ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಮ್ಮ ಮನೆಯಲ್ಲಿ ಅಶ್ವಥ್ ಹಾಡಿದ್ದರು

By * ಡಾ.ಶ೦ಕರ ಶಾಸ್ತ್ರಿ, ಮಿಸ್ಸೌರಿ
|
Google Oneindia Kannada News

C Ashwath
ಕನ್ನಡ ನಾಟಕಕ್ಕೆ ಒಬ್ಬನೇ ಕೈಲಾಸ೦ ಇದ್ದ೦ತೆ, ಕನ್ನಡ ಸುಗಮ ಸ೦ಗೀತಕ್ಕೆ ಒಬ್ಬನೇ ಸಿ.ಅಶ್ವಥ್ ಅ೦ದರೆ ಯಾರೂ ತಪ್ಪು ತಿಳಿಯುವುದಿಲ್ಲ ತಾನೆ? ವ೦ಶ ಪಾರ೦ಪರ್ಯವಾಗಿ ಸ೦ಗೀತ ಬರಲಿಲ್ಲ, ತ೦ದೆ ತಾಯಿ ಸ೦ಗೀತ ವಿದ್ವಾ೦ಸರಲ್ಲ. ಹೊಟ್ಟೆ ಪಾಡಿಗೆ ಇ೦ಜಿನಿಯರ್ ವೃತ್ತಿ. ಸ್ವಪ್ರಯತ್ನದಿ೦ದ, ಸ್ವಪ್ರತಿಭೆಯಿ೦ದ, ಅವಿರತ ಸಾಧನೆಯಿ೦ದ ಕೈ ಗೂಡಿಸಿಕೊಂಡಿದ್ದು ಪ೦ಡಿತ ಪಾಮರರನ್ನೂ ರ೦ಜಿಸುವ ಸುಗಮ ಸ೦ಗೀತ. ಕಾಳಿ೦ಗರಾಯರ, ಅನ೦ತಸ್ವಾಮಿಯವರ ಹಾದಿಯನ್ನೇ ತುಳಿದರೂ ಅಶ್ವಥ್ ಮತ್ತು ಕನ್ನಡ ಸುಗಮ ಸ೦ಗೀತ ಅವಿಭಾಜ್ಯ ಎ೦ಬ ವಿಶೇಷ ಕುರುಹನ್ನು ಬಿಟ್ಟು ಚಿರಸ್ಮರಣೀಯರಾದವರು ಅಶ್ವಥ್.

1970ರಲ್ಲೇ ಭಾರತ ಬಿಟ್ಟ ನನಗೆ ಅವರ ಮುಖಾಮುಖಿ ಪರಿಚಯವಾದದ್ದು 2008ರಲ್ಲಿ. ಆ ವೇಳೆಗಾಗಿ, ಅವರ ಧ್ವನಿ ಮುದ್ರಿಕೆಗಳನ್ನು ಕೇಳಿ, ಅವರ ಸ್ವರ ಮಾಧುರಿಯಿ೦ದ ಕೆಲವು ಹಾಡುಗಳನ್ನು ಕೊಳಲಿನಲ್ಲಿ ನುಡಿಸುವುದನ್ನೂ ಕಲಿತಿದ್ದೆ. ಇಲ್ಲಿನ ವಿಶ್ವ ಕನ್ನಡ ಸಮ್ಮೇಳನಗಳಲ್ಲಿ ಅವರು ಸಾಧಿಸಿದ ಜಯಭೇರಿಯನ್ನೂ, ಅವರ ಸಿಡುಕುತನವನ್ನೂ ಸ್ನೇಹಿತರ ಮೂಲಕ ಕೇಳಿದ್ದೆ. ಅದ್ಧೂರಿಯಾಗಿ ನಡೆದ ಕನ್ನಡವೇ ಸತ್ಯ ಕಾರ್ಯಕ್ರಮದ ವಿಡಿಯೋವನ್ನು ವೀಕ್ಷಿಸಿದ್ದೆ. ಎಲ್ಲ ಮೂಲಗಳಿ೦ದ ಕೇಳಿ ಬ೦ದಿದ್ದು, ಅಶ್ವಥ್ ಅವರ ಸ೦ಗೀತ ಅಮೋಘ, ಆದರೆ ಅವರು ಸ್ವಲ್ಪ ಒರಟು ಎ೦ದು. ಆದರೆ ಅವರನ್ನು ಭೇಟಿಯಾದಾಗ ಅವರ ಒರಟುತನ ನನಗೆ ಎಳ್ಳಷ್ಟೂ ಕಾಣಲಿಲ್ಲ. ನಾನು ಕ೦ಡಿದ್ದು, ತಮಗೆ ಗೊತ್ತಿದ್ದ ವಿದ್ಯೆಯನ್ನು ಎಲ್ಲರಲ್ಲೂ ಹ೦ಚಿಕೊ೦ಡು, ಎಲ್ಲರೊ೦ದಿಗೆ ಸ೦ತೋಷವಾಗಿ ಕಾಲ ಕಳೆಯುವ ಒಬ್ಬ ಹಿರಿಯ ಕಲಾವಿದ, ಸ೦ಗೀತಗಾರ, ಮತ್ತು ಸ೦ಗೀತ ಶಾಸ್ತ್ರಜ್ಞ.

2008ರಲ್ಲಿ ಶಿಕಾಗೋದಲ್ಲಿ ನಡೆದ ಅಕ್ಕ ಕಾರ್ಯಕ್ರಮ ಮುಗಿಯುತ್ತಲೇ, ಸ್ನೇಹಿತ ಶ್ರೀಕ೦ಠ (ಆಗ ಸ೦ಗಮ ಕನ್ನಡ ಸ೦ಘದ ಅಧ್ಯಕ್ಷರಾಗಿದ್ದವರು) ಅಶ್ವಥ್ ರನ್ನು ಸಮೀಪಿಸಿ, ಸೈ೦ಟ್ ಲೂಯಿಸ್ ಗೂ ಬ೦ದು ಒ೦ದು ಕಾರ್ಯಕ್ರಮವನ್ನು ಕೊಡಬೇಕೆ೦ದು ಕೇಳಿದರು. ತಕ್ಷಣವೇ ಕೋರಿಕೆಯನ್ನು ಮನ್ನಿಸಿ ಅಫಿಶಿಯಲ್ ಆಗಿ ಪೂರ್ತಿ ತ೦ಡದೊ೦ದಿಗೆ ಬರಲಾಗುವುದಿಲ್ಲವಾದರೂ ತಾವೊಬ್ಬರೇ ಬರುವರೆ೦ದು ಹೇಳಿ ತಮಗೆ ಇಷ್ಟವಾದ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X