ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ಸಂಶೋಧನಾ ನಿಧಿಗೆ ಧಾರಾಳವಾಗಿ ದಾನ ಮಾಡಿ

By Prasad
|
Google Oneindia Kannada News

Donate generously to cure cancer
ಕನ್ನಡ ಬಾಂಧವರೇ, ಕನ್ನಡಿಗರ ಸಹೃದಯತೆಯ ಪರಿಚಯ ಮಾಡುತ್ತ, ಕನ್ನಡಿಗರ ಹೆಸರನ್ನು ಅಮೇರಿಕಾದ ಸಮಾಜದಲ್ಲಿ ಭದ್ರವಾಗಿ ಛಾಪಿಸುವ ಒಂದು ಪ್ರಯತ್ನದೊಂದಿಗೆ KKNC 2010ರ ತಂಡವು “ನೃತ್ಯ ಮಿಲನ" ಎಂಬ ಮಹತ್ವಾಕಾಂಕ್ಷೆಯ ಕಾರ್ಯಕ್ರಮವನ್ನು ಕೈಗೊಂಡಿದೆ.

ಈ ಕಾರ್ಯಕ್ರಮದ ಪ್ರಮುಖ ಉದ್ದೇಶ, ಕನ್ನಡಿಗರಿಗೆ ನಮ್ಮ ಸ್ಥಳೀಯ ಸಮುದಾಯದ ಬಗ್ಗೆ ಇರುವ ಕಳಕಳಿಯನ್ನು ವ್ಯಕ್ತಪಡಿಸಿ, ಕನ್ನಡಿಗರ ಗುರುತನ್ನು ಬೇ ಏರಿಯಾ ಹಾಗೂ ಇಡೀ ಅಮೇರಿಕಾದಲ್ಲಿ ಹೆಚ್ಚು ಸ್ಥಿರಪಡಿಸುವುದು. ಹಾಗೆಯೇ ಇಡೀ ಜಗತ್ತಿನ ಮಕ್ಕಳನ್ನು ಕ್ಯಾನ್ಸರ್ ನಂತಹ ಕಾಯಿಲೆಯಿಂದ ಬದುಕುಳಿಸುವುದಕ್ಕೆ ಸಹಕಾರಿಯಾಗುವುದು ಕೂಡ ಈ ಕಾರ್ಯಕ್ರಮದ ಉದ್ದೇಶ. ಇದಕ್ಕೆ ತಮ್ಮೆಲ್ಲ ಬೆಂಬಲ, ಸಹಕಾರಬೇಕೆಂದು ಉತ್ತರ ಕ್ಯಾಲಿಫೋರ್ನಿಯಾ ಕನ್ನಡಿಗರ ಕೂಟ ಕೆ.ಕೆ.ಎನ್.ಸಿ ಯವರು ವಿನಂತಿಸಿದ್ದಾರೆ.

“ನೃತ್ಯ ಮಿಲನ"ದಲ್ಲಿ ಪ್ರದರ್ಶಿತವಾಗುತ್ತಿರುವ ನರ್ತನಕಲೆಯು ಉತ್ಕೃಷ್ಟ ಮಟ್ಟದ್ದು. ಇದು ಭಾಷೆಗಳ ಎಲ್ಲೆ ಮೀರಿ, ಎಲ್ಲರ ಮನಸೂರೆಗೊಳ್ಳುವ ಪ್ರದರ್ಶನ. ಈ ಕಾರ್ಯಕ್ರಮಕ್ಕೆ ನಿಮ್ಮ ಅಮೇರಿಕನ್ ಸ್ನೇಹಿತರನ್ನು, ಇತರ ಭಾರತೀಯ (ಕನ್ನಡಿಗರಲ್ಲದ) ಸ್ನೇಹಿತರನ್ನು ಧಾರಾಳವಾಗಿ ಕರೆದುಕೊಂಡು ಬನ್ನಿ. ಭಾರತೀಯ ನೃತ್ಯ ಶೈಲಿಗಳ ಜೊತೆಗೆ ಟ್ಯಾಪ್, ಜ್ಯಾಜ್ ಗಳಂತಹ ಪಾಶ್ಚಿಮಾತ್ಯ ಶೈಲಿಗಳನ್ನೂ ಬೆರೆಸಿ ಒಂದು ರೋಮಾಂಚಕಾರಿಯಾದ ಕಥೆಯನ್ನು ಕೇವಲ ನೃತ್ಯಗಳ ಮೂಲಕ ನಿಮಗೆ ಹೆಣೆಯಲಿದ್ದಾರೆ ಪ್ರಖ್ಯಾತ ನೃತ್ಯ ತಂಡವಾದ 'ಪ್ರಭಾತ್ ಅಕ್ಯಾಡೆಮಿ ಆಫ್ ಮ್ಯೂಸಿಕ್ & ಪರ್ಫಾರ್ಮಿಂಗ್ ಆರ್ಟ್ಸ್'(PAMPA).

ಗಮನಿಸಿ : ಈ ಉದಾತ್ತ ಪ್ರಯತ್ನದಲ್ಲಿ ಪಾಲ್ಗೊಳ್ಳಲು ನೀವು ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯದಲ್ಲೇ ಇರಬೇಕೆಂದೇನಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿದ್ದರೂ ನೀವು ಈ ಯೋಜನೆಯಲ್ಲಿ ಭಾಗಿಗಳಾಗಬಹುದು. ಬೇ ಏರಿಯಾದಲ್ಲಿ ಇರುವವರು ನೃತ್ಯಮಿಲನಕ್ಕೆ ಹಾಜರಾಗಿ ತಮ್ಮ ಬೆಂಬಲ ತೋರಿಸಬಹುದು. ವಿಶ್ವದ ಇನ್ನೆಲ್ಲೇ ಇರುವವರು ಈ ಕ್ಯಾನ್ಸರ್ ಸಂಶೋಧನಾ ನಿಧಿಗೆ ಸಹಾಯ ಮಾಡಲು ಇಚ್ಚಿಸಿದರೆ ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X