ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ: ಅತಿವೇಗಿ ನಗರೀಕರಣ ಸಂಪನ್ಮೂಲ ಹರಣ

By * ಮೋಹನಚಂದ ಪಾಟೀಲ
|
Google Oneindia Kannada News

Mohanchand Patil
ಮರಳಮೇಲೆ ಮನೆ ಕಟ್ಟಿ ಕೊರಗದಿರಲುಂಟೆ
ಎಣ್ಣೆಬಾವಿ ಸೆಲೆಯಲಿ ನೀರನೆಲೆ ನಿಲುಕುದುಂಟೆ

ದುಬೈನಲ್ಲಿ ತೈಲ ಸಂಪನ್ಮೂಲ ಸಾಕಷ್ಟಿದ್ದರೂ, ಜಲ ಸಂಪನ್ಮೂಲದ ಕೊರತೆಯಿಂದ ಈ ಪ್ರದೇಶದ ಐಶಾರಾಮಿ ಜೀವನಶೈಲಿ ಸೊರಗುವ ಅಂಚಿನಲ್ಲಿದೆ. ತ್ಯಾಜ್ಯವಸ್ತು ವಿಲೇವಾರಿ ಅಸಮರ್ಪಕವಾಗಿದ್ದರಿಂದ ಕಳೆದ ವರ್ಷ ಪ್ರವಾಸಿಗರು ದುಬೈಯ ಪರ್ಸಿಯನ್ ಗಲ್ಫ್ ನಲ್ಲಿದ್ದ ತ್ಯಾಜ್ಯ ವಸ್ತುಗಳಲ್ಲಿ ಈಜಬೇಕಾಯಿತು.

ಔದ್ಯೋಗಿಕ ಯೋಜನೆಗಳಿಗಾಗಿ ಅಲ್ಲದೆ ಶುದ್ಧ ನೀರು ಮತ್ತು ತ್ಯಾಜ್ಯ ಸಂಸ್ಕರಣೆಗಾಗಿ ಅತಿ ಹೆಚ್ಚು ವಿದ್ಯುತ್ ಬೇಕಾಗಿರುವುದರಿಂದ, ಆ ದೇಶ ಅಣುವಿದ್ಯುತ್ ಸ್ಥಾವರಗಳಿಗೆ ಮೊರೆಹೋಗಬೇಕಾಗಿದೆ. ಇಲ್ಲಿಯ ತಾಂತ್ರಿಕ ದೌರ್ಬಲ್ಯತೆ ಮತ್ತು ಆತಂಕವಾದಿಗಳ ಸಂಚುಗಳಿಂದಾಗಿ ಇಲ್ಲಿಯ ರಾಜಕೀಯ ಮತ್ತು ಪರಿಸರ ವಿದ್ಯಮಾನಗಳು ಸಂದಿಗ್ಧ ಸ್ಥಿತಿಯಲ್ಲಿವೆ.

ದುಬೈಯ ಅತಿವೇಗಿ ನಗರೀಕರಣದಿಂದ ಪ್ರಭಾವಿತವಾದ ಇತರ ಗಲ್ಫ್ ದೇಶಗಳು ಈ ತರಹದ ಪ್ರಗತಿಯ ವಿಧಾನವನ್ನು ಅನುಸರಿಸಿ, ಜನಸಂಖ್ಯೆಯನ್ನು ವರ್ಧಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಿವೆ. "ಮೊದಲು ವ್ಯಾಪಾರ ಆಮೇಲೆ ಪರಿಸರ" ಎಂಬ ನೀತಿಯಿಂದಾಗಿ ಇಂದು ಅವರು ಸಮಸ್ಯೆಗಳನ್ನು ಎದುರಿಸಲು ಬಹಳ ಜಾಗರೂಕತೆ ವಹಿಸಬೇಕಾಗಿದೆ ಎಂದು ತಡವಾಗಿಯಾದರೂ ಅರಿವಾಗಿದೆ.

ಲಾಸ್ ವೆಗಾಸ್ ನಂತೆ ಇಲ್ಲಿ ಕುಡಿಯುವ ನೀರಿನ ಕೊರತೆ ಹೇರಳವಾಗಿದೆ. ಇಲ್ಲಿಯ ಸಮುದ್ರನೀರು ಸಂಸ್ಕರಣಾ ಕೇಂದ್ರಗಳು ಕಾರ್ಬನ್ ಅನಿಲ ಉಗುಳುತ್ತವೆ ಮತ್ತು ಅವು ಬಿಟ್ಟ ಬಿಸಿ ತ್ಯಾಜ್ಯಗಳನ್ನು ಸಮುದ್ರಕ್ಕೆ ಪಂಪ್ ಮಾಡಲಾಗುತ್ತಿದೆ. ದುಬೈ ಒಂದು ದಿನಕ್ಕೆ 4 ಬಿಲಿಯನ್ ಬಾಟಲಿಗಳಷ್ಟು ಸಮುದ್ರದ ನೀರನ್ನು ಸಂಸ್ಕರಿಸುತ್ತದೆ. ಹೆಚ್ಚೆಂದರೆ 4 ದಿನದ ಶುದ್ಧ ನೀರಿನ ಸ್ಟಾಕ್ ಇಟ್ಟುಕೊಳ್ಳುವಷ್ಟು ಸಾಮರ್ಥ್ಯ ಈ ಕೇಂದ್ರಗಳಿಗಿದೆ. ಅಲ್ಲಿಯ ನೀರಿನ ನಲ್ಲಿಗಳಿಗಾಗಿ ಮತ್ತು ಕಾರಂಜಿಗಳಿಗಾಗಿ, ಸಮುದ್ರ ನೀರಿನ ಶುದ್ಧೀಕರಣದಿಂದ ಲವಣಾಂಶವು ಹೆಚ್ಚುತ್ತಿದೆ. ಇಂದು ಇಲ್ಲಿಯ ಸಮುದ್ರನೀರಿನಲ್ಲಿಯ ಲವಣಾಂಶ 47 ಸಾವಿರ ಪಿಪಿಎಮ್ ನಷ್ಟು ಇದೆ; 30 ವರ್ಷಗಳ ಹಿಂದೆ ಅದು 37 ಸಾವಿರ ಪಿಪಿಎಮ್ ಇತ್ತು. ಇದು ಸ್ಥಳೀಯ ಸಸ್ಯ ಜೀವ ರಾಶಿ ಮತ್ತು ಸಮುದ್ರ ಜೀವ ರಾಶಿಗೆ ಸಂಕಟದಾಯಕವಾಗಿದೆ.

ಇಲ್ಲಿಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯು ನಗರೀಕರಣ ಬೆಳವಣಿಗೆಯ ವೇಗಕ್ಕೆ ಅನುಗುಣವಾಗಿಲ್ಲ. ದುಬೈಯ ತ್ಯಾಜ್ಯ ವಸ್ತು ಸಂಸ್ಕರಣಾ ಕೇಂದ್ರದ ಸಾಮರ್ಥ್ಯ 260000 ಕ್ಯುಬಿಕ್ ಮೀಟರ್ ಇದ್ದು, ಅದು ಪ್ರತಿದಿನಕ್ಕೆ 480000 ಕ್ಯುಬಿಕ್ ಮೀಟರ್ನಷ್ಟು ತ್ಯಾಜ್ಯವನ್ನು ಸಂಸ್ಕರಿಸುತ್ತಿದೆ. ಸುಮಾರು 4000 ಟ್ಯಾಂಕರ್ ಗಳು ಆರ್ದ್ರ ತ್ಯಾಜ್ಯವನ್ನು ದುಬೈನಿಂದ ಒಯ್ದು ಪ್ರವಾಸಿ ತಾಣವಾದ ಜುಮೆರಾ ಕಡೆ ಹರಿಯುವ ನಾಲಾಗಳಲ್ಲಿ ಬಿಡಲಾಗುತ್ತಿದೆ.

ದುಬೈಯ ಪೌರಾಡಳಿಗಳು, ಅತಿವೇಗಿ ನಗರೀಕರಣದಿಂದ ಸಂಪನ್ಮೂಲಗಳ ಮೇಲೆ ಉಂಟಾದ ಒತ್ತಡಗಳನ್ನು ಗಮನಿಸಿವೆ ಮತ್ತು ಮುಂದಿನ 20 ವರ್ಷಗಳೊಳಗೆ ಈ ಪರಿಸರ ಸಮಸ್ಯೆಗಳನ್ನು ಎದುರಿಸುವದೇ ಅವರಿಗೆ ದೊಡ್ಡ ಪ್ರಶ್ನೆಯಾಗಿದೆ.

ಐಶಾರಾಮಿ ಜೀವನಶೈಲಿಯನ್ನು ಸ್ಥಳೀಯ ಸಂಪನ್ಮೂಲ್ಗಳಿಗೆ ಅನುಗುಣವಾಗಿ ರೂಢಿಸಿಕೊಳ್ಳಬೇಕೆ ಹೊರತು ಕೃತ್ರಿಮ ಸಂಪನ್ಮೂಲಗಳಿಂದಲ್ಲ. ಇಲ್ಲದಿದ್ದರೆ ಆ ಸ್ಥಳದ, ದೇಶದ ಆರ್ಥಿಕ ಮತ್ತು ಪರಿಸರ ವ್ಯವಸ್ಥೆಯ ಮೇಲೆ ಒತ್ತಡ ಬೀಳುವ ಸಂಭವ ಹೆಚ್ಚು.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್</a> | <a href=ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" title="ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7" />ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X