• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಾಷಿಂಗ್ಟನಿನಲ್ಲಿ ನೋಡವ್ವ ತಂಗಿ ಕೋಡಗನ ಕೋಳಿ ನುಂಗಿತ್ತಾ

By ಅಕ್ಷರ : ಶ್ರೀವತ್ಸ ಜೋಶಿ; ಚಿತ್ರ: ಹರಿದಾಸ್ ಲ
|

ವಾಷಿಂಗ್ಟನ್, ಮಾ. 5 : ಬಣ್ಣದ ಲುಂಗಿಯ ಉಡುಗೆ. ಕೈಯಲ್ಲೊಂದು ಗಿಟಾರ್. ಜತೆಯಲ್ಲಿನ ಮೂವರು ಸಹಕಲಾವಿದರದೂ ಅದೇ ವೇಷಭೂಷಣ. ಕನ್ನಡದ ಹೆಮ್ಮೆಯ ಹುಡುಗ ರಘು ದೀಕ್ಷಿತ್ ಶಿಶುನಾಳ ಶರೀಫರ ಪದವನ್ನು ಕುಣಿಕುಣಿದಾಡುತ್ತಲೇ ಹಾಡಿದಾಗ ಕೆನಡಿ ಸೆಂಟರ್‌ನ ಮಿಲೆನಿಯಂ ಸಭಾಂಗಣ ಅಕ್ಷರಶಃ ಹುಚ್ಚೆದ್ದು ಕುಣಿಯಿತು. ಪ್ರಪಂಚದ ಘಟಾನುಘಟಿ ಕಲಾವಿದರ ಅಪ್ರತಿಮ ಕಲಾಪ್ರದರ್ಶನಗಳಿಗೆ ಸಾಕ್ಷಿಯಾಗಿರುವ ಇಲ್ಲಿನ ಕೆನಡಿ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್'ನಲ್ಲಿ ಪ್ರಾಯಶಃ ಕನ್ನಡದ ಧ್ವನಿ ಮೊಳಗಿದ್ದು ಇದೇ ಮೊದಲು.

ಮಾರ್ಚ್ 1ರಿಂದ 20ರವರೆಗೆ ಕೆನಡಿ ಸೆಂಟರ್‌ನಲ್ಲಿ ನಡೆಯುತ್ತಿರುವ ಮ್ಯಾಕ್ಸಿಮಮ್ ಇಂಡಿಯಾ' ಸಾಂಸ್ಕೃತಿಕ ಹಬ್ಬದಲ್ಲಿ ಶುಕ್ರವಾರ (ಮಾರ್ಚ್ 4) ಸಂಜೆಯ ಪ್ರಧಾನ ಆಕರ್ಷಣೆ ರಘು ದೀಕ್ಷಿತ್ ಬಳಗದ ಸಂಗೀತ ಕಾರ್ಯಕ್ರಮ. ಬ್ಲೂಸ್, ರಾಕ್, ಸೂಫಿ, ಭಾಂಗ್ರಾ, ಲ್ಯಾಟಿನ್, ಕರ್ನಾಟಿಕ್ ಹೀಗೆ ಗಾಯನಕಲೆಯಲ್ಲೇ ಗ್ಲೋಬಲ್ ಟಚ್ ತೋರಿಸಬಲ್ಲ ರಘು ದೀಕ್ಷಿತ್ ಕಾರ್ಯಕ್ರಮಕ್ಕೆ ಸಭಾಂಗಣ ಹೌಸ್‌ಫುಲ್. ಕನ್ನಡಿಗರು ಮತ್ತು ಭಾರತೀಯರಷ್ಟೇ ಅಲ್ಲದೇ ಕಲಾರಸಿಕ ಅಮೆರಿಕನ್ ಪ್ರಜೆಗಳೂ ಬಹಳ ಸಂಖ್ಯೆಯಲ್ಲಿ ಬಂದಿದ್ದರು.

ಒಟ್ಟು ಒಂದು ಗಂಟೆ ಅವಧಿಯ ಕಾರ್ಯಕ್ರಮದಲ್ಲಿ ರಘು ದೀಕ್ಷಿತ್ ಹಿಂದಿ ಮತ್ತು ಇಂಗ್ಲಿಷ್ ಹಾಡುಗಳ ಜತೆಗೇ ದ ನೆಕ್ಸ್ಟ್ ಸಾಂಗ್ ಇಸ್ ಇನ್ ಮೈ ಮದರ್‌ಟಂಗ್ ಕನ್ನಡ' ಎಂದು ಉದ್ಘೋಷಿಸಿ, ಶಿಶುನಾಳ ಶರೀಫರ ಪದಗಳ ಶ್ರೇಷ್ಠತೆಯನ್ನು ಚುಟುಕಾಗಿ ವಿವರಿಸಿ, ಗುಡುಗುಡಿಯ ಸೇದಿ ನೋಡೊ' ಮತ್ತು ಕೋಡಗನ ಕೋಳಿ ನುಂಗಿತ್ತಾ' ಹಾಡಿದರು. ಇಲ್ಲಿ ಹಾಡಲು ಬಂದ ಪಾತರದವಳ ಮದ್ದಳೆ ನುಂಗಿತು ಎಂದಾಗಲಿಲ್ಲ. ಹಾಡಲು ಬಂದ ರಘು ದೀಕ್ಷಿತ್‌ನನ್ನು ವಾಷಿಂಗ್ಟನ್ನಿಗರ ಚಪ್ಪಾಳೆಯ ಹರ್ಷೋದ್ಗಾರವೇ ನುಂಗಿತು ಎನ್ನುವಂತಾಯ್ತು.

ಮ್ಯಾಕ್ಸಿಮಮ್ ಇಂಡಿಯಾ' ಉತ್ಸವದಲ್ಲಿ ಭಾರತದಿಂದ ವಿಶೇಷವಾಗಿ ಆಹ್ವಾನಿತರಾಗಿ ಬಂದಿರುವ ನೂರಾರು ಕಲಾವಿದರು ವಿವಿಧ ನೃತ್ಯ, ಸಂಗೀತ, ನಾಟಕ, ಮತ್ತಿತರ ಕಲಾಪ್ರದರ್ಶನಗಳನ್ನು ನೀಡುತ್ತಿದ್ದಾರೆ. ವಜ್ರ ಮತ್ತು ಚಿನ್ನದ ಆಭರಣಗಳು, ರೇಷ್ಮೆಸೀರೆಗಳು ಮತ್ತು ಕರಕುಶಲ ಸಾಮಗ್ರಿಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳಿವೆ. ಉತ್ಸವಕ್ಕಾಗಿಯೇ ಭಾರತದಿಂದ ಬಂದಿರುವ ಪಂಚತಾರಾ ಬಾಣಸಿಗ ಹೇಮಂತ್ ಒಬೆರಾಯ್ ಇಲ್ಲಿನವರಿಗೆ ಭಾರತೀಯ ಖಾದ್ಯಗಳ ಸವಿಯುಣ್ಣಿಸುತ್ತಿದ್ದಾರೆ.

ದಿಲ್ಲಿಯ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ಸ್ ಮತ್ತು ವಾಷಿಂಗ್ಟನ್‌ನಲ್ಲಿರುವ ಭಾರತೀಯ ದೂತಾವಾಸಗಳ ಸಹಯೋಗದಲ್ಲಿ ನಡೆಯುತ್ತಿರುವ ಈ ಸಾಂಸ್ಕೃತಿಕ ಉತ್ಸವ ಇಷ್ಟು ದೊಡ್ಡ ಪ್ರಮಾಣದಲ್ಲಿ ಅಮೆರಿಕ ದೇಶದಲ್ಲಿ ನಡೆಯುತ್ತಿರುವುದು ಅಭೂತಪೂರ್ವ ಎನ್ನಲಾಗಿದೆ. ವಾಷಿಂಗ್ಟನ್ ಪೋಸ್ಟ್ ದಿನಪತ್ರಿಕೆಯೂ ಸೇರಿದಂತೆ ಅಮೆರಿಕದ ಮಾಧ್ಯಮಗಳು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕಷ್ಟು ಪ್ರಚಾರ ಕೊಟ್ಟಿವೆ, ಕಲಾಪ್ರದರ್ಶನಗಳನ್ನು ಮುಕ್ತಕಂಠದಿಂದ ಪ್ರಶಂಸಿಸುತ್ತ ವಿಮರ್ಶೆಗಳನ್ನೂ ಪ್ರಕಟಿಸುತ್ತಿವೆ. ಒಟ್ಟಿನಲ್ಲಿ ಈಗ ವಾಷಿಂಗ್ಟನ್‌ನಲ್ಲಿ ಪರಮಾವಧಿ ಭಾರತ' ಮೇಳೈಸಿದೆ. ಭಾರತೀಯ ಕಲೆ ಮತ್ತು ಸಂಸ್ಕೃತಿಯ ಹಿತವಾದ ಗಾಳಿ ಬೀಸುತ್ತಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Guitarist, singer, composer, song writer, musician Kannada lad Raghu Dixit mesmerizes the Indian and American crowd with Kannada, Hindi and english songs at Maximum India cultural festival at Kennedi centre, Washington DC, America. Report by Srivathsa Joshi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more