ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂ ಜರ್ಸಿ ಅಕ್ಕ ಸಮ್ಮೇಳನದ ಮುನ್ನಾ ನೋಟ

By * ಶಾಮ್
|
Google Oneindia Kannada News

Sheraton Edison Hotel
ಇಸವಿ 2010ರ ಸೆಪ್ಟೆಂಬರ್, ಶುಕ್ರವಾರ 2ರಿಂದ ಭಾನುವಾರ 5ರವರೆಗೆ ನಡೆಯುವ ಮೂರು ದಿವಸಗಳ ಆರನೇ 'ಅಕ್ಕ' ವಿಶ್ವ ಸಮ್ಮೇಳನಕ್ಕೆ ಪೂರ್ವಭಾವಿ ಸಿದ್ಧತೆಗಳು ಲಗುಬಗೆಯಿಂದ ಆರಂಭವಾಗಿವೆ. ಸಮ್ಮೇಳನದ ಮೊದಲ ಹೆಜ್ಜೆ ಊರಿನ ಆಯ್ಕೆ; ಅದು ಅಟ್ಲಾಂಟ ಕಡಲಿನ ಪೂರ್ವ ಕರಾವಳಿಯಲ್ಲಿರುವ 'ಅನಿವಾಸಿ ಭಾರತೀಯರ ರಾಜಧಾನಿ' ನ್ಯೂ ಜೆರ್ಸಿ. ಎರಡನೆ ಹೆಜ್ಜೆಯೆಂದರೆ ಸಮ್ಮೇಳನ ಏರ್ಪಡಿಸುವುದಕ್ಕೆ ತಕ್ಕುದಾದ, ಸಕಲ ಅನುಕೂಲಗಳಿರುವ ಸಭಾಂಗಣದ ಆಯ್ಕೆ; ನೋಡಿ : ನ್ಯೂ ಜೆರ್ಸಿಯ ಪ್ರಖ್ಯಾತ ಶೆರಟನ್ ಎಡಿಸನ್ ಹೋಟೆಲಿನ ರೇರಿಟನ್ ಸೆಂಟರ್.

ಸಮ್ಮೇಳನದ ಆಯೋಜನೆ ಅಕ್ಕ ಮೂಲ ಸಂಸ್ಥೆಯಿಂದ. ಅಕ್ಕ ಪದಾಧಿಕಾರಿಗಳ ಪಟ್ಟಿ ಹೀಗಿದೆ. ಆದರೆ, ಸಮ್ಮೇಳನವನ್ನು ವ್ಯವಸ್ಥೆ ಮಾಡುವ ಪ್ರಾಥಮಿಕ ಜವಾಬ್ದಾರಿ ಸ್ಥಳೀಯ ಕನ್ನಡ ಕೂಟ ಅಥವಾ ಕನ್ನಡ ಸಂಘದ ಹೆಗಲೇರುತ್ತದೆ. ಈ ಬಾರಿ ಈ ಹೊಣೆಹೊತ್ತ ಬಳಗದ ಹೆಸರು ನ್ಯೂ ಜೆರ್ಸಿ ರಾಜ್ಯದ ಕನ್ನಡ ಸಂಘ 'ಬೃಂದಾವನ'. ಈ ಕೂಟದಲ್ಲಿ ಪದಾಧಿಕಾರಿಗಳ ಆಯ್ಕೆ ಎರಡು ವರ್ಷಕ್ಕೊಮ್ಮೆ ಜರುಗುತ್ತದೆ. ಡಿಸೆಂಬರ್ 09ಕ್ಕೆ ಐದು ವರ್ಷ ಪೂರೈಸುತ್ತಿರುವ ಬೃಂದಾವನದ 2008-10 ನೇ ಸಾಲಿನ ಪದಾಧಿಕಾರಿಗಳ ನೋಟ್ ಪ್ಯಾಡ್ ನೋಡಿ.

ಸ್ಥಳೀಯ ಕನ್ನಡ ಸಂಘದ ಆಶ್ರಯದಲ್ಲಿ ಸಮ್ಮೇಳನ ವ್ಯವಸ್ಥೆಯಾದರೂ ಕೂಡ, ಬೃಹತ್ ಪ್ರಮಾಣದ ವಿಶ್ವ ಸಮ್ಮೇಳನ ಜವಾಬ್ದಾರಿ ನಿರ್ವಸುವುದಕ್ಕೆಂದೇ ವಿಶೇಷ ಸಮಿತಿಗಳನ್ನು ರಚಿಸಲಾಗುತ್ತದೆ. ಇದುವರೆಗೆ ಐದು ಸಮ್ಮೇಳನಗಳು ಜರುಗಿವೆ. ಆದರೆ ಈ ಬಾರಿಯ ವಿಶೇಷತೆಯೆಂದರೆ ಬೃಂದಾವನ ಸಂಘದ ಜತೆಗೆ ಅಕ್ಕಪಕ್ಕ ರಾಜ್ಯಗಳಾದ ನ್ಯೂಯಾರ್ಕ್, ಡೆಲವೇರ್, ಪೆನ್ಸಿಲ್‌ವೇನಿಯಾ ಹಾಗೂ ಕನೆಕ್ಟಿಕಟ್ ರಾಜ್ಯಗಳ ಕನ್ನಡ ಸಂಘಗಳ ಮಾನವ ಸಂಪನ್ಮೂಲ ಕಲೆತು ವಿಶಾಲ ಸಮ್ಮೇಳನ ಸಮಿತಿ ರಚನೆಯಾಗಿದೆ.

ಸುಮಾರು ಒಂದು ನೂರು ಸ್ವಯಂಸೇವಕರಿರುವ ಈ ಮಾತೃ ಸಮಿತಿಯಿಂದ ಆಯ್ದ ನಾನಾ ಉಪ ಸಮಿತಿಗಳು ಇರುತ್ತವೆ. ಈ ಸಲ ಒಟ್ಟು 33 ಸಮಿತಿಗಳನ್ನು ರಚಿಸಲಾಗಿದ್ದು ಒಂದೊಂದೂ ಸಮಿತಿಗಳಿಗೆ ನಿರ್ದಿಷ್ಟ ಜವಾಬ್ದಾರಿ ಇರುತ್ತದೆ. ಸಮಿತಿಯ ಹೆಸರು, ಸದಸ್ಯರು, ಜವಾಬ್ದಾರಿಯ ಕ್ಷೇತ್ರ ಮತ್ತು ಅವರವರ ದೂರವಾಣಿ ಸಂಖ್ಯೆಗಳು ಹಾಗೂ ಈ ಮೇಲ್ ವಿಳಾಸಗಳು ಕೋಷ್ಟಕದಲ್ಲಿ ಅಡಕವಾಗಿದೆ. ಉಪಯೋಗಿಸಿ. ಗಮನಾರ್ಹ ಸಂಗತಿಯೆಂದರೆ ಸಮಿತಿಯು ಯುವಕ ಯುವತಿಯರಿಂದ ತುಂಬಿ ತುಳುಕುತ್ತಿದೆ. ಪ್ರಸನ್ನವದನರಾಗಿರುವ ಸಗಟು ಸಮಿತಿಯ ಗ್ರೂಪ್ ಫೋಟೋ ಮೇಲೆ ಕಣ್ಣಾಡಿಸಿ.

ವಿಶಾಲ ಉತ್ತರ ಅಮೆರಿಕಾದಲ್ಲಿ ವಾಸಿಸುವ ಕನ್ನಡ ಕೂಟಗಳ ಮಾತೃ ಸಂಸ್ಥೆ ಅಕ್ಕನಿಗೆ ಎರಡು ವರ್ಷಗಳಿಗೊಮ್ಮೆ ಆಯ್ಕೆಯಾಗುವ ಪದಾಧಿಕಾರಿಗಳಲ್ಲದೆ, ಮೂಲಭೂತವಾಗಿ ಸಂಸ್ಥೆಗೆ ಮಾರ್ಗದರ್ಶನ ಮಾಡುವುದಕ್ಕೆ ಅಕ್ಕ ವಿಶ್ವಸ್ಥ ಮಂಡಳಿ ಇರುತ್ತದೆ. ಮಂಡಳಿಯಲ್ಲಿ 11 ಸದಸ್ಯರಿರುತ್ತಾರೆ. ವಿಶ್ವಸ್ಥ ಮಂಡಳಿಯ ಅಧ್ಯಕ್ಷರು ಹಾಗೂ ಸಮ್ಮೇಳನದ ಅಡ್ವೈಸರ್ ಅಮರ್ ನಾಥ ಗೌಡ. ಅವರೊಂದಿಗೆ ದಟ್ಸ್ ಕನ್ನಡ ಡಾಟ್ ಕಾಂ ಡಿಸೆಂಬರ್ 22ರ ಮಂಗಳವಾರ ನಡೆಸಿದ ಸಂದರ್ಶನದ ಆಯ್ದ ಭಾಗಗಳು ಹೀಗಿವೆ. ಓದಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X