ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೌದಿ : ಭಾರತದ ಮುಸ್ಲಿಮರಿಗೆ ಅಸ್ತಿತ್ವದ ಸಮಸ್ಯೆ

By * ಅಶ್ರಫ್ ಮಂಜ್ರಾಬಾದ್, ಸೌದಿ ಅರೇಬಿಯಾ
|
Google Oneindia Kannada News

India Fraternity Forum, Riyad, Saudi Arabia
ರಿಯಾದ್, ಫೆ. 15 : ಇಂಡಿಯಾ ಫ್ರೆಟರ್ನಿಟಿ ಫೋರಮ್ ರಿಯಾದ್ ಘಟಕವು ರಿಯಾದಿನಲ್ಲಿ "ಭಾರತದ ಮುಸ್ಲಿಮರ ಪ್ರಸಕ್ತ ಸನ್ನಿವೇಶ" ಎಂಬ ವಿಚಾರಗೋಷ್ಠಿಯನ್ನು ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜನಾಬ್: ಕೆ.ಎಂ. ಶರೀಫ್ ಭಾರತದಲ್ಲಿ ಮುಸ್ಲಿಮರು ಮಾತ್ರವಲ್ಲ ಹಿಂದುಳಿದ ಜನರು ಮತ್ತು ಶೋಷಿತ ವರ್ಗದ ಜನತೆಯೂ ಸಹ ಬಡತನ, ನಿರುದ್ಯೋಗ, ಮತ್ತು ಅಸಮಾನತೆಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಜೊತೆಗೆ ಮುಸ್ಲಿಮರು ತಮ್ಮ ಅಸ್ತಿತ್ವದ ಕುರಿತ ಸಮಸ್ಯೆಯನ್ನು ಹಲವು ಪ್ರದೇಶಗಳಲ್ಲಿ ಎದುರಿಸಬೇಕಾಗಿ ಬರುತ್ತಿರುವುದು ಈ ದೇಶ ಆಳಿದ ಬೇಜವಾಬ್ಧಾರಿ ಕಪಟ ರಾಜಕೀಯ ಪಕ್ಷಗಳ ಆಡಳಿತದ ಕಾರಣದಿಂದಲೇ ಹೊರತು ಇನ್ನಾವುದೇ ಕಾರಣದಿಂದಲ್ಲ ಎಂದು ಹೇಳಿದರು.

ಭಾರತದ ಸಂವಿಧಾನ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸಂವಿಧಾನವಾಗಿದ್ದು ಡಾ: ಬಾಬಾ ಸಾಹೇಬ್ ಅಂಬೇಡ್ಕರ್ ನೇತೃತ್ವದಲ್ಲಿ ರಚಿಸಿದ ಈ ಸಂವಿಧಾನದಲ್ಲಿ ದೇಶದ ಹಿಂದುಳಿದ, ಅಲ್ಪಸಂಖ್ಯಾತ ಮತ್ತು ಶೋಷಿತ ಜನರಿಗೆ ಧಾರ್ಮಿಕ, ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕ ಭದ್ರತೆಯನ್ನು ನೀಡಲಾಗಿದ್ದರೂ ಇದುವರೆಗೂ ಅದನ್ನು ಸಮರ್ಪಕವಾಗಿ ಜಾರಿಗೆ ತಂದಿಲ್ಲ. ಜೊತೆಗೆ ದೇಶದಲ್ಲಿ ದೇಶ ವಿರೋಧಿ ಮನೋಭಾವನೆಯಿಂದ ಕಾರ್ಯಾಚರಿಸುತ್ತಿರುವ ಕೆಲ ಫ್ಯಾಸಿಸ್ಟ್ ಸಂಘಟನೆಗಳು ಭಾರತದ ಸೌಹಾರ್ದ ಪರಂಪರೆಗೆ ಧಕ್ಕೆ ತರಲು ಯತ್ನಿಸುತಿದ್ದು ಇಂತಹ ಸಂಘಟನೆಗಳಿಂದಾಗಿ ದೇಶದಲ್ಲಿ ಶೋಷಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ಅಭಿವೃದ್ದಿಗೆ ತೊಡಕುಂಟಾಗಿದೆ ಮಾತ್ರವಲ್ಲ ಇದು ಇವು ದೇಶದ ಅಭಿವೃದ್ಧಿಗೂ ಮಾರಕವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಐ.ಎಫ್.ಎಫ್. ಕರ್ನಾಟಕ ವಿಭಾಗದ ಅಧ್ಯಕ್ಷರಾದ ಜನಾಬ್ ಅಬ್ದುಲ್ ಮಜೀದ್ ವಿಟ್ಲ ಅನಿವಾಸಿ ಭಾರತೀಯರ ಎಲ್ಲಾ ಸಮಸ್ಯೆಗಳಿಗೆ ಐ.ಎಫ್.ಎಫ್. ಜಾತಿ, ಮತ,ಧರ್ಮ ಮತ್ತು ಭಾಷೆಗಳ ಭೇದವಿಲ್ಲದೆ ಸ್ಪಂದಿಸುತ್ತಿದೆ. ಕಳೆದ ವರ್ಷ ಭಾರತೀಯ ರಾಯಭಾರಿ ಕಛೇರಿಯ ಸಹಕಾರದೊಂದಿಗೆ ಸುಮಾರು ಆರುನೂರು ಅನಿವಾಸಿ ಭಾರತೀಯರ ಸಮಸ್ಯೆಗಳಿಗೆ ಸ್ಪಂದಿಸಿದ್ದು ಜೊತೆಗೆ ಹಜ್ ಯಾತ್ರೆಗೆ ಬರುವ ಯಾತ್ರಾರ್ಥಿಗಳಿಗೆ ಸೇವೆಯನ್ನೂ ನೀಡುತ್ತಿದೆ ಎಂದು ಹೇಳಿದರು.

ಐ.ಎಫ್.ಎಫ್. ಸೌದಿ ಅರೇಬಿಯಾ ಸಂಯೋಜಕರಾದ ಜನಾಬ್: ಅಬ್ದುಲ್ ಬಷೀರ್ ಸಾಹೇಬ್ ಕಾರ್ಯಕ್ರಮವನ್ನು ಉದ್ಘಾಟಿಸಿದರೆ ಜನಾಬ್ ಜಾಫರ್ ಫೈಜಿ ಕಿರಾತ್ ವಾಚಿಸಿದರು. ಜನಾಬ್ ಹಾರಿಸ್ ಅಹಮದ್ ಸುರತ್ಕಲ್ ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದಲ್ಲಿ ಜನಾಬ್ ಹಾರಿಸ್ ಕಲ್ಲಡ್ಕ ಮತ್ತು ದಾವೂದ್ ಸೂರಿಂಜೆ ಸುವ್ಯಾಶ್ರವಾಗಿ ಹಾಡಿದ ಮೌಲಾನಾ ಅಲ್ಲಮಾ ಇಕ್ಬಾಲ್ ರಚಿಸಿದ ಸಾರೆ ಜಹಾನ್ ಸೆ ಅಚ್ಛಾ ಹಿಂದುಸ್ಥಾನ್ ಹಮಾರಾ ಗೀತೆ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು. ಜನಾಬ್ ಹಾರಿಸ್ ಅಂಗರಗುಂಡಿ ಕಾರ್ಯಕ್ರಮವನ್ನು ನಿರೂಪಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X