ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕನ್ನಡಿಗರು ಯುಕೆಯ ಕನ್ನಡ ರಾಜ್ಯೋತ್ಸವ 2010

By * ಶ್ರೀನಿವಾಸ ಮಹೇಂದ್ರಕರ್, ಯುಕೆ
|
Google Oneindia Kannada News

Kannada Rajyotsava by Kannadigaru UK, London
ಇಂಗ್ಲೆಂಡಿನಲ್ಲೀಗಾಗಲೇ ಚಳಿಗಾಲ ಅಧಿಕೃತವಾಗಿ ಆರಂಭವಾಗಿದೆ. ಜಿನುಗುವ ಮಳೆ, ಕೊರೆಯುವ ಛಳಿ, ಹಗಲನ್ನು ನಿರೀಕ್ಷೆಗೂ ಮುಂಚೆ ನುಂಗುವ ಕತ್ತಲು. ಇವೆಲ್ಲಾ ಸೇರಿ ನಾವು ಮನೆಯಿಂದ ಆಚೆ ಕಾಲಿಡುವ ಎಲ್ಲಾ ಸಾಧ್ಯತೆಗಳನ್ನೂ ಕುಂಠಿತಗೊಳಿಸಿವೆ. ಆದರೂ ಅಕ್ಟೋಬರ್ 30, ಶನಿವಾರ ಲಂಡನ್ನಿನಲ್ಲಿ ಕನ್ನಡಿಗರು ಯುಕೆ ತಂಡ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭ, ಚಳಿಗಾಲದ ಪ್ರಾಕೃತಿಕ ಅಡೆತಡೆಗಳನ್ನು ಮೀರಿ ನಾನೂರಕ್ಕೂ ಹೆಚ್ಚು ಕನ್ನಡಿಗರನ್ನು ತನ್ನೆಡೆ ಸೆಳೆಯುವಲ್ಲಿ ಯಶಸ್ವಿಯಾಯಿತೆಂದರೆ ಆಯೋಜಕರಲ್ಲಿ ಜನರಿಗಿರುವ ವಿಶ್ವಾಸ ಮತ್ತು ಇಂಗ್ಲೆಂಡಿನ ಕನ್ನಡಿಗರ ಭಾಷಾಭಿಮಾನ ಎರಡೂ ಸಧೃಢವಾಗಿವೆ ಎಂಬುದು ವಿಶ್ವಗೋಚರವಾಗಿತ್ತು.

ಪ್ರತೀ ವರ್ಷದಂತೆ ಈ ಬಾರಿಯೂ ಕನ್ನಡಿಗರು ಯುಕೆ ತಂಡದ ರಾಜ್ಯೋತ್ಸವ ಕಾರ್ಯಕ್ರಮಗಳ ಪಟ್ಟಿ ಪ್ರಖ್ಯಾತ ಕಲಾವಿದರು ಮತ್ತು ಖ್ಯಾತನಾಮರ ಹೆಸರುಗಳಿಂದ ಕಂಗೊಳಿಸುತಿತ್ತು. ಇದರಲ್ಲಿ ಹಾಸ್ಯಕಲಾವಿದ ರಿಚರ್ಡ್ ಲೂಯಿಸ್, ಹಿಂದೂಸ್ತಾನಿ/ಸುಗಮ ಸಂಗೀತ ಗಾಯಕ ಹಾಗೂ ಕರ್ನಾಟಕ ಸರ್ಕಾರದ ಮಾಹಿತಿ ವಿಭಾಗದ ನಿರ್ದೇಶಕರೂ ಆಗಿರುವ ಮುದ್ದು ಮೋಹನ್ ಮತ್ತು "ಲಯತರಂಗ" ಸಂಗೀತ ತಂಡ ಪ್ರಮುಖವಾಗಿದ್ದವು.

ಮಧ್ಯಾಹ್ನ 12 ಗಂಟೆಗೆ ಕ್ಯಾನನ್ ಪ್ರೌಢ ಶಾಲೆಯ ಆವರಣ ಪ್ರವೇಶಿಸಿದಾಗ, ವಾಡಿಕೆಯಂತೆ ಅಪ್ಪಟ ಕನ್ನಡದ ನಾರೀಮಣಿಯರು ನಮ್ಮನ್ನು ಸ್ವಾಗತಿಸಿ ಹೆಸರುಗಳನ್ನು ನೊಂದಾಯಿಸಿಕೊಂಡು ಭೋಜನಗೃಹದಕಡೆ ದಾರಿತೋರಿಸಿದರು. ನೊಂದಣಿ ಮತ್ತು ಭೋಜನ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಯವರೆಗೂ ನಡೆದಿತ್ತು. ವಿಘ್ನೇಶನ ಪ್ರಾರ್ಥನೆಯೊಂದಿಗೆ ರಾಜ್ಯೋತ್ಸವ ಸಮಾರಂಭ ಪ್ರಾರಂಭವಾಯಿತು. ಮುಖ್ಯ ಅತಿಥಿಗಳಾದ ಲಂಡನ್ ಲಾಂಬೆತ್ ಕೌನ್ಸಿಲ್ ನ ಮೇಯರ್ ಡಾ||ನೀರಜ್ ಪಾಟೀಲ್, ಮುದ್ದು ಮೋಹನ್ ಹಾಗೂ ರಿಚರ್ಡ್ ಲೂಯಿಸ್ ವೇದಿಕೆಗೆ ಆಗಮಿಸಿ, ದೀಪ ಬೆಳಗಿಸುವ ಮೂಲಕ ಸಮಾರಂಭವನ್ನು ಉದ್ಘಾಟಿಸಿದರು.

ನೀರಜ್ ಪಾಟೀಲ್ ಚಾಟಿ : ಕರ್ನಾಟಕದ ರಾಜಕೀಯದಲ್ಲಿ ನಡೆಯುತ್ತಿರುವ ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X