ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಒಂದು ಪ್ರಖ್ಯಾತ ಮರವನ್ನು ಕಡಿದ ಅಮರಕತೆ

By Shami
|
Google Oneindia Kannada News

Mercy killing of a legendary Herbie tree
ಒಂದು ದಟ್ಟ ಕಾನನದಲ್ಲಿ, ಒಂದು ಮರಿ ಕಾಡೆಮ್ಮೆಯನ್ನು ಒಂದು ಹಿಂಡು ಸಿಂಹಗಳು ಆಹುತಿ ತೆಗೆದು ಕೊಳ್ಳಲು ಯತ್ನಿಸಿದಾಗ, ಉಳಿದ ಕಾಡೆಮ್ಮೆಗಳ ದಂಡು ಒಗ್ಗಟ್ಟಾಗಿ ಹೋರಾಡಿ, ಸಿಂಹಗಳಿಗೆ ಆಹಾರವಾಗಲಿದ್ದ ತಮ್ಮ ಮರಿಯೊಂದನ್ನ ಯಶಸ್ವಿಯಾಗಿ ಬದುಕಿಸಿ ಕೊಂಡ ದೃಶ್ಯವನ್ನು ತಾವೆಲ್ಲಾ ಯೂಟೂಬಿನಲ್ಲಿ ಅಥವಾ ಗೆಳೆಯ ಗೆಳೆತಿ ಕಳಿಸಿ ಕೊಟ್ಟ ಮಿಂಚೆಯಲ್ಲಿ ನೀವೀಗಾಗಲೇ ವೀಕ್ಷಿಸಿರಬಹುದು. ಅದೇ ರೀತಿ ಒಂದು ನಾಯಿ ಅಪಘಾತಕೊಳ್ಳಗಾಗಿ ರಸ್ಥೆ ಮದ್ಯೆ ಸೊಂಟ ಮುರಿದು ಕೊಂಟು ಬಿದ್ದಿದ್ದಾಗ ಮತ್ತೊಂದು ನಾಯಿ ಅದೆಲ್ಲಿಂದಲೋ ಓಡಿಬಂದು ತನ್ನ ಸಹಚರನ ಜೀವವನ್ನು ಉಳಿಸಿಕೊಳ್ಳಲು ತನ್ನ ಜೀವದ ಹಂಗಿಲ್ಲದೇ, ಯದ್ವಾ ತದ್ವಾ ಸಂಚರಿಸುತ್ತಿದ್ದ ವಾಹನಗಳ ಮದ್ಯೆ ಯಶಸ್ವಿ ಹೋರಾಟ ನಡೆಸಿದ್ದನ್ನ ಸಹ ನೀವು ಯೂಟೂಬಿನ ವಿಡಿಯೋ ಗಳಲ್ಲಿ ವೀಕ್ಷಿಸಿರ ಬಹುದು, ಮತ್ತೊಮ್ಮೆ ಇದೇ ರೀತಿ ಒಂದು ಪಕ್ಷಿ ತನ್ನ ಸಂಗಾತಿಯನ್ನು ಉಳಿಸಿಕೊಳ್ಳಲು ಹೋರಾಟ ನಡೆಸಿದ್ದನ್ನ ವೀಕ್ಷಿಸಿದ್ದ ನೆನೆಪು. ಇಲ್ಲಿ ಗಮನಿಸ ಬಹುದಾದ ಅಂಶವೆಂದರೆ, ನಮಗೆ ಆನಾಹುತ ಎದುರಾದಾಗ ನಮ್ಮ ಸಹಾಯಕ್ಕೆ ಮತ್ತೊಂದು ಜೀವ ನಮ್ಮ ಸಹಾಯಕ್ಕೆ ಬರುವುದು ಪ್ರಕೃತಿ ನಿಯಮ.

ಆದರೂ ಅಲ್ಲೊಮ್ಮೆ ಇಲ್ಲೊಮ್ಮೆ ಅಪ್ಜಲ ಗುರು, ಕಸಬ್ ನಂತಹ ಇನ್ನೂ ಅನೇಕ ಕ್ರಿಮಿಗಳು ನಮ್ಮ ನಡುವೆ ಹಾಗಾಗ ಸಿಗುತ್ತಲೇ ಇರುತ್ತವೆ. ಇದು ಸಹ ಪ್ರಕೃತಿ ನಿಯಮವೇ ಇರ ಬೇಕು. ಇರಲಿ ಈಗ ನಾನು ಹೇಳ ಹೊರಟಿರುವುದು ಒಬ್ಬ ಹಸಿರು ಪ್ರೇಮಿ, ಒಂದು ವೃಕ್ಷದೊಂದಿಗೆ ಬೆಳೆಸಿಕೊಂಡಿದ್ದ ಭಾವನೆಗಳು ಹೇಗೆ ಆತನ ಜೀವನದ ಸಾರ್ಥಕತೆಯನ್ನು ಸಾರಿದವು ಎಂಬುದನ್ನು. ಇದನ್ನು ಹೇಳಲು ಲೇಖನಿಯನ್ನೇ ಎತ್ತಿ ಕೊಳ್ಳ ಬೇಕಿತ್ತು . ಕಾರಣ ಈ ಸತ್ಯ ಘಟನೆಯು 250 ವರ್ಷ ವಯಸ್ಸಾದ ಒಂದು ವೃಕ್ಷ ಹಾಗೂ 101 ವರ್ಷ ವಯಸ್ಸಾದ ಅದರ ಪಾಲಕನಿಗೆ ಸಂಬಂದಿಸಿದ್ದು. ಕೇವಲ ಕೆಲವೇ ನಿಮಿಷಗಳಲ್ಲಿ ಗತಿಸಿ ಹೋದ ಘಟನೆ ಇದಲ್ಲ. ಈ ಘಟನೆಯನ್ನೇ ಆದರಿಸಿ, ಭವಿಷ್ಯದಲ್ಲಿ ಯಾರಾದರೂ ಒಂದು ಸಾಕ್ಷ ಚಿತ್ರವನ್ನು ಚಿತ್ರೀಕರಿಸಿದರೆ ಖಂಡಿತವಾಗಿಯೂ ಅದೋಂದು ಯೋಗ್ಯ ಪ್ರಯತ್ನವೆಂಬುದು ನನ್ನ ಮನದಾಳದ ಮಾತು.

ಈ ಸತ್ಯ ಘಟನೆಯ ಕಥಾನಾಯಕನ ಹೆಸರು ಪ್ರಾಂಕ್ ನಯ್ಟ್. ಬನ್ನಿ ನೇರವಾಗಿ ಅವರ ಮಾತುಗಳಲ್ಲೇ ಕೇಳೋಣ. ಓವರ್‌ ಟು ಪ್ರಾಂಕ್.

* ಲೋdyashi

ಆಗ ಮದುವೆ ಆಗಿ ಒಬ್ಬ ಮಗನೂ ಇದ್ದ. ಇತ್ತ ಅಮೇರಿಕದ ಎಲ್ಮ್ ಮರಗಳಿಗೆ ಒಂದು ಸಾಂಕ್ರಾಮಿಕರೋಗ ತಗುಲಿತ್ತು, 'ಡಚ್ ಎಲ್ಮ್ ರೋಗ'ವೆಂದು ಕರೆಸಿಕೊಂಡ ಈ ಹೆಮ್ಮಾರಿ ರೋಗಕ್ಕೆ ಕೆಲವೇ ದಿನಗಳ ಅಂತರದಲ್ಲಿ ಲೆಕ್ಕವಿಲ್ಲದಷ್ಟು ಮರಗಳು ಬಲಿಯಾಗತೊಡಗಿದವು.

ಕೆಲವೇ ದಿನಗಳ ಹಿಂದೆ ಒಂದು ಮದುವೆಯ ಮನೆಯ ಮುಂದಿನ ಚಪ್ಪರದಂತೆ, ಸದಾ ಹಚ್ಚಹಸುರಿನ ಚಪ್ಪರದಿಂದ ಸ್ವಾಭಾವಿಕವಾಗಿ ಅಲಂಕೃತಗೊಂಡು ಕಂಗೊಳಿಸುತ್ತಿದ್ದ ಬೀದಿಗಳು ಈಗ ಒಣ ಮರುಭೂಮಿಗಳಂತೆ ಬದಲಾಗತೊಡಗಿದ್ದವು. ಉಚಿತವಾಗಿ ಪ್ರಾಕೃತಿಕವಾಗಿ ದೊರೆಯುತ್ತಿದ್ದ ಮನೋಲ್ಲಾಸ ದಿನೇ ದಿನೇ ಸೊರಗಿ ಹೋಗಲಾರಂಬಿಸಿತ್ತು. ಇದು ನನ್ನ ಮನೆಯಂಗಳ ನ್ಯೂ ಇಂಗ್ಲೆಂಡಿನ ಯರ್ ಮೌತ್ ಪ್ರಾಂತ್ಯದಲ್ಲಿ ಹಸುರು ಕೆಂಪಾದ ಒಂದು ಅಧ್ಯಾಯ.

ಆ ದಿನಗಳಲ್ಲಿ ಈ ವೃಕ್ಷಗಳನ್ನು ರಕ್ಷಿಸಿಕೊಳ್ಳುವುದು ನಮ್ಮ ಬಹುಮುಖ್ಯ ಜವಾಬ್ದಾರಿಯಾಗಿತ್ತು. ಆದರೆ ಇದು ಸರಳವಾಗಿ ಈಡೇರುವಂತ ಕಾರ್ಯವಾಗಿರಲಿಲ್ಲ. ಏಕೆಂದರೆ, ರಸ್ತೆಯ ಇಕ್ಕೆಲಗಳಲ್ಲಿ ಸಾಲು ಸಾಲಾಗಿ ಒತ್ತೊತ್ತಾಗಿ ನೆಟ್ಟಿದ್ದರಿಂದ ಮರಗಳ ಬೇರುಗಳು ಪರಸ್ಪರ ಒಂದಕ್ಕೊಂದು ಬೆಸೆದು ಕೊಂಡಿದ್ದವು. ಇದರಿಂದಾಗಿ ರೋಗ ಪಸರಿಸಲು ಹೆಚ್ಚೇನೂ ಸಮಯ ತೆಗೆದುಕೊಳ್ಳಲಿಲ್ಲ. ರೋಗವನ್ನು ಹತೋಟಿಗೆ ತರಲು, ಆರಂಭದಲ್ಲಿ DDT ಸಿಂಪಡಿಸಲಾಯಿತು. ನಂತರ ಸೂಕ್ತ ಚುಚ್ಚುಮದ್ದನ್ನು ನೇರವಾಗಿ ಮರದ ಬೇರಿಗೇ ನೀಡಲಾಯಿತು.

ಹೀಗಿರುವಾಗ ನನ್ನ ಕಣ್ನಿಗೆ ಬಿದ್ದವ ಈ "ಹೆರ್ ಬೀ ". ಹೌದು ನಾವು ಇವನನ್ನು ಪ್ರೀತಿಯಿಂದ ಹೆರ್ ಬೀ ಅಂತ ಕರಿತಾ ಇದ್ವಿ. ಬೃಹದಾಕಾರವಾಗಿ ಬೆಳೆದಿದ್ದ ಈ ನನ್ನ ಗೆಳೆಯನ ಮೇಲೆ ಮೊದಲ ದಿನದಿಂದಲೇ ನನಗೆ ಏನೋ ಒಂಥರಾ ವಿಶೇಷ ಕಾಳಜಿ ಬೆಳೆಯುತ್ತಾ ಹೋಯಿತು.

ರೋಗಕ್ಕೆ ತುತ್ತಾಗಿದ್ದ ಇವನ ಕೆಲವು ಕೈಗಳನ್ನು ಕತ್ತರಿಸಿ ತೆಗೆಸಿದೆ. ವಿಶೇಷ ಔಷಧಿ, ಉಪಚಾರ ನೀಡಲು ಮುಂದಾದೆ. ಒಮ್ಮೊಮ್ಮೆ ವಾರಕ್ಕೊಮ್ಮೆ, ಒಮ್ಮೊಮ್ಮೆ ದಿನಕ್ಕೊಮ್ಮೆ ಅವನನ್ನು ನೋಡಲು ಹೋಗುತ್ತಿದ್ದೆ. ಕಡೆಗೆ ಆ ಹೆಮ್ಮಾರಿ ರೋಗ, ನನ್ನ ಕಾಳಜಿಗೆ ಮಣಿದು ನನ್ನ ಗೆಳೆಯನಿಂದ ದೂರವಾಯ್ತು. ಅಂದಿನಿಂದ ಹೆರ್ ಬೀ ನನ್ನ ಪರಮಾಪ್ತ ಸ್ನೇಹಿತನಾದ. ನನ್ನ ಹೆಂಡತಿಗೆ ಸಹ ಇವನ ಮೇಲೆ ತುಂಬಾ ಪ್ರೀತಿ ಬೆಳೆದಿತ್ತು, ಒಮ್ಮೊಮ್ಮೆ ಇವನ ಮೇಲೆ ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದಳು ಕೂಡ :)

ಇವನನ್ನು ಅಪ್ಪಿಕೊಳ್ಳಬೇಕೆಂದರೂ ಸುಮಾರು ಐದು ಜನ, ಪರಸ್ಪರ ಕೈಜೋಡಿಸಬೇಕಿತ್ತು. ಒಂದೂವರೆ ಮೈಲಿ ದೂರದಿಂದ ವೀಕ್ಷಿಸಿದರೂ ಸಹ ವಿಶೇಷವಾಗಿ ಕಾಣಿಸಿಕೊಂಡು, ತನ್ನನ್ನ ತಾನು ಗುರ್ತಿಸಿಕೊಳ್ಳುವಷ್ಟು ಎತ್ತರಕ್ಕೆ ಬೆಳೆದಿದ್ದ ನನ್ನ ಗೆಳೆಯ.

ಬನ್ನಿ, ಬೆಂಗಳೂರಿನಲ್ಲಿನ ಮರಗಳನ್ನು ಕಡಿಯೋಣ ಮತ್ತು ಉಳಿಸೋಣ
ನನ್ನ ಶುಶ್ರೂಷೆಯ ಫಲವಾಗಿ, ಸುಮಾರು ಹದಿನಾಲ್ಕು ಬಾರಿ ಆ ಡಚ್ ಸಾಂಕ್ರಾಮಿಕರೋಗದಿಂದ ಯಶಸ್ವಿಯಾಗಿ ಪಾರಾದ. ಅಮೆರಿಕ ನಕ್ಷೆಯಲ್ಲಿಯೇ ವಿಶೇಷ ಸ್ಥಾನ ಗಿಟ್ಟಿಸಿಕೊಂಡು ಜಗತ್ತಿನಾದ್ಯಂತ ಅಭಿಮಾನಗಳನ್ನು ಹೊಂದಿದ್ದ ಹೆರ್ ಬೀ. ಜಗತ್ತಿನ ಮೂಲೆ ಮೂಲೆಗಳಿಗೆ ಇವನ ಜನಪ್ರಿಯತೆ ಹಬ್ಬಿತ್ತು. ತನ್ನನ್ನು ನೋಡಲು ಬರುವ ಅಭಿಮಾನಿಗಳನ್ನು ಸಂತುಷ್ಟಿಗೊಳಿಸುತ್ತಿದ್ದ. ಅಷ್ಟೊಂದು ಸುಂದರ, ಅಷ್ಟೊಂದು ಖ್ಯಾತಿವಂತ ಆಗಿದ್ದ ನನ್ನ ಹೆರ್ ಬೀ.

ಬರಬರುತ್ತಾ ಇವನ ಜಯಪ್ರಿಯತೆ ಎಷ್ಟು ಬೆಳೆದಿತ್ತೆಂದರೆ, ಶಾಲಾ ಮಕ್ಕಳಿಗೆ ಇವನ ಬಗ್ಗೆ ಒಂದು ಪಾಠವನ್ನೇ ಅಳವಡಿಸಲಾಗಿತ್ತು. ಇದೀಗ ಇವನಿಗೆ ಸುಮಾರು 250 ವರ್ಷಗಳಾಗಿರಬಹುದು. ಇನ್ನು ಇವನ ಆಯುಷ್ಯರೇಖೆ ಮುಗಿದಿದೆ ಎಂದು ಸಂಬಂಧಿಸಿದ ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಇನ್ನು ನಾನೂ ಸಹ ನಿಸ್ಸಹಾಯಕನಾಗಿ ಕೈ ಚೆಲ್ಲುತ್ತಿದ್ದೇನೆ. ನನಗೂ ಅಂತ್ಯ ಸಮೀಪಿಸಿದೆ. ಈಗ ಇವನ ಅಂಗಾಂಗಗಳನ್ನು ಬೇರ್ಪಡಿಸಿ, ಧರೆಗುರುಳಿಸಲು ಇಪ್ಪತ್ತು ಸಾವಿರ ಅಮೆರಿಕನ್ ಡಾಲರು ಗುತ್ತಿಗೆ ನೀಡಿದ್ದಾರೆ.

ನಂತರ ಇವನ ಬುಡದಲ್ಲಿರುವ ರೇಖೆಗಳ ಎಣಿಕೆ ಮಾಡಿ ಇವನ ನಿಜವಾದ ವಯಸ್ಸನ್ನು ತಿಳಿಯುತ್ತಾರಂತೆ. ಇವನ ಬೇರ್ಪಡಿಸಿದ ಅಂಗಾಂಗಗಳನ್ನು ಅನೇಕ ಉದ್ದೇಶಗಳಿಗೆ ಬಳಸಿಕೊಳ್ಳುವ ಯೋಜನೆಗಳನ್ನ ಹಾಕಿಕೊಂಡಿದ್ದಾರೆ. ಅಂತಹ ಹೆಮ್ಮಾರಿ ಸಾಂಕ್ರಾಮಿಕರೋಗದಿಂದ ಪಾರಾಗಿ, ಬದುಕುಳಿಯಲು ಇವನಲ್ಲಿರುವ ವಿಶೇಷ ಜೀವಾಣುಗಳನ್ನು ಗುರ್ತಿಸಿ, ಮುಂದಿನ ಪೀಳಿಗೆಗೆ ಜೀವ ನಿರೋಧಕ ಔಷಧಿಯನ್ನು ತಯಾರಿಸುವ ಉದ್ದೇಶವೂ ಇದೆಯಂತೆ.

ನಾನು ಮೂರು ವರ್ಷದವನಿದ್ದಾಗಲೇ ನನ್ನ ತಂದೆಯನ್ನು ಕಳೆದುಕೊಂಡೆ. ನಾಲ್ಕು ವರ್ಷದವನಿದ್ದಾಗ ನನ್ನ ತಾಯಿಯನ್ನು ಕಳೆದುಕೊಂಡೆ, ಇಲ್ಲಿಗೆ ಹದಿನೈದು ವರ್ಷಗಳ ಹಿಂದೆ ಕ್ಯಾನ್ಸರ್ ರೋಗ ಬಂದು ನನ್ನ ಹೆಂಡತಿಯನ್ನು ಕರೆದುಕೊಂಡು ಹೋಯಿತು. ಇದೀಗ ನನ್ನ ಜೀವದ ಗೆಳೆಯ ಹೆರ್‍ಬೀ ಯೂ ನನ್ನಿಂದ ದೂರ ತೆರಳುತ್ತಿದ್ದಾನೆ. ಇನ್ನೇನು ಇಷ್ಟರಲ್ಲೇ ನನಗೂ ಕರೆ ಬರಲಿದೆ. ಈಗ ನನಗೂ ಸಹ ನೂರಾ ಒಂದು ವರ್ಷಗಳುರುಳಲಿವೆ. ನಾನೂ ಸಹ ಅಜ್ಞಾತಕ್ಕೆ ತೆರಳಲಿದ್ದೇನೆ. "ಇಲ್ಲಿ ಯಾರೂ/ಯಾವುದೂ ಶಾಶ್ವತವಲ್ಲ. ಆದರೆ ನಾನು ತೆರಳಿದ ನಂತರ ನನ್ನ ಅಗಲಿಕೆಗೆ ಯಾರೂ ದುಃಖಿಸಬೇಕಿಲ್ಲ. ಇದ್ದಷ್ಟು ಕಾಲ ನನ್ನಿಂದಾಗಬಹುದಾಗಿದ್ದನ್ನು ನಾನು ಪೂರೈಸಿ ಹೋಗುತ್ತಿದ್ದೇನೆ."

ಇತಿ ನಿಮ್ಮ ವಿಶ್ವಾಸಿ,
ಪ್ರಾಂಕ್ ನೈಟ್,
ನಿವೃತ್ತ ವ್ಯಕ್ಷಪಾಲಕ.
ವಯಸ್ಸು :101ವರ್ಷ
ಸ್ಥಳ : ಯುಎಸ್ಎ
ದಿನಾಂಕ : ಜನವರಿ 8, 2010

**

ಕಳೆದ ಜನವರಿಯಲ್ಲಿ ಗತ್ಯಂತರವಿಲ್ಲದೆ ಹೆರ್ ಬೀ ಗೆ ಕೊಡಲಿಗಳು ಏಟುಗಳು ಬಿದ್ದವು. ಅದನ್ನು ನಾವು ಸಾವು ಅಥವಾ ಕೊಲೆ ಎಂದು ಕರೆಯುವುದಿಲ್ಲ. ಅದು ದಯಾಮರಣವಲ್ಲದೆ ಮತ್ತೇನು ಅಲ್ಲ. ಕಳೆದ ಜನವರಿ ಎರಡನೆ ವಾರದಲ್ಲಿ ಕೊನೆಯುಸಿರೆಳೆದ ಹೆರ್ ಬೀ ಕುರಿತು ಈಗ ಮರಣೋತ್ತರ ಅಧ್ಯಯನಗಳು ಆರಂಭವಾಗಿದೆ. ಕೊಲಂಬಿಯಾ, ಮೇಯ್ನೆ ವಿಶ್ವವಿದ್ಯಾಲಯದ ವಿಜ್ಞಾನಿಗಳು ಹೆರ್ ಬೀ ಹೇಗೆ ಬದುಕಿದ್ದ, ಹೇಗೆ ಬಾಳಿದ ಎಂದು ಅಭ್ಯಸಿಸತೊಡಗಿದ್ದಾರೆ. ಹೆರ್ ಬೀ ಕಳೇಬರವು ತನ್ನ ಆಯಸ್ಸಿನ ಪ್ರಮಾಣ ಮತ್ತು ಕಳೆದ ಮೂರು ಶತಮಾನಗಳ ವಾತಾವರಣ ವರದಿಗಳನ್ನು ಬಿಚ್ಚಿಡುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X