ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕ ಬಾನುಲಿಯಲ್ಲಿ ಕನ್ನಡ ಚಿತ್ರರಂಗ 75

|
Google Oneindia Kannada News

Dr. Puttaswamy
ಅಮೇರಿಕದ ಬಾನುಲಿಯಲ್ಲಿ ಕನ್ನಡ ರೇಡಿಯೊ ಕಾರ್ಯಕ್ರಮ 'ಕನ್ನಡ ಚಲನಚಿತ್ರರಂಗ - 75 ವರುಷಗಳು' ಕಾರ್ಯಕ್ರಮ ಬುಧವಾರ ಪ್ರಸಾರವಾಗುತ್ತಿದೆ. 'ಸಿನಿಮ ಯಾನ - ಕನ್ನಡ ಚಿತ್ರರಂಗ 75 - ಒಂದು ಹಿನ್ನೊಟ' ಕೃತಿಯ ಲೇಖಕರಾದ ಡಾ|| ಪುಟ್ಟಸ್ವಾಮಿ ಅವರೊಂದಿಗೆ ಮಧು ಕೃಷ್ಣಮೂರ್ತಿ ಸಂದರ್ಶನ ನಡೆಸಲಿದ್ದಾರೆ.

ಸಂದರ್ಶನ ಭಾರತೀಯ ಕಾಲಮಾನ ಬುಧವಾರ ರಾತ್ರಿ 9ರಿಂದ 10ವರೆಗೆ ಮತ್ತು ಕ್ಯಾಲಿಫೋರ್ನಿಯಾ ಸಮಯ ಬುಧವಾರ ಬೆಳಿಗ್ಗೆ 7.30ರಿಂದ 8.30ರವರೆಗೆ ನಡೆಯಲಿದೆ. ನೇರಪ್ರಸಾರದ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಈ ದೂರವಾಣಿಯ ಸಂಖ್ಯೆಗೆ ಕಾಲ್ ಮಾಡಿ. 650-723-9010.

ಬಾನುಲಿ ಕಾರ್ಯಕ್ರಮದ ವಿವರಗಳು:

ಸಂದರ್ಶನ : ಡಾ. ಪುಟ್ಟಸ್ವಾಮಿ ಅವರೊಂದಿಗೆ
ದಿನಾಂಕ : 2010 ಜನವರಿ 20 ಬುಧವಾರ
ಸಮಯ : ಬೆಳಗ್ಗೆ 7.30ರಿಂದ 8.30ರವರೆಗೆ. (ಕ್ಯಾಲಿಫೋರ್ನಿಯ ಸಮಯ) [ 7.30 AM to 8.30 AM PST in California]
ಭಾರತೀಯ ಕಾಲಮಾನ : ಬುಧವಾರ ರಾತ್ರಿ 9ರಿಂದ 10ರವರೆಗೆ.
ಬಾನುಲಿ ಕೇಂದ್ರ : ಸ್ಟಾನ್‌ಫರ್ಡ್ KZSU 90.1 FM [ಕ್ಯಾಲೀಫೋರ್ನಿಯ ಸ್ಯಾನ್‌ಫ್ರಾನ್‌ಸಿಸ್ಕೊ ಬೇ ಏರಿಯ]
ನಡೆಸಿಕೊಡುವವರು : ಮಧು ಕೃಷ್ಣಮೂರ್ತಿ

ಇಂಟರ್ನೆಟ್ ಮೂಲಕ : http://www.itsdiff.com/Kannada.html (Listen from anywhere in the world. In the website please note the sign "To Listen Live Click Below. Choose 128k or 56k based on your internet bandwidth.")

ಹಿಂದೆ ಪ್ರಸಾರವಾದ ಕಾರ್ಯಕ್ರಮಗಳನ್ನು ಇಲ್ಲಿ ಕೇಳಬಹುದು : http://www.itsdiff.com/Kannada.html

ಡಾ.ಕೆ.ಪುಟ್ಟಸ್ವಾಮಿ ಪರಿಚಯ

ಹುಟ್ಟಿದ್ದು, ಈಗಿನ ರಾಮನಗರ ಜಿಲ್ಲೆಯ ಕನಕಪುರ ತಾಲುಕಿನ ವರಗೇರಹಳ್ಳಿಯಲ್ಲಿ ಕೃಷಿಕ ಕುಟುಂಬದಲ್ಲಿ.(ಶಾಲಾ ದಾಖಲಾತಿಯ ಪ್ರಕಾರ 16ನೇ ಜುಲೈ 1957). ಗ್ರಾಮಾಂತರ ಶಾಲೆಗಳಲ್ಲಿ ಮತ್ತು ಕೆ.ಜಿ.ಎಫ್‌ನಲ್ಲಿ ಆರಂಭದ ವಿದಾಭ್ಯಾಸ. ಬೆಂಗಳೂರು ಕೃಷಿ ವಿಶ್ವ ವಿದ್ಯಾಲಯದಿಂದ ಬಿ.ಎಸ್‌ಸಿ(ಕೃಷಿ) ಪದವಿ. ಬಳಿಕ ಮೈಸೂರು ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ. ಕುವೆಂಪು ಕೃತಿಗಳ ಜೀವ ಪರಿಸರ ಅಧ್ಯಯನ ಮಹಾಪ್ರಬಂಧಕ್ಕೆ ಕನ್ನಡ ವಿಶ್ವವಿದ್ಯಾಯದಿಂದ ಡಿ.ಲಿಟ್ ಪದವಿ ಸಾಹಿತ್ಯ, ಪರಿಸರ, ಕ್ರೀಡೆ, ಸಿನೆಮಾ ಹಾಗು ಜನಪರ ಚಳುವಳಿಗಳಲ್ಲಿ ಆಸಕ್ತಿ.

ಪ್ರಜಾವಾಣಿ ಪತ್ರಿಕೆಯ ಮೂಲಕ ಪತ್ರಕರ್ತನಾಗಿ ವೃತ್ತಿ ಜೀವನ(1981) ಆರಂಭ. ಅನಂತರ 1985ರಲ್ಲಿ ಕರ್ನಾಟಕ ವಾರ್ತಾ ಇಲಾಖೆಗೆ ಸೇರ್ಪಡೆ. ನಿಯೋಜನೆ ಮೇರೆಗೆ ಅರಣ್ಯ, ಪರಿಸರ ಮತ್ತು ಜೀವವಿಜ್ಞಾನ ಇಲಾಖೆಯಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ, ಕನ್ನಡ ವಿಶ್ವವಿದ್ಯಾಲಯದ ವಿಜ್ಞಾನಗಳ ಇತಿಹಾಸ ವಿಭಾಗದ ಮುಖ್ಯಸ್ಥರಾಗಿ ಸೇವೆ. ಕನ್ನಡ ಪುಸ್ತಕ ಪ್ರಾಧಿಕಾರ, ಯುವಜನ ಸೇವೆ, ಕ್ರೀಡಾ ಇಲಾಖೆ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ನಂತರ ಇದೀಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿದ್ದಾರೆ.

ಚಾರ್ಲ್ಸ್ ಡಾರ್ವಿನ್‌ನ ಯುಗಕೃತಿ ದಿ ಆರಿಜಿನ್ ಆಫ್ ಸ್ಪೀಷೀಸ್ ಯನ್ನು ಜೀವ ಸಂಕುಲಗಳ ಉಗಮ ಶೀರ್ಷಿಕೆಯಡಿಯಲ್ಲಿ ಅನುವಾದಿಸುವ ಮೂಲಕ ಮೊದಲ ಪ್ರಕಟಣೆ (1991). ಒಂದೇ ವರ್ಷದಲ್ಲಿ ಎರಡು ಮುದ್ರಣ ಕಂಡ ಅಪರೂಪದ ಕೃತಿ. ಪ್ರಖ್ಯಾತ ವನ್ಯಜೀವಿ ಛಾಯಾಚಿತ್ರಗ್ರಾಹಕ ಜೋಡಿ ಕೃಪಾಕರ-ಸೇನಾನಿ ಜೊತೆಗೂಡಿ ಅಂಗೈಯಲ್ಲಿ ಜೀವ ಜಗತ್ತಿನ ವಿರಾಟ್ ದರ್ಶನ ನಿಡುವ ಜೀವಜಾಲ ಕೃತಿ ಪ್ರಕಟಣೆ(1999) .

ಈ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ ಹಾಗು ರಾಜ್ಯಸರ್ಕಾರದ ಪರಿಸರ ಪ್ರಶಸ್ತಿ. ಕನ್ನಡ ಸಾಹಿತ್ಯ ಲೋಕಕ್ಕೆ ವಿಶಿಷ್ಟವೆನಿಸಿದ ಕ್ರೀಡಾ ಲೋಕದ ವಿಸ್ಮಯ, ಅಳಕು ಪುಳಕಗಳನ್ನು ತೆರೆದಿಟ್ಟ ಭುವನದ ಬೆಡಗು (2000) ಕೃತಿ ಪ್ರಕಟಣೆ. ಐವರು ವಿಜ್ಞಾನಿಗಳ ಜೀವನ ಚರಿತ್ರೆ ಮತ್ತು ಎಚ್ ಜಿ ವೆಲ್ಸ್ ನ ದಿ ಟೈಂ ಮಷೀನ್, ದಿ ಇನ್ವಿಸಿಬಲ್ ಮ್ಯಾನ್, ಜೂಲ್ಸ್ ವರ್ನ್‌ನ ಎ ಜರ್ನಿ ಇಂಟು ಸೆಂಟರ್ ಆಫ್ ದಿ ಅರ್ತ್ ಅರೌಂಡ್ ದಿ ವರ್ಲ್ಡ ಇನ್ 80 ಡೇಸ್ 20000 ಲೀಗ್ಸ್ ಅಂಡರ್ ದಿ ಸೀಸ್ ಹಾಗು ಲೂ ವಾಲೇಸ್‌ನ ಬೆನ್ ಹರ್ ಕೃತಿಯ ಅನುವಾದ. ಜೊತೆಗೆ ಅಸ್ಸಾಮಿ ಲೇಖಕ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬಿರೇಂದ್ರ ಭಟ್ಟಾಚಾರ್ಯ ಅವರ ಯಾರ್‍ಯುಂಗಮ್ ಕೃತಿಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ 'ಜನತೆಯ ರಾಜ್ಯ' ಹೆಸರಿನಲ್ಲಿ ತಂದ ಸಾಹಸ.

ಪ್ರೊ. ಸುನೀಲ್ ಸಹಸ್ರಬುದ್ಧೆಯವರ ಗಾಂಧೀಸ್ ಚಾಲೆಂಜೆಸ್ ಟು ಮಾಡರ್ನ್ ಸೈನ್ಸ್ ಕೃತಿಯನ್ನು ಆಧುನಿಕ ವಿಜ್ಞಾನಕ್ಕೆ ಗಾಂಧಿಯ ಸವಾಲು ಹೆಸರಿನಲ್ಲಿ ಅನುವಾದ. ಸಿನಿಮಾ ಕ್ಷೇತ್ರದ ಬಗೆಗಿನ ಪುಟ್ಟಸ್ವಾಮಿಯವರ ಗಾಢ ಅನುರಕ್ತಿಯ ಫಲ- ಸಿನಿಮಾಯಾನ ಕೃತಿ. ಇದು ಅವರ ಹದಿನೇಳನೆಯ ಪ್ರಕಟಿತ ಕೃತಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X