ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುರೋಪ್ ಸಮ್ಮೇಳನಕ್ಕೆ ರೂಪ ಕನ್ನಡ ಪ್ರತಿನಿಧಿ

By * ಚಿನ್ಮಯ.ಎಂ.ರಾವ್, ಹೊನಗೋಡು
|
Google Oneindia Kannada News

Roopa Iyer ,Karnataka representative, VKS, Europe 2011
ಸಂಗಮ ಸಂಸ್ಥೆ ವಿಶ್ವ ಕನ್ನಡ ಸಮ್ಮೇಳನವನ್ನು ಮಾಡಲು ಕುಮಾರ್ ಮುಂದಾಗಿದೆ. ಅದು ಎಲ್ಲಿ? ಎಂದು ಕೇಳಿದರೆ ಪ್ರತಿಯೊಬ್ಬ ಕನ್ನಡಿಗರಿಗೂ ಹೆಮ್ಮೆಯಾಗುತ್ತದೆ, ಶತ ಶತಮಾನಗಳ ಕಾಲ ನಮ್ಮನ್ನು ಆಳಿ, ನಮ್ಮವರನ್ನು ಅಳಿಸಿ, ನಮ್ಮ ನಾಡನ್ನು ಅಳಿವಿನಂಚಿಗೆ ತಳ್ಳಿ ಕೊನೆಗೊಮ್ಮೆ ಇಲ್ಲಿ ತಮಗೆ ಉಳಿಗಾಲವಿಲ್ಲವೆಂದು ಅಳಿದುಳಿದದ್ದನ್ನೂ ಎತ್ತಿಕೊಂಡು ಕಾಲ್ಕಿತ್ತಿದ್ದ ಬ್ರಿಟಿಷರ ನಾಡಿನಲ್ಲಿ...ಹೌದು..ಇಂಥ ಒಂದು ಸಾಹಸಕ್ಕೆ ಕೈ ಹಾಕಿದ್ದಾರೆ ಲಂಡನ್ ನಿವಾಸಿ ಕನ್ನಡಿಗ ಕುಮಾರ್. ವಿಶ್ವ ಕನ್ನಡ ಸಮ್ಮೇಳನವನ್ನು ಯುರೋಪ್ ರಾಷ್ಟ್ರಗಳಲ್ಲಿ ಆಯೋಜಿಸಬೇಕೆಂಬ ಅವರ ಈ ಯೋಜನೆ ಬಹುವರುಷಗಳ ಕನಸು.

ಈಗ ನನಸಾಗಿಸಲು ಅವರಿಗೆ ಜೊತೆಯಾಗಿದ್ದಾರೆ ಅವರ ಕನ್ನದ ಮಿತ್ರರಾದ (ಕನ್ನಡ ಭಾಷೆಯಿಂದ ಮಿತ್ರರಾದವರು) ಸಂಪತ್ ಯಾದವಾಡ್ ಮತು ಶರತ್ ಆಯ್ಯರ್. ಕನ್ನಡದ ಸೇವೆಗಾಗಿಯೆ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿರುವ ನಿವೃತ್ತ ಕನ್ನಡ ಅಧ್ಯಾಪಕ, ಲೇಖಕ, ಕವಿ ಹಾಗೂ ಬಹುಮುಖ ಪ್ರತಿಭೆ ಕಾಸರಗೋಡು ಸಮೀಪದ ಕುಂಟಿಕಾನಮಠ ಬಾಲಕೃಷ್ಣ ಭಟ್ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಇನ್ನೊಂದು ವಿಶೇಷವೆಂದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಮಾಜಸೇವೆಯನ್ನು ಪ್ರಾಮಾಣಿಕವಾಗಿ ಮಾಡುತ್ತಿರುವ ಅದರಲ್ಲೂ ಏಡ್ಸ್ ಪೀಡಿತರ ದನಿಯಾಗಿರುವ "ಮುಖಪುಟ-ದ ಕವರ್ ಪೇಜ್ ಚಿತ್ರದ ನಟಿ, ನಿರ್ದೇಶಕಿ ಹಾಗೂ ಭರತನಾಟ್ಯ ಕಲಾವಿದೆ ರೂಪಾ ಅಯ್ಯರ್ ಅವರು ಈ ಸಮ್ಮೇಳನಕ್ಕೆ ಕರ್ನಾಟಕದ ಪ್ರತಿನಿಧಿಯಾಗಿ ನೇಮಕಗೊಂಡಿದ್ದಾರೆ. ಕನ್ನಡಿಗರನ್ನು ಒಗ್ಗೂಡಿಸಿಕೊಂಡು ಹೋಗುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ವಿಶ್ವ ಕನ್ನಡ ಸಮ್ಮೇಳನ ಯುರೋಪ್ -2011 ಅನ್ನು ಲಂಡನ್ ನಗರದಲ್ಲಿ ಈ ವರುಷದ ಆಗಸ್ಟ್ 27, 28ರಂದು "ಸಂಗಮ ಸಂಸ್ಥೆ" ವತಿಯಿಂದ ನಡೆಸಲು ಈಗಾಗಲೇ ಇವರೆಲ್ಲಾ ಕಾರ್ಯೋನ್ಮುಖರಾಗಿದ್ದಾರೆ.

ಲಂಡನ್ ನಿವಾಸಿ ಕುಮಾರ್ ಅವರಿಗೆ ಅವರ ಪ್ರೌಢಶಾಲಾ ಸಹಪಾಠಿ ಗೆಳೆಯ ಸಂಸದ ಬಿವೈ ರಾಘವೇಂದ್ರ ಸಹಕರಿಸುತ್ತಿರುವುದು ಸಂಗಮದ ಕನ್ನಡ ಮಿತ್ರರಿಗೆ ಆನೆಬಲ ಬಂದಂತಾಗಿದೆ. ಈ ಮಧ್ಯೆ ನಾಡಿನ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ತಾವು ಕೂಡಾ ಈ ಸಮ್ಮೇಳನಕ್ಕೆ ಹಾಜರಾಗುವುದಾಗಿ ಭರವಸೆ ನೀಡಿದ್ದಾರೆ. ತಮ್ಮತಮ್ಮ ಕೆಲಸದೊತ್ತಡದ ನಡುವೆಯೂ ಕನ್ನಡ ಸೇವೆಗೆ ಕಂಕಣ ತೊಟ್ಟಿರುವ ಸಾಗರದಾಚೆಯ ಕನ್ನಡ ಅಭಿಮಾನಿಗಳು ಮೊಳಗಿಸುವ ಕನ್ನಡ ಕಹಳೆ ಕನ್ನಡಿಗರನ್ನು ಎಚ್ಚರಿಸಲಿ, ಕನ್ನಡ ನಾಡು, ನುಡಿ ಅಮರವಾಗಲಿ

ಈ ವಿಶ್ವ ಕನ್ನಡ ಸಮ್ಮೇಳನದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: [email protected]

English summary
People of Karnataka origin, settled in Europe organizing Vishwa Kannada Sammelana in London during August 2011. Actress, director Roopa Iyer is chosen to represent Karnataka at the World Kannada Convention which is mooted to bring all Kannada speaking community in European Countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X