ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜೆರ್ಸಿ ಕನ್ನಡಿಗರಿಗೆ ಶನಿವಾರ ಡಬ್ಬಲ್ ಖುಷಿ

By Mahesh
|
Google Oneindia Kannada News

Triveni Kannada Sangha ,NJ
ನ್ಯೂಜೆರ್ಸಿ, ನ. 17: ವಾರಾಂತ್ಯದ ಸಂತೋಷ ಕೂಟಗಳು, ಕನ್ನಡ ಸಂಘ ಮೀಟಿಂಗ್ ಗಳು, ವಿಹಾರ, ಭೋಜನ ಕೂಟಗಳು ಅನಿವಾಸಿ ಕನ್ನಡಿಗರಿಗೆ ಮಾಮೂಲಿಯಾದರೂ, ಈ ಶನಿವಾರ ಡಬ್ಬಲ್ ಖುಷಿ, ಡಬ್ಬಲ್ ಮಜಾ. ಕಾರಣ, ಒಂದೇ ದಿನ ಒಂದೇ ವೇದಿಕೆಯಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ ದೀಪಾವಳಿ ಹಬ್ಬದ ಆಚರಣೆಗೆ ಸಕಲ ಸಿದ್ಧತೆ ನಡೆದಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಸಭೆ, ಹಬ್ಬದೂಟದ ಜೊತೆಗೆ ಆತ್ಮೀಯರೊಂದಿಗೆ ಹರಟೆ ಹೊಡೆಯಲು ಎಲ್ಲರಿಗೂ ಮುಕ್ತ ಆಹ್ವಾನವನ್ನು ತ್ರಿವೇಣಿ ಕನ್ನಡ ಸಂಘ ನೀಡಿದೆ.

ಕಾರ್ಯಕ್ರಮ ನಡೆಯುವ ಸ್ಥಳ: ಫ್ರಾನ್ಸಿಸ್ ಡಿಮಾಸಿ ಮಾಧ್ಯಮಿಕ ಶಾಲೆ, 199 ಈವ್ಸ್‌ಬರೊ-ಮೆಡ್ಫೊರ್ಡ್ ರೋಡ್ ಮಾರ್ಲ್‌ಟನ್, ನ್ಯೂ ಜೆರ್ಸಿ 08053

ದಿನ/ದಿನಾಂಕ: ಶನಿವಾರ, ನವೆಂಬರ್ 20, 2010.
ಸಮಯ:ಮಧ್ಯಾಹ್ನ 2.30 ರಿಂದ ಸಂಜೆ 7.30 ರವರೆಗೆ (ಸ್ಥಳೀಯ ಕಾಲಮಾನದಂತೆ)

ಕಾರ್ಯಕ್ರಮಗಳ ಮೆನು:
ಊರ್ಜ ಸಮೂಹ ನೃತ್ಯ: ತ್ರೀ ಅಕ್ಷ ನೃತ್ಯ ತಂಡ
ಭರತನಾಟ್ಯ: ಪ್ರಿಯ ಕೋಲಾಟ ನೃತ್ಯ: ತ್ರಿವೇಣಿ ನೃತ್ಯ ತಂಡ
ಲಘು ಪ್ರಹಸನ: ಉಷಾ ಚಂದ್ರಶೇಖರ್ ಮತ್ತು ತಂಡ ಆಶಯ ಗೀತೆ, ಭಾವಗೀತೆ, ನಾಡಗೀತೆ ಮಕ್ಕಳ ಸಮೂಹ ಗೀತೆ
ರಾಜ್ಯೋತ್ಸವ ವಿಶೇಷ: ಎಚ್.ವೈ. ರಾಜಗೋಪಾಲ್
ಕನ್ನಡ ಸಾಹಿತ್ಯದಲ್ಲಿ ಹಾಸ್ಯ: ತ. ನಂ. ರಾಜಶೇಖರ

ಪ್ರವೇಶ ದರ: ಸದಸ್ಯರು ವಯಸ್ಕರಿಗೆ ತಲಾ $15,
ಮಕ್ಕಳಿಗೆ : (6-18ವರ್ಷ) ತಲಾ $10
ಇತರರಿಗೆ: ವಯಸ್ಕರು ತಲಾ 20; ಮಕ್ಕಳು ತಲಾ $10

ಇದರ ಜೊತೆ ಜೊತೆಗೆ ಸರ್ವಸದಸ್ಯರ ಸಭೆ, ಸಾಂಸ್ಕೃತಿಕ ಕಾರ್ಯದರ್ಶಿ ಯವರ ವರದಿ, ಖಜಾಂಚಿಯವರ ವರದಿ, ಅಧ್ಯಕ್ಷರ ವರದಿಗಳನ್ನು ಮಂಡಿಸಲಾಗುವುದು ಹಾಗೂ ಉಪಯುಕ್ತ ವಿಷಯಗಳ ಬಗ್ಗೆ ಚರ್ಚೆ ಕೂಡಾ ನಡೆಯಲಿದೆ. ಸೂಚನೆ : ಕಾರ್ಯಕ್ರಮದಲ್ಲಿ ನಿಮ್ಮ ರಂಜನೆಯ ಜೊತೆಗೆ ಬಗೆ ಬಗೆ ತಿನಿಸುಗಳ ಹಬ್ಬದೂಟ ಕೂಡಾ ಸಿಗಲಿದೆ.

English summary
Triveni Kannada Sangha, New Jersey is celebrating Deepavali and Kananda Rajyotsava on Nov.20 at Marlton, NJ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X