• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಶಾಲಾ ಕಟ್ಟಡವಾದ ಎಡ್ಮಂಡ್ ಹಿಲರಿ ಮನೆ

By Shami
|
Google Oneindia Kannada News

ಆಕ್ಲೆಂಡ್, ಮೇ 12 : ಹಿಮಾಲಯ ಪರ್ವತದ ಉತ್ತುಂಗ ಏರಿದ ಮೊದಲ ಸಾಹಸಿ ಸರ್ ಎಡ್ಮಂಡ್ ಹಿಲರಿ ಅವರ ಆಕ್ಲೆಂಡ್ ನಿವಾಸ ಇನ್ನು ಮುಂದೆ ಒಂದು ಶಾಲಾ ಕಟ್ಟಡವಾಗಿ ಮಾರ್ಪಡಲಿದೆ. ಈ ಮೂಲಕ ನ್ಯೂಜಿಲೆಂಡಿಗೆ ಶಾಶ್ವತ ಕೀರ್ತಿ ತಂದ ಪರ್ವತಾರೋಹಿಯ ನೆನಪನ್ನು ಮತ್ತಷ್ಟು ಅರ್ಥಪೂರ್ಣಗೊಳಿಸಿದ ಹೆಗ್ಗಳಿಕೆ ಇವತ್ತಿನ ಆಕ್ಲೆಂಡ್ ನಾಗರಿಕರ ಪಾಲಾಗಲಿದೆ.

ಎಡ್ಮಂಡ್ ಮತ್ತು ಅವರ ಪತ್ನಿ ಲೇಡಿ ಲೂಸಿ ಹಿಲರಿ ಅವರು ಈ ಮನೆಯನ್ನು 1959ರಲ್ಲಿ ಕಟ್ಟಿಸಿದ್ದರು. ಇದನ್ನು ಆಕ್ಲೆಂಡಿನ ಉದ್ಯಮಿ ಟೆರ್ರಿ ಜಾರ್ವಿಸ್ 2009ರಲ್ಲಿ ಒಂದೂವರೆ ದಶಲಕ್ಷ ಅಮೆರಿಕನ್ ಡಾಲರು ಕೊಟ್ಟು ಖರೀದಿಸಿದ್ದರು. ಈಗ ಮನೆಯನ್ನು ಜಾರ್ವಿಸ್ ಶಾಲೆಗೆ ಕಟ್ಟಡ ದೇಣಿಗೆಯಾಗಿ ಕೊಟ್ಟಿರುತ್ತಾರೆ.

ಆಕ್ಲೆಂಡಿನಿಂದ 20 ಕಿಲೋಮೀಟರ್ ದೂರವಿರುವ ಶಾಲೆಯನ್ನು ನವೀಕರಿಸಿ ಅದಕ್ಕೆ Sir Edmund Hillary Leadership Centre ಎಂದು ಪುನರ್ ನಾಮಕರಣ ಮಾಡಲಾಗುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X