ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಂದೂರಿ ಚಿಕನ್ ತಿಂದು ಪ್ರತಿಭಟನೆ

By Shami
|
Google Oneindia Kannada News

Aussies eat indian cuisine to protest attack on indians
ಮೆಲ್ಬೋರ್ನ್, ಫೆ. 24 : ನಾನ್, ರೋಟಿ, ಕಡಾಯಿ ಚಿಕನ್, ತಂದೂರಿ ಚಿಕನ್, ಟಿಕ್ಕಾ ಮಸಾಲಾ, ದೆಂ ಬಿರಿಯಾನಿ ಮುಂತಾದ ಭಾರತೀಯ ಮಸಾಲೆ ಅಡುಗೆಗಳನ್ನು ಸೇವಿಸುವುದರ ಮೂಲಕ ಆಸ್ಟ್ರೇಲಿಯಾದ ಪ್ರಜ್ಞಾವಂತ ಜನತೆ ಭಾರತದ ಪರವಾಗಿ ವಿನೂತನ ಪ್ರತಿಭಟನೆ ನಡೆಸಿದರು.

ತಮ್ಮ ದೇಶದಲ್ಲಿ ಭಾರತೀಯರ ವಿರುದ್ಧ ಪದೇಪದೇ ನಡೆಯುತ್ತಿರುವ ಆಕ್ರಮಣ, ಹಿಂಸೆಯನ್ನು ವಿರೋಧಿಸುವ ಸಲುವಾಗಿ ಬುಧವಾರ ಇಲ್ಲಿ ಸಾಮೂಹಿಕ ಭಾರತೀಯ ಭೋಜನ ಕಾರ್ಯಕ್ರಮ ವ್ಯವಸ್ಥೆ ಮಾಡಲಾಗಿತ್ತು.

ವಿಕ್ಟೋರಿಯಾದ ಪ್ರಧಾನಿ ಜಾನ್ ಬ್ರಂಬಿ ಭಾಗವಹಿಸಿದ್ದ ಪ್ರತಿಭಟನಾ ಊಟದಲ್ಲಿ ಇಲ್ಲಿನ ಪ್ರಮುಖ ಭಾರತೀಯ ಪ್ರಜೆಗಳು ಭಾಗವಹಿಸಿದ್ದರು. ಫ್ಲಿಂಡರ್ಸ್ ಸ್ಟ್ರೀಟ್ ನಲ್ಲಿರುವ ಹೋಟೆಲ್ ದೇಸಿ ಢಾಬಾದಲ್ಲಿ ಊಟ ಇಟ್ಟುಕೊಳ್ಳಲಾಗಿತ್ತು.

ಭಾರತೀಯರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ವಿರುದ್ಧ ಪ್ರತಿಭಟಿಸುವ ಕಾರ್ಯಕ್ರಮಕ್ಕೆ Vindaloo Against Violence ಎಂದು ಹೆಸರಿಸಲಾಗಿದೆ. ಇಂಥ ಕೃತ್ಯಗಳಿಂದ ತಮ್ಮ ದೇಶಕ್ಕೆ ಕೆಟ್ಟ ಹೆಸರು ಬರುತ್ತಿದೆಯೆಂದೂ ಹಾಗೂ ಆಸ್ಟ್ರೇಲಿಯಾ ವಿರುದ್ಧ ಮಾಧ್ಯಮಗಳ ಮೂಲಕ ಕೆಟ್ಟ ಪ್ರಚಾರ ದೊರೆಯುತ್ತಿದೆಯೆಂದೂ ವಿಂಡಲೂ ಚಳವಳಿಗಾರರು ಹೇಳಿದ್ದಾರೆ. ಇದನ್ನು ಹೋಗಲಾಡಿಸುವ ಉದ್ದೇಶದಿಂದ ಆಕ್ರಮಣಕಾರರ ವಿರುದ್ಧ ಸಾರ್ವಜನಿಕ ಅಭಿಪ್ರಾಯ ಮೂಡಿಸಲು ಶ್ರಮಿಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X