ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದ ತಿರುಪತಿಯಲ್ಲಿ ಮಹಾಲಕ್ಷ್ಮಿ ಯಾಗ

By Mahesh
|
Google Oneindia Kannada News

Grand 5-day Mahalakshmi Yagam in American Tirupati
ಪಿಟ್ಸ್ ಬರ್ಗ್, ಜು.28: ವಿಶ್ವದ ಅತ್ಯಂತ ಶ್ರೀಮಂತ ದೇವಸ್ಥಾನ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿಯ ಅನುಗ್ರಹ ಬೇಡುತ್ತಾ ಅಮೆರಿಕದ ತಿರುಪತಿ ಎಂದೇ ಖ್ಯಾತವಾಗಿರುವ ಪಿಟ್ಸ್ ಬರ್ಗ್ ನ ವೆಂಕಟೇಶ್ವರ ದೇಗುಲ ಅ.11ರಿಂದ ಅ.15 ರ ವರೆಗೆ ಐದು ದಿನಗಳ ಕಾಲ ಶ್ರೀ ಮಹಾಲಕ್ಷ್ಮಿ ಯಾಗಕ್ಕೆ ಸಜ್ಜಾಗುತ್ತಿದೆ.

ಅಮೆರಿಕದ ಹಿಂದೂ ಭಕ್ತಾದಿಗಳ ನೆಚ್ಚಿನ ತಾಣವಾಗಿರುವ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಈ ಐದು ದಿನಗಳಲ್ಲಿ ಅಪಾರ ಭಕ್ತ ಸಮೂಹ ಹರಿದು ಬರುವ ನಿರೀಕ್ಷೆ ವ್ಯಕ್ತವಾಗಿದೆ.

ಧನ ಸಂಪತ್ತು, ಐಶ್ವರ್ಯ, ಸೌಂದರ್ಯಕ್ಕೆ ಒಡತಿಯಾದ ಮಹಾಲಕ್ಷ್ಮಿ ದೇವಿಯ ಅನುಗ್ರಹಕ್ಕಾಗಿ ಐದು ದಿನಗಳ ಕಾಲದ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಐದೂ ದಿನಗಳ ಪೂಜಾ ಕೈಂಕರ್ಯಗಳನ್ನು ಸಾಂಗವಾಗಿ ನೆರವೇರಿಸಲು ಶ್ರೀ ಥಿಂಡಂಡಿ ಶ್ರೀಮನ್ನಾರಾಯಣ ಚಿನ್ನ ಜೀಯರ್ ಸ್ವಾಮೀಜಿ ಹಾಗೂ ಅವರ ನಾಲ್ಕು ಜನ ವೇದ ಪಾರಂಗತ ಹೋತ್ರಿಗಳು ಸನ್ನದ್ಧರಾಗಿದ್ದಾರೆ.

ವೇದ ಘೋಷಗಳ ಜೊತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಈ ಧಾರ್ಮಿಕ ಹಬ್ಬ ಸಾಕ್ಷಿಯಾಗಲಿದೆ. ದಕ್ಷಿಣ ಭಾರತದ ಖ್ಯಾತನಾಮರಿಂದ ನಾದಸ್ವರ ವಾದನ ಸೇರಿದಂತೆ ಭಾರತದ ಹೆಸರಾಂತ ಕಲಾವಿದರು ಶ್ರೀ ವೆಂಕಟೇಶ್ವರನಿಗೆ 'ಸಂಗೀತ ಸೇವೆ'ಯನ್ನು ಸಲ್ಲಿಸಲಿದ್ದಾರೆ.

ಯಾಗದ ಕೊನೆ ದಿನದಂದು ಶ್ರೀ ವೆಂಕಟೇಶ್ವರನಿಗೆ ಸ್ವರ್ಣ ಕವಚ ತೊಡಿಸಲಾಗುವುದು. ಚಿನ್ನದ ಕರ್ಣ ಕುಂಡಲ ಶಂಖ ಚಕ್ರ,ವರದ ಹಸ್ತ ಆಭರಣಗಳ ಸಮೇತನಾದ ವೆಂಕಟೇಶ್ವರ ವೈಭವದಿಂದ ಮೆರೆಸಲಾಗುತ್ತದೆ.

ಶ್ರೀ ವೆಂಕಟೇಶ್ವರನಿಗೆ ಚಿನ್ನದ ಉಡುಗೆ ತೊಡುಗೆ ತೊಡಿಸಿ, ಸರ್ವಾಭರಣ ಸರ್ವಾಲಂಕಾರ ಭೂಷಿತನಾದ ಸರ್ವಶಕ್ತನಿಗೆ ಎಲ್ಲರೂ ನಮಿಸುತ್ತಿದ್ದಂತೆ ಅತ್ತ ಮಹಾಲಕ್ಷ್ಮಿ ಯಾಗ ಕೂಡಾ ಪೂರ್ಣಾಹುತಿಗೆ ಸಿದ್ಧವಾಗಲಿದೆ. ಭಾರತ ತೊರೆದು ತಮ್ಮ ನೆಚ್ಚಿನ ದೇವರನ್ನು ಕಾಣಲು ಬಯಸುವ ಅಮೆರಿಕದ ಆಸ್ತಿಕರ ಪಾಲಿಗೆ ಪಿಟ್ಸ್ ಬರ್ಗ್ ನ ವೆಂಕಟೇಶ್ವರನೇ ತಿರುಮಲದ ತಿಮ್ಮಪ್ಪನಾಗಿ ಎಲ್ಲರಿಗೂ ಕಾಣಿಸಲಿದ್ದಾನೆ.

ದೇಗುಲದ ಸಂಪರ್ಕ ವಿಳಾಸ:
Official Website: SVMTemple
Email: [email protected]
[email protected]

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X