ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಿಯರ ನಾಡಿನಲ್ಲಿ ಚಿನ್ನದಂಥ ಕನ್ನಡ

By Staff
|
Google Oneindia Kannada News

Kannada Rajyotsava,Hongkong
"ಕನ್ನಡದ ಕಂಪು, ಕನ್ನಡವೇ ಇಂಪು"ಎಂಬ ಕವಿ ವಾಣಿಯಂತೆ ಕನ್ನಡ ಭಾಷೆಯ ಶ್ರೀಮಂತಿಕೆ ಅಕ್ಷರಗಳಲ್ಲಿ ವರ್ಣಿಸಲಾದೀತೆ?ದೇಶ ಬಿಟ್ಟು ಪರದೇಶದಲ್ಲಿದ್ದರೂ ನಾಡು ನುಡಿಯ ಮೇಲಿನ ಪ್ರೇಮ ಸದಾ ಜಾಗ್ರತವಾಗಿರಬೇಕು. ಈ ನಿಟ್ಟಿನಲ್ಲಿ ಹಾಂಗ್ ಕಾಂಗ್ ನಲ್ಲಿದ್ದುಕೊಂಡು ಕನ್ನಡದ ಕಂಪನ್ನು ಪಸರಿಸುತ್ತಿರುವ ಕೆ.ಎಸ್.ಎಚ್.ಕೆ (ಕನ್ನಡ ಸಂಘ ಹಾಂಗ್ ಕಾಂಗ್) ಸಾಧನೆ ಎಲ್ಲರಿಗೂ ಅನುಕರಣೀಯ. ಕಳೆದ ನವೆಂಬರ್ 7 ರಂದು ಇಂಥಹ ಕನ್ನಡದ ಮೇಲಿನ ಪ್ರೇಮ ಹಾಂಗ್ ಕಾಂಗ್ ಕನ್ನಡಿಗರಲ್ಲಿ ಉಕ್ಕಿ ಹರಿದಿತ್ತು. ಹೌದು, ಕರ್ನಾಟಕ ರಾಜ್ಯೋತ್ಸವ ಚೀನೀಯರ ನಾಡಿನಲ್ಲಿ ಅಂದು ಕಂಗೊಳಿಸಿತ್ತು.

ಸಂಘದ ಅಧ್ಯಕ್ಷರಾದ ಸದಾಶಿವ ಹೆಗಡೆಯವರ ಸ್ವಾಗತ ಭಾಷಣದಿಂದ ಹಿಡಿದು ರಾಷ್ಟ್ರಗೀತೆಯವರೆಗೆ ಎಲ್ಲವೂ ಅಚ್ಚು ಕಟ್ಟಾಗಿತ್ತು. ಏನಿತ್ತು, ಎನಿಲ್ಲ?ಅನ್ನುವುದೇ ತಿಳಿಯಲಾರದಷ್ಟು ಮಟ್ಟಿಗೆ ಅಲ್ಲಿ ವೈವಿದ್ಯತೆ ಮೈದಾಳಿತ್ತು.ಕಾರ್ಯಕ್ರಮಕ್ಕೆ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದ ಭಾರತೀಯ ರಾಯಭಾರಿ ರಾಲ್ಟೆ ಮತ್ತು ಅವರ ಪತ್ನಿ, ಹಾಗೂ ಇನ್ನೋರ್ವ ಮುಖ್ಯ ಅಥಿತಿಗಳಾಗಿ ದೂರದ ಉತ್ತರ ಪ್ರದೇಶದ ವಾರಣಾಸಿಯ ಜಂಗಮವಾಡಿ ಮಠದ ಶಿವಾಚಾರ್ಯರಾದ ಶ್ರೀ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಕಾರ್ಯಕ್ರಮಕ್ಕೆ ಶುಭ ಕೋರಿದರು. ಅಷ್ಟೇ ಅಲ್ಲ, ವಿದೇಶಗಳಲ್ಲಿ ಕನ್ನಡ ಪ್ರೇಮ ಕಂಡು ಮೂಕ ವಿಸ್ಮಿತರಾದರು.

ಇದೇ ಸಂಧರ್ಭದಲ್ಲಿ ತಾಯ್ನಾಡಿನ ಅನಾಥ ಮಕ್ಕಳಿಗೆ ಸಹಾಯ ಮಾಡುವ ಉದ್ದೇಶದಿಂದ ಆರಂಭಿಸಲಾದ "ಸಮುದಾಯ ಸಹಾಯ ಯೋಜನೆ" ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳು ಉದ್ಘಾಟಿಸಿದರು. ಕೆ.ಎಸ್.ಎಚ್.ಕೆ ಕೇವಲ ಹೆಸರಿಗೆ ಸಂಘವಾಗದೆ ಅನಾಥರ, ಬಡವರಿಗೆ ಸಹಾಯ ನೀಡಲು ಸದಾ ಮಂಚೂಣಿಯಲ್ಲಿದ್ದು ಅನೇಕ ಕನ್ನಡ ಸಂಘಗಳಿಗೆ ಮಾದರಿಯಾಗಿದೆ.

ನಂತರ ಆರಂಭವಾಗಿದ್ದೇ ಸಾಂಸ್ಕ್ರತಿಕ ಕಾರ್ಯಕ್ರಮ. ಚಿಕ್ಕ ಮಕ್ಕಳು, ಮಕ್ಕಳ ತಾಯಂದಿರು, ಹುಡುಗರು, ಹಿರಿಯರು ಹೀಗೆ ಪ್ರತಿಯೊಬ್ಬರು ವೇದಿಕೆಯ ಮೇಲೆ ತಮ್ಮ ಪ್ರತಿಭಾ ಪ್ರದರ್ಶನ ನೀಡಿದರು. ಅದರಲ್ಲೂ ಮಕ್ಕಳ "ಧರಣಿ ಮಂಡಲ ಮಧ್ಯದೊಳಗೆ" ಸುಶ್ಮಾ ರವರ ನ್ರತ್ಯ, ಮಕ್ಕಳ ತಾಯಂದಿರ ನ್ರತ್ಯ, ಗಂಡಸರ ಜಾನಪದ ನ್ರತ್ಯ, ಭಾವಗೀತೆ ಹೀಗೆ ವೈವಿದ್ಯತೆಗಳ ಕಾರ್ಯಕ್ರಮ ಜನಮನ ಸೂರೆಗೊಂಡಿತು.

ಕಾರ್ಯಕ್ರಮದಲ್ಲಿ ಕವಿ ಕೆ ಎಸ್ ನರಸಿಂಹ ಸ್ವಾಮಿಯವರ ಬಗ್ಗೆ "ಕವಿ ಪರಿಚಯದಲ್ಲಿ" ತಿಳಿಸಲಾಯಿತು. ಇದೊಂದು ನೂತನ ಕಾರ್ಯಕ್ರಮವಾಗಿದ್ದು ಯುವ ಜನತೆಗೆ ಕನ್ನಡ ಕವಿಗಳ ಬಗೆಗೆ ಆಸಕ್ತಿ ಮೂಡಿಸುವ ಪ್ರಯತ್ನವೂ ಹೌದು. ಕೊನೆಯದಾಗಿ ಸಂಘದ ಕಾರ್ಯದರ್ಶಿಗಳಾದ ರೂಪಾ ಕಿರಣ ಅವರು ನೆರೆದ ನೂರಾರು ಕನ್ನಡಿಗರಿಗೆ ಧನ್ಯವಾದ ಸಮರ್ಪಿಸಿದರು. ಸುಮಾರು 4 ಘಂಟೆಗಳ ಕಾಲ ನಡೆದ ಕಾರ್ಯಕ್ರಮ ತಾವೆಲ್ಲರೂ ಕನ್ನಡ ನಾಡಿನಲ್ಲಿ ಇದ್ದೇವೆ ಎಂಬ ಭಾವನೆ ಮೂಡಿಸಿತು. ಕೆ ಎಸ್ ಎಚ್ ಕೆ ಕನ್ನಡ ದ ಬಗೆಗಿನ ಪ್ರೇಮ ನಿಜಕ್ಕೂ ಅಭಿನಂದನಾರ್ಹ. ವಿದೇಶದಲ್ಲಿದ್ದುಕೊಂಡು ದೇಶದ ಭಾಷೆಯನ್ನೇ ಮರೆಯುವ ಇಂದಿನ ಸಂದರ್ಭದಲ್ಲಿ ತಾಯ್ನಾಡಿನ ಭಾಷೆಯನ್ನು ಜೀವಂತವಾಗಿಡುವ ಇಂಥಹ ಕಾರ್ಯಕ್ರಮಗಳು ಅನಿವಾಸಿ ಕನವ್ನಡ ಸಮುದಾಯಕ್ಕೆ ಅನುಕರಣೀಯ.ಜೈ ಕನ್ನಡಾಂಬೆ, ಜೈ ಕರ್ನಾಟಕ ಮಾತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X