ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಸ್ಯಕ್ಕೆ ಹೆಸರಿಡುವ ತಜ್ಞ ಗಾಂಧಿಗೆ ಪುರಸ್ಕಾರ

By Mahesh
|
Google Oneindia Kannada News

Dr.Kanchi Gandhi
ವಾಷಿಂಗ್ಟನ್, ಆ.18: ಹಾರ್ವಡ್ ವಿಶ್ವವಿದ್ಯಾಲಯದ ಡಾ. ಕಂಚಿ ಎನ್ ಗಾಂಧಿ ಅವರಿಗೆ ಅಮೆರಿಕನ್ ಸೊಸೈಟಿ ಆಫ್ ಪ್ಲಾಂಟ್ ಟ್ಯಾಕ್ಸೊನೊಮಿಸ್ಟ್ (ASPT)ನ ಪ್ರತಿಷ್ಠಿತ ಸೇವಾ ಪ್ರಶಸ್ತಿ ಲಭಿಸಿದೆ. ಸಸ್ಯಶಾಸ್ತ್ರದಲ್ಲಿ ವಿಶೇಷ ಪರಿಣತಿ ಹೊಂದಿದ ಕೆಲವರಿಗೆ ಮಾತ್ರ ಈ ಅಪರೂಪದ ಪ್ರಶಸ್ತಿಯನ್ನು ನೀಡಲಾಗುತ್ತದೆ.

ಸಸ್ಯ ಪ್ರಭೇದಗಳ ವಿಂಗಡಿಸುವಿಕೆ ಹಾಗೂ ಸಸ್ಯಗಳಿಗೆ ವೈಜ್ಞಾನಿಕ ಹೆಸರಿಡುವಿಕೆಯಲ್ಲಿ ಸಾಕಷ್ಟು ಅನುಭವ ಹೊಂದಿರುವ ಡಾ. ಗಾಂಧಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯವಾಗಿ ಅನೇಕ ಪ್ರಬಂಧಗಳನ್ನು ಮಂಡಿಸಿ, ಸಸ್ಯಕ್ಕೆ ನಾಮಕರಣ ಮಾಡುವ ವೈಜ್ಞಾನಿಕ ಕಲೆಯನ್ನು ಪ್ರಚುರಪಡಿಸುವಲ್ಲಿ , ವಿದ್ಯಾರ್ಥಿಗಳಿಗೆ ಬೋಧಿಸುವಲ್ಲಿ ತೋರಿಸ ಸಾಧನೆಯನ್ನು ಮನ್ನಿಸಿ ASPT ಈ ಪ್ರಶಸ್ತಿಯನ್ನು ನೀಡುತ್ತಿದೆ.

ಬೆಂಗಳೂರಿನ ನಂಟು: ಸದ್ಯ ಉತ್ತರ ಅಮೆರಿಕದ ಸಸ್ಯಶಾಸ್ತ್ರ ಯೋಜನೆಯ ನಿರ್ವಹಣೆಯಲ್ಲಿ ತೊಡಗಿರುವ ಗಾಂಧಿ, ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದರು. ಬಾಟನಿಕಲ್ ಸೊಸೈಟಿ ಆಫ್ ಅಮೆರಿಕಾ ಈ ವಿಶಿಷ್ಟ ವಿಜ್ಞಾನಿಯನ್ನು ಆಗಸ್ಟ್ ಮೊದಲ ವಾರ ತನ್ನ ಮರ್ಯಾದೆಗಳೊಂದಿಗೆ ಗೌರವಿಸಿ,ASPT ಪ್ರಶಸ್ತಿ ನೀಡಿದೆ.

ಇಂಗ್ಲೆಂಡ್ ನ ಬಟಾನಿಕಲ್ ಕ್ಲಬ್ ಸೇರಿದಂತೆ ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ವಿಶ್ವದಾದ್ಯಂತವಿರುವ ಅನೇಕಾನೇಕ ಸಂಸ್ಥೆಗಳು ಗಾಂಧಿ ಅವರ ಜ್ಞಾನದ ಲಾಭಪಡೆದಿದೆ. ಸಸ್ಯಶಾಸ್ತ್ರ ಸಂಬಂಧಿಸಿದ ಹತ್ತು ಹಲವು ಪತ್ರಿಕೆಗಳ ಗೌರವ ಸಂಪಾದಕರಾಗಿ ಕೂಡ ಗಾಂಧಿ ಕಾರ್ಯ ನಿರ್ವಹಿಸಿದ್ದಾರೆ. 1989 ರಲ್ಲಿ ಟೆಕ್ಸ್ಸಾಸ್ ವಿಶ್ವವಿದ್ಯಾಲಯದಿಂದ ಪಿಎಚ್ ಡಿ ಪಡೆದು, 1995 ರಿಂದ ಹಾರ್ವಡ್ ವಿಶ್ವವಿದ್ಯಾಲಯದಲ್ಲಿ ಸಸ್ಯಶಾಸ್ತ್ರಜ್ಞನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X