ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾದಲ್ಲಿ ಭಾರತೀಯರ ಧನ್ಯ ಮಿಲನ!

By * ನಾಗರಾಜ ಮಹೇಶ್ವರಪ್ಪ
|
Google Oneindia Kannada News

Incredible India Fair - Milan 2010
ಮೋಡ ಮುಚ್ಚಿದ ವಾತಾವರಣ, ಮಧ್ಯೆ ಮಧ್ಯೆ ಇಣುಕುವ ಸೂರ್ಯನ ಹೊಂಗಿರಣಗಳು! ಸದ್ದಿಲ್ಲದೇ ಹರಿಯುತ್ತಿರುವ ನದಿ ತೀರದಲ್ಲಿ ಬಣ್ಣ ಬಣ್ಣದ ಭಾರತೀಯ ಡ್ರೆಸ್ ನಲ್ಲಿ ನೂರಾರು ಚಿಣ್ಣರ ಲೋಕ! ಇದು ನಮ್ಮ ಅಮೆರಿಕನ್ ಭಾರತೀಯರ ಸಮ್ಮಿಲನದ ಒಂದು ನೋಟ, ಇನ್ಸೂರೆನ್ಸ್ ಕಂಪನಿಗಳ ತವರೂರು ಎನಿಸಿರುವ ಹಾರ್ಟ್ ಫೋರ್ಡ್ ಸಿಟಿ, ಕನೆಕ್ಟಿಕಟ್ ನಲ್ಲಿ.

ಅಮೆರಿಕದ ಮಿಲನ್ ಕಲ್ಚರಲ್ ಅಸೋಸಿಯೇಶನ್ ನಡೆಸಿಕೊಟ್ಟ Incredible India Fair 2010 ಬೆಳಿಗ್ಗೆ ಸರಿಯಾಗಿ 10 ಗಂಟೆಗೆ 2 ಮೈಲಿಯ ನಡಿಗೆಯೊಂದಿಗೆ ಪ್ರಾರಂಭವಾಗಿ ಕನೆಕ್ಟಿಕಟ್ ನದಿ ದಂಡೆಯಲ್ಲಿರುವ ರಿವರ್ ಫ್ರಂಟ್ ಪ್ಲಾಜಾಗೆ 12 ಗಂಟೆಗೆ ಬಂದು ತಲುಪಿತು. ಪುಟಾಣಿಗಳೊಂದಿಗೆ ದೊಡ್ಡವರು ಸಹಾ ಬಣ್ಣ ಬಣ್ಣದ ಉಡುಗೆಯಲ್ಲಿ ಉಲ್ಲಾಸ ಉತ್ಸಾಹದಿಂದ ನಡೆದಿದ್ದು ವಿಶೇಷವಾಗಿತ್ತು.

ಪಾರ್ಕ್ ಮುಂಭಾಗದಲ್ಲಿ ಭಾರತೀಯ ಡ್ರೆಸ್ ಮಳಿಗೆ, ಫುಡ್ ಕೋರ್ಟ್, ವಿವಿಧ ರಾಜ್ಯಗಳ ಆಕರ್ಷಕ ಭಿತ್ತಿಚಿತ್ರಗಳು, ಕುತೂಹಲದಿಂದ ನೋಡುತ್ತಾ ಖರೀದಿ ಮಾಡುತ್ತಿದ್ದ ಅಮೆರಿಕನ್ನರು.. ಇವೆಲ್ಲ ನೋಡಿ ನಮ್ಮ ಊರಲ್ಲಿ ನಡೆಯುತ್ತಿದ್ದ ಜಾತ್ರೆಯ ನೆನಪು ಕಾಡಿತು.

ಮಧ್ಯಾಹ್ನದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳು ಚಿಣ್ಣರ ಫ್ಯಾನ್ಸಿ ಡ್ರೆಸ್ ಶೋನೊಂದಿಗೆ ಪ್ರಾರಂಭವಾದವು. ಶಿವ, ಪಾರ್ವತಿ, ಹಕ್ಕ-ಬುಕ್ಕ, ಶಿವಾಜಿ ಹೀಗೆ ನಾನಾ ವಿಧವಾದ ವೇಷಗಳಲ್ಲಿ ವೇದಿಕೆ ಮೇಲೆ ಬಂದಿದ್ದು ನಯನಮನೋಹರವಾಗಿತ್ತು. ನಂತರ ವಿವಿಧ ಭಾಷೆಗಳ (ಕನ್ನಡ, ತಮಿಳ್, ತೆಲುಗು, ಹಿಂದಿ, ಗುಜರಾತಿ, ಬಂಗಾಲಿ, ರಾಜಸ್ತಾನಿ, ಪಂಜಾಬಿ, ಮರಾಠಿ) ಚಲನಚಿತ್ರ , ಜಾನಪದ ಹಾಡುಗಳಿಗೆ ಹತ್ತು ಹಲವಾರು ಪುಟಾಣಿಗಳು, ದೊಡ್ಡವರು ನರ್ತನ ಮಾಡಿದ್ದು ಕಣ್ಣಿಗೆ ತಂಪು, ಕಿವಿಗೆ ಇಂಪು, ಮನಸ್ಸಿಗೆ ಮುದ ನೀಡಿದವು. ನಿಂತಲ್ಲೇ ದೊಡ್ಡವರು, ಸಣ್ಣವರು ಅನ್ನದೆ ಭಾರತೀಯ ಸಂಗೀತಕ್ಕೆ ಅಮೆರಿಕನ್ನರೂ ಸಹ ತಾಳ ಹಾಕಿದ್ದು ಮತ್ತಷ್ಟು ಹುಮ್ಮಸ್ಸು ನೀಡುವಂತಿತ್ತು. (ಚಿತ್ರಪಟ ನೋಡಿರಿ)

ಸಂಜೆ 4ರತನಕ ನಡೆದ ಈ ರಸಮಂಜರಿ ಕಾರ್ಯಕ್ರಮಗಳು ಕೊನೆಯಾದದ್ದು ನಮ್ಮೆಲ್ಲರ ಮೆಚ್ಚಿನ ಅಗಲಿದ ನಾಯಕ ದಿ|ವಿಷ್ಣುವರ್ಧನ್ ರವರ ನೆನಪಿಗಾಗಿ ಮಲ್ಲಿ ಸಣ್ಣಪ್ಪನವರ್ (ಕನೆಕ್ಟಿಕಟ್ ಕನ್ನಡ ಕೂಟ) ಟೀಂನಿಂದ ನಡೆಸಿಕೊಟ್ಟ "ಹಾಕು ಹೆಜ್ಜೆ ಹಾಕು" ಡಾನ್ಸ್ ಡಾನ್ಸ್ ... ಎಲ್ಲರ ಮೆಚ್ಚುಗೆ ಗಳಿಸಿತು. ಇದಾದ ನಂತರ ಪ್ರಶಸ್ತಿ ವಿತರಣೆಯೊಂದಿಗೆ ಈ 'ಭಾರತೀಯರ ಸಮ್ಮಿಲನ' ಮುಗಿದಿತ್ತು. ಹೀಗೆ ಬೇರೆ ಬೇರೆ ಭಾಷೆ ಮಾತನಾಡುವ ಭಾರತೀಯರು ನಡೆಸಿಕೊಟ್ಟ ಈ ಮಿಲನದಲ್ಲಿ ನಾವೆಲ್ಲರೂ 'ಒಂದೇ ಭಾರತಾಂಬೆಯ ಮಕ್ಕಳು' ಎಂಬ ಭಾವನೆ ಎದ್ದು ಕಾಣುತ್ತಿತ್ತು.

<strong>ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ</strong>ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X