ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಾನುಲಿಯಲ್ಲಿ ಭೀಮಸೇನ ಜೋಷಿಗೆ ಶ್ರದ್ಧಾಂಜಲಿ

By Prasad
|
Google Oneindia Kannada News

Nachiket Sharma and Bhimsen Joshi
ಜನವರಿ 24ರಂದು ಪುಣೆಯಲ್ಲಿ ನಮ್ಮನಗಲಿದ ಹಿಂದೂಸ್ಥಾನಿ ಸಂಗೀತದ ದಿಗ್ಗಜರಾದ 'ಭಾರತ ರತ್ನ' ಪಂಡಿತ್ ಭೀಮಸೇನ ಜೋಷಿ ಅವರ ಸ್ಮರಣಾರ್ಥ ವಿಶೇಷ ರೇಡಿಯೊ ಕಾರ್ಯಕ್ರಮ ಸ್ಟಾನ್ಫರ್ಡ್ ರೇಡಿಯೊದಲ್ಲಿ ಗಣರಾಜ್ಯೋತ್ಸವ ಜ.26ರಂದು ಪ್ರಸಾರವಾಗುತ್ತಿದೆ. ಪಂಡಿತ್ ಭೀಮಸೇನ ಜೋಷಿ ನಮನ ವಿಶೇಷ ಕಾರ್ಯಕ್ರಮ ಕೇಳಲು ಮರೆಯದಿರಿ. ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದರಾದ ನಚಿಕೇತ ಶರ್ಮ ಅವರು ಈ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮಾಂತ್ರಿಕ ಸ್ವರದಿಂದ ಜಗತ್ತಿನ ಉದ್ದಗಲಕ್ಕೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದ ಭೀಮಸೇನ ಜೋಶಿ ಅವರ ಜೀವನ, ಸಂಗೀತ ಸಾಧನೆ ಕುರಿತ ಈ ಬಾನುಲಿ ಕಾರ್ಯಕ್ರಮವನ್ನು ಕೇಳುವ ಸುಯೋಗ ವಿಶ್ವಕನ್ನಡಿಗರಿಗೆ ಲಭಿಸಲಿದೆ.

ಕಾರ್ಯಕ್ರಮದ ವಿವರಗಳು:

ದಿನಾಂಕ : 2011 ಜನವರಿ 26 ಬುಧವಾರ

ಸಮಯ : (ಕ್ಯಾಲಿಫೋರ್ನಿಯ ಸಮಯ)
ಬೆಳಗ್ಗೆ 6.00 AM PST - 7.30 AM PST – ಭೀಮಸೇನ ಜೋಷಿ ಅವರ ಗಾಯನವೂ ಒಳಗೊಂಡ ಶಾಸ್ತ್ರೀಯ ಸಂಗೀತ.
7.15 AM PST – 7.25 AM PST ಕನ್ನಡ ಕೂಟದ ಅಧ್ಯಕ್ಷರಾದ ಪದ್ಮ ರಾವ್ ಅವರ ಸಂದರ್ಶನ.
7.30 AM PST - 8.30 AM PST ನಚಿಕೇತ ಶರ್ಮ ಅವರು ನಡೆಸಿಕೊಡುವ "ಪಂಡಿತ್ ಭೀಮಸೇನ ಜೋಷಿ ನಮನ" (ಭಾರತೀಯ ಕಾಲಮಾನಕ್ಕೆ ಕೆಳಗಿರುವ ಟಿಪ್ಪಣೆ ಗಮನಿಸಿ.)

ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ಇಂಟರ್ನೆಟ್ ಮೂಲಕ : http://www.itsdiff.com/Kannada.html (Listen live and to archives from anywhere in the world)
ನಿರ್ವಹಣೆ : ಮಧು ಕೃಷ್ಣಮೂರ್ತಿ
ಭಾರತೀಯ ಕಾಲಮಾನ : ಸಂಜೆ 9ರಿಂದ 10ರವರೆಗೆ.

ನಚಿಕೇತ ಶರ್ಮಾ ಬಗ್ಗೆ : ಮೂಲತಃ ಧಾರವಾಡದವರಾದ ನಚಿಕೇತ ಶರ್ಮಾ ಅವರು ಹಿಂದೂಸ್ತಾನಿ ಸಂಗೀತದ ಪ್ರಾಥಮಿಕ ಪಾಠವನ್ನು ತಮ್ಮ ಪಾಲಕರಿಂದ ಪಡೆದರು. ನಂತರ ಮದ್ರಾಸಿನಲ್ಲಿ ಬಿಎನ್ ಸಿಂಹ ಮತ್ತು ಬಿ ಹನುಮಂತಾಚಾರ್ ಅವರಲ್ಲಿ ಸಂಗೀತ ಸಾಧನೆಯನ್ನು ಮುಂದುವರಿಸಿದರು.

ಮುಂದೆ ಖ್ಯಾತ ಹಿಂದೂಸ್ತಾನಿ ಹಾಡುಗಾರ ಪಂಡಿತ ಬಸವರಾಜ ರಾಜಗುರು ಅವರ ಬಳಿ ತರಬೇತಿಯನ್ನು ಪಡೆದರು. ನಚಿಕೇತ ಅವರು ಭಾರತದ ಎಲ್ಲೆಡೆ ಮತ್ತು ಉತ್ತರ ಅಮೆರಿಕಾದಲ್ಲಿಯೂ ಸಂಗೀತ ಕಾರ್ಯಕ್ರಮ ನೀಡಿದ್ದಾರೆ. ಪ್ರಸ್ತುತ, ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ರಾಜಗುರು ಸಂಗೀತ ವಿದ್ಯಾನಿಕೇತನ್ ನಲ್ಲಿ ಸಂಗೀತಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ. ಅವರು ಸಂಗೀತಾಂಜಲಿ ಸಂಗೀತ ಸಂಸ್ಥೆಯಲ್ಲಿ ಹಿರಿಯ ಉಪನ್ಯಾಸಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

English summary
Special tribute to Hindustani music maestro Bharat Ratna Pandit Bhimsen Joshi at KZSU Stanford 90.1 FM radio, America. Hindustani singer Nachiket Sharma, orginally from Dharwad, will talk about Joshi. Madhu Krishnamurthy is hosting the radio program.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X