗಳಿಂದ ಹೊರಬಿದ್ದು ತಮ್ಮ ಮುಂದಿನ ಅಭ್ಯಾಸಕ್ಕಾಗಿ ಆರು ವಿದ್ಯಾರ್ಥಿಗಳು ಕಾಲೇಜು ಸೇರುತ್ತಿದ್ದಾರೆ. ಇವರಿಗಾಗಿ ಪದವಿ ಪ್ರದಾನ ಸಮಾರಂಭವೂ ಇಲ್ಲಿದೆ. ತಮ್ಮ ಪ್ರಶಸ್ತಿ ಸ್ವೀಕಾರ ಭಾಷಣಗಳನ್ನು ಇವರು ಕನ್ನಡದಲ್ಲೇ ನೀಡಬೇಕಾದುದು ವಿಶೇಷ. ತಂದೆತಾಯಿಗಳನ್ನು ಅಭಿನಂದಿಸುತ್ತ, ಶಿಕ್ಷಕರಿಗೆ ನಮ್ಮ ಗೌರವ ತೋರಿಸುತ್ತ, ಎಲ್ಲ ಕನ್ನಡಿಗರಲ್ಲೂ ಅಭಿಮಾನ ಉಕ್ಕಿಸುವ ಈ ವಿದ್ಯಾರ್ಥಿಗಳಿಗ ಶುಭ ಕೋರುವ.

ದಿನ : ಶನಿವಾರ ಮಾರ್ಚ್ 26, 2011, ಮಧಾಹ್ನ 12ರಿಂದ
ಸ್ಥಳ : ವ್ಯಾಲಿ ವ್ಯೂ ಮಿಡಲ್ ಸ್ಕೂಲ್, 3347 ತಾಪೊ ಸ್ಟ್ರೀಟ್, ಸಿಮಿ ವ್ಯಾಲಿ, ಕ್ಯಾ. 93063.

ಹೆಚ್ಚಿನ ಮಾಹಿತಿಗಾಗಿ http://www.kannadakali.com ನೋಡಿರಿ; [email protected]ಗೆ ಈಮೇಲ್ ಕಳಿಸಿ.

English summary
Kannada Kali, a school for teaching Kannada language to the children in South California, is celebrating annual day on March 26, 2011. Here the children talk, smile, laugh, breath in Kannada. A report by Vishweshwar Dixit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X