• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬ್ರಿಟನ್ ಕನ್ನಡಿಗರ ವಸಂತೋತ್ಸವ

By Shami
|

ಪ್ರಿಯ ಸ್ನೇಹಿತರೆ ಹಾಗೂ ಕನ್ನಡಿಗ ಬಂಧುಗಳೆ,

ಆಂಗ್ಲರ ನೆಲದಲ್ಲಿ ನೆಲೆಸಿರುವ ಕನ್ನಡಿಗರು ಆಯೋಜಿಸಿರುವ 2010ನೇ ಸಾಲಿನ ವಸಂತೋತ್ಸವಕ್ಕೆ ಆಂಗ್ಲನಾಡಿನ ಸಮಸ್ತ ಕನ್ನಡಿಗರಿಗೆ ನಮಸ್ಕಾರಗಳು. ವಸಂತ ಋತುವಿನ ನವೋಲ್ಲಾಸ, ಹೊಸತನ ಎಲ್ಲರಿಗೂ ಹರುಷ ತರಲೆಂದು ಕನ್ನಡಿಗರುಯುಕೆ ಹಾರೈಸುತ್ತದೆ. ಕಾರ್ಯಕ್ರಮದ ವಿವರಗಳು ಹೀಗಿವೆ:

ದಿನಾಂಕ : 15 ಮೇ 2010 ಶನಿವಾರ

ಸ್ಥಳ : ಕ್ಯಾನನ್ಸ್ ಪ್ರೌಢಶಾಲೆ, ಶಾಲ್ಡನ್ ರಸ್ತೆ, ಹ್ಯಾರೊ, ಮಿಡ್ಲ್ ಸೆಕ್ಸ್, HA8 6AN

ಸಮಯ : ಮಧ್ಯಾಹ್ನ 12ರಿಂದ ಸಂಜೆ 7ರವರೆಗೆ

ದಿನದ ಪ್ರಮುಖ ಆಕರ್ಷಣೆ:

* ಕನ್ನಡದ ಹೆಸರಾಂತ ರಾಕ್ ಸಂಗೀತ ಕಲಾವಿದ ರಘು ದೀಕ್ಷಿತ್ ತಮ್ಮ ರಾಕ್ ಬ್ಯಾಂಡಿನೊಂದಿಗೆ

* ಕನ್ನಡ ಚಲನಚಿತ್ರದ ಹಾಸ್ಯಕಲಾವಿದ ಕಾಮಿಡಿ ಕಿಂಗ್ ಕೋಮಲ್

* ಅಶ್ವಿನಿ ಪ್ರಭಾಕರ್ ಅವರ ಸುಮಧುರ ಗಾನಸುಧೆ

* ಸಿಲ್ಲಿ ಲಲ್ಲಿ ಖ್ಯಾತಿಯ ರೂಪಾ ಪ್ರಶಾಂತ್ ಅವರಿಂದ ಕಾರ್ಯಕ್ರಮ ನಿರೂಪಣೆ, ವಿನೋದಾವಳಿ

* ನಮ್ಮ ಸ್ಥಳೀಯ ಪ್ರತಿಭೆಗಳಿಂದ ನೃತ್ಯ, ಸಂಗೀತ ಹಾಗೂ ಲಘು ಪ್ರಹಸನ

ಕಾರ್ಯಕ್ರಮ, ನೋಂದಣಿ ಮತ್ತು ರುಚಿಕರ ಭೋಜನದೊಂದಿಗೆ ಕಾರ್ಯಕ್ರಮಗಳು 12 ಘಂಟೆ ಪ್ರಾರಂಭವಾಗಿ ಸಂಜೆ 7ಕ್ಕೆ ಮುಕ್ತಾಯಗೊಳ್ಳಲಿದೆ.

ನೋಂದಣಿ ಮತ್ತು ಪ್ರವೇಶ ದರ : ನಮ್ಮ ಅಂತರ್ಜಾಲ ನೋಂದಣಿ ಈಗ ತೆರೆದಿದೆ. ಈ ಉಲ್ಲೇಖ ಕ್ಲಿಕ್ಕಿಸಿ ವಿಳಂಬಿಸದೆ ತಮ್ಮ ಹಾಜರಾತಿಯನ್ನು ಧೃಢಪಡಿಸಿಕೊಳ್ಳಿ. ಪ್ರವೇಶದರ : ವಯಸ್ಕರಿಗೆ £15. 5ರಿಂದ 12 ವಯಸ್ಸಿನ ಮಕ್ಕಳಿಗೆ £8. 5 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ಉಚಿತ. (ಈ ಪ್ರವೇಶ ಶುಲ್ಕ ಮೇ 5ರೊಳಗೆ ನೋಂದಾಯಿಸಿ, ಹಣಪಾವತಿ ಮಾಡಿದರೆ ಮಾತ್ರ ಅನ್ವಯಿಸುತ್ತದೆ.)

ವಾಹನ ನಿಲುಗಡೆಗೆ ವ್ಯವಸ್ಥೆ ಶಾಲಾ ಆವರಣದಲ್ಲಿ ಸಾಕಷ್ಟಿದೆ. ಇದು ಭರ್ತಿಯಾದಲ್ಲಿ ಹೊರಗಿನ ರಸ್ತೆಬದಿಯ ನಿಲುಗಡೆಗಳನ್ನು ಉಪಯೋಗಿಸಬಹುದು. ಸಾರ್ವಜನಿಕ ವಾಹನ ಸಂಚಾರಕ್ಕೆ ಅಡಚಣೆಯುಂಟಾಗದಂತೆ ದಯವಿಟ್ಟು ಕಾಳಜಿವಹಿಸಿ.

ಸಂಪರ್ಕ ಮಾಹಿತಿ : ಯಾವುದಕ್ಕೂ ಕನ್ನಡಿಗರುಯುಕೆ ಅಂತರ್ಜಾಲ ಪುಟವನ್ನು ಕಾರ್ಯಕ್ರಮದ ಮಾಹಿತಿ ಬಗ್ಗೆ ಅಗಾಗ್ಗೆ ಭೇಟಿಮಾಡುತ್ತಿರಿ ಅಥವಾ ಅಡ್ಮಿನ್@ಕನ್ನಡಿಗರುಯುಕೆ.ಕಾಂಗೆ ಈಮೈಲ್ ಕಳಿಸಿ. ಅದಲ್ಲದೆ ನಮ್ಮ ನೋಂದಣಿ ಸಮಿತಿಯ ಈ ಕೆಳಗಿನ ಸದಸ್ಯರಲ್ಲೊಬ್ಬರನ್ನು ಸಂಪರ್ಕಿಸಬಹುದು.

ವಿರೂಪಾಕ್ಷ ಪ್ರಸಾದ್ (07860 369 706), ದಿಲೀಪ್ (07919 916 338), ವಿನಯ್ ರಾವ್ (07785 111 622). ಈ ಬರಹ/ಮಿಂಚೆ(ಮೈಲ್)ಯನ್ನು ನಿಮ್ಮ ಬಂಧುಬಳಗದವರಿಗೆ, ಮಿತ್ರರಿಗೆ ಅಥವ ನಿಮ್ಮ ಕನ್ನಡ ಸಹೋದ್ಯೋಗಿಗಳಿಗೆ/ಕಚೇರಿಯಲ್ಲಿ ಪ್ರಕಟಿಸಿ, ಆಂಗ್ಲನಾಡಿನ ಕನ್ನಡಿಗರೆಲ್ಲ ಈ ಸಮಾರಂಭಕ್ಕೆ ಕಲೆಯುವಂತೆ ನೆರವಾಗಬೇಕೆಂದು ವಿನಮ್ರ ವಿನಂತಿ.

ಕನ್ನಡಿಗರುಯುಕೆ ತಂಡ

ಆಂಗ್ಲ ನಾಡಿನಲ್ಲಿ ಸಶಕ್ತ ಕನ್ನಡ ಸಮುದಾಯದ ನಿರ್ಮಾಣಕ್ಕಾಗಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more