ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ ಕನ್ನಡ ಸಮ್ಮೇಳನಕ್ಕೆ ಕಣವಿ ಅಧ್ಯಕ್ಷತೆ

By Prasad
|
Google Oneindia Kannada News

Chennaveera Kanavi
ಧ್ವನಿ ಪ್ರತಿಷ್ಠಾನವು ತನ್ನ ಬೆಳ್ಳಿಹಬ್ಬ ಆಚರಣೆಯ ಅಂಗವಾಗಿ "ಕನ್ನಡ ಸಾಹಿತ್ಯ ಸಮ್ಮೇಳನ"ವನ್ನು ದುಬೈನಲ್ಲಿ ಆಯೋಜಿಸಿದೆ. ಕನ್ನಡದ ಚರಿತ್ರೆಯಲ್ಲಿ ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ನಡೆಯುವ ಪ್ರಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಗೆ ಖ್ಯಾತ ಕವಿ ಡಾ. ಚೆನ್ನವೀರ ಕಣವಿ ಅವರು ಆಯ್ಕೆಗೊಂಡಿರುವರು.

ಸಮ್ಮೇಳನವು ದುಬೈ ಜಿಮ್ಸ್ ಪ್ರೈವೆಟ್ ಸ್ಕೂಲ್ ಸಭಾಗೃಹದಲ್ಲಿ ತಾ. 23.04.2010 ಶುಕ್ರವಾರ ಮುಂಜಾನೆ ಗಂಟೆ 10ರಿಂದ ಸಂಜೆ 6.30ರತನಕ ನಡೆಯಲಿದೆ. ಕನ್ನಡ ಸಾಹಿತ್ಯದ ವಿವಿಧ ನೆಲೆಗಳು ಎಂಬ ಎರಡು ಗೋಷ್ಠಿಗಳು, ಗಲ್ಫ್ ಕನ್ನಡಿಗರ ಸಮಸ್ಯೆಗಳ ಬಗ್ಗೆ ವಿಚಾರ ಸಂಕಿರಣ ಹಾಗೂ ಕವಿ ಗೋಷ್ಠಿ ನಡೆಯಲಿದೆ. ಕರ್ನಾಟಕದಿಂದ ಆಗಮಿಸಲಿರುವ ಅತಿಥಿ ಕಲಾವಿದರು ಮನರಂಜನಾ ಕಾರ್ಯಕ್ರಮ ನೀಡಲಿದ್ದಾರೆ. ಸಮ್ಮೇಳನದಲ್ಲಿ ಕರ್ನಾಟಕದಿಂದ ಸಾಹಿತಿಗಳು, ರಾಜಕೀಯ ನಾಯಕರು, ಕಲಾವಿದರು, ಸರಕಾರಿ ಆಧಿಕಾರಿಗಳು ಹಾಗೂ ಇತರ ಗಣ್ಯರು ಆಗಮಿಸಲಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರವೇಶ ಮತ್ತು ಊಟೋಪಚಾರ ಉಚಿತ.

ಮುಂಬೈಯಲ್ಲಿ ಸಮಾನ ಮನಸ್ಕ ಯುವಕರು ಹೊರನಾಡಿನಲ್ಲಿ ಕನ್ನಡ ಚಟುವಟಿಕೆಗಳು ನಿಂತ ನೀರಾಗದೆ ಹರಿಯುವ ನದಿಯಾಗಬೇಕೆಂಬ ಉದ್ದೇಶದಿಂದ 1985ರಲ್ಲಿ ಅಸ್ತಿತ್ವಕ್ಕೆ ತಂದ ಧ್ವನಿ ಪ್ರತಿಷ್ಠಾನ ಈಗ ಬೆಳ್ಳಿ ಹಬ್ಬದ ಸಡಗರದಲ್ಲಿದೆ. ಧ್ವನಿ ಸಮಾಜದಲ್ಲಿ ಒಂದು ಸಂಸ್ಥೆಯಾಗಿ ಗುರುತಿಸಿಕೊಳ್ಳದೆ ಒಂದು ಸಾಮಾಜಿಕ ಪ್ರಕ್ರಿಯೆಯಾಗಬೇಕೆಂಬ ಉದ್ದೇಶದಿಂದ ಕಾರ್ಯಪ್ರವೃತ್ತವಾಗಿದ್ದು ಆ ನಿಟ್ಟಿನಲ್ಲಿ ಸತತ ಇಪ್ಪತೈದು ವರ್ಷಗಳಿಂದ ಕನ್ನಡ ಸೇವೆಯನ್ನು ಮಾಡುತ್ತಾ ಬಂದಿದೆ.

ಸಮ್ಮೇಳನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಅಗಮಿಸಿ ಯಶಸ್ವಿಗೊಳಿಸಬೇಕೆಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ. ಸಮ್ಮೇಳನದಲ್ಲಿ ಮನರಂಜನೆ ಕಾರ್ಯಕ್ರಮ ನೀಡಲು ಯು.ಎ.ಇ.ಯಲ್ಲಿರುವ ಎಲ್ಲಾ ಕನ್ನಡಿಗ ಸಂಘಟನೆಗಳಿಗೂ ಅವಕಾಶ ಕಲ್ಪಿಸಲಾಗುವುದು.

ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ

ಜಯರಾಮ ಸೋಮಯಾಜಿ : 050 7952930, ಮುರುಗೇಶ್ ಗಾಜರೆ : 050 7256594, ಅನಂದ ಬೈಲೂರ್ : 050 4982189, ಸಂಪತ್ ಶೆಟ್ಟಿ : 050 9376796, ಡೊನಾಲ್ಡ್ ಕೊರಿಯ : 050 6941572, ಸರಳಾ ರಘು ಪ್ರಸಾದ್ : 050 2242033, ಮಧುಸೂದನ್ : 050 7643774, ದಾಸ್ : 050 7576238 ಅಥವಾ ಇ-ಮೈಲ್ [email protected] ಮೂಲಕ ಕೂಡಾ ಸಂಪರ್ಕಿಸಬಹುದಾಗಿದೆ.

ಭಾಗವಹಿಸಲು ಬಯಸುವ ಯು.ಎ.ಇ.ಯನ್ನು ಹೊರತುಪಡಿಸಿ ಇತರ ದೇಶದಲ್ಲಿರುವ ಅನಿವಾಸಿ ಕನ್ನಡಿಗರು : [email protected] ಸಂಪರ್ಕಿಸಬಹುದು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X