ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈನಲ್ಲಿ ಪ್ರಾಣೇಶ್, ಭಜಂತ್ರಿ ಹಾಸ್ಯೋತ್ಸವ

By Staff
|
Google Oneindia Kannada News

Gangavati Pranesh
ದುಬೈ, ಡಿ. 3 : ಉತ್ತರ ಕರ್ನಾಟಕದಲ್ಲಿ ಅತಿವೃಷ್ಟಿಯಿಂದಾದ ಅಪಾರ ಹಾನಿ ಮತ್ತು ಜನರ ಸಂಕಷ್ಟಗಳಿಗೆ ಕರ್ನಾಟಕದ ಜನತೆ ಮಾತ್ರವಲ್ಲ ಹೊರದೇಶದಲ್ಲಿರುವ ಕನ್ನಡಿಗರು ಕೂಡ ಸ್ಪಂದಿಸುತ್ತಿದ್ದಾರೆ. ಉತ್ತರ ಕರ್ನಾಟಕದ ಜನತೆ ಹಿಂದಿನಂತೆ ಸಾಮಾನ್ಯ ಜೀವನ ಸಾಗಿಸಲು ಎಷ್ಟು ಹಣದ ಹರಿವು ಬಂದರೂ ಕಡಿಮೆಯೆ. ಸರಕಾರಗಳು ಮತ್ತು ಜನರು ಸಂಗ್ರಹಿಸಿ ನೀಡಿದ ಹಣ ಊಟಕ್ಕೆ ಸಾಲಿದರೆ ಬಟ್ಟೆಗೆ ನಿಲುಕುತ್ತಿಲ್ಲ. ಇನ್ನು ಸೂರಂತೂ ದೂರದ ಮಾತಾಗಿ ಉಳಿದಿದೆ. ಈ ನಿಟ್ಟಿನಲ್ಲಿ ವಿದೇಶಿ ಕನ್ನಡಿಗರು ಕೂಡ ಹಣ ಸಂಗ್ರಹಿಸಿ ಸಂತ್ರಸ್ತರಿಗೆ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ.

ದುಬೈನಲ್ಲಿರುವ ಕನ್ನಡಿಗರು ಕೂಡ ಹಾಸ್ಯ ಕಾರ್ಯಕ್ರಮ 'ಹಾಸ್ಯೋತ್ಸವ' ನಡೆಸಿ, ಬಂದ ಹಣದಲ್ಲಿ ಖರ್ಚುವೆಚ್ಚಗಳನ್ನು ಸರಿದೂಗಿಸಿ, ಉಳಿದ ಹಣವನ್ನು ನೆರೆ ಸಂತ್ರಸ್ತರಿಗೆ ನೀಡಲು ನಿರ್ಧರಿಸಿದ್ದಾರೆ. ಈ ಹಣ ಮೈಸೂರು ಸಿಟಿಜನ್ಸ್ ಫೋರಂನ ಪ್ರಕೃತಿ ವಿಕೋಪ ನಿಧಿಗೆ ಜಮಾ ಆಗಲಿದೆ.

ಈ ಉದಾತ್ತ ಧ್ಯೇಯವನ್ನು ಬೆಂಬಲಿಸಲು ಮತ್ತು ಉದಾರವಾಗಿ ಹಣ ನೀಡಲು ಮುಂದಾಗಬೇಕು ಮತ್ತು ಕಾರ್ಯಕ್ರಮಕ್ಕೆ ಸ್ನೇಹಿತರು, ಬಂಧು ಬಾಂಧವರನ್ನು ಕರೆತರಬೇಕೆಂದು ಆಯೋಜಕರು ದುಬೈ ಕನ್ನಡಿಗರನ್ನು ಕೇಳಿಕೊಂಡಿದ್ದಾರೆ.

'ನಾವು ನಮ್ಮ ಕನ್ನಡ' ಆಯೋಜಿಸಿರುವ ಹಾಸ್ಯೋತ್ಸವಕ್ಕೆ ಕರ್ನಾಟಕದ ಖ್ಯಾತ ಹಾಸ್ಯ ಕಲಾಕಾರರಾದ ಗಂಗಾವತಿ ಪ್ರಾಣೇಶ್ ಮತ್ತು ರವಿ ಭಜಂತ್ರಿ ಅವರು ಆಗಮಿಸಲಿದ್ದಾರೆ. ಇತ್ತೀಚೆಗೆ ತಾನೆ ಪ್ರಾಣೇಶ್ ಅವರು ಸಿಂಗಪುರದಲ್ಲಿ ಕೂಡ ಹಾಸ್ಯದ ಸುನಾಮಿ ಹರಿಸಿ ಬಂದಿದ್ದರು.

ಕಾರ್ಯಕ್ರಮ ಇದೇ ಶುಕ್ರವಾರ, ಡಿಸೆಂಬರ್ 4ರಂದು ಜೆಎಸ್ಎಸ್ ಇಂಟರ್ನ್ಯಾಶನಲ್ ಸ್ಕೂಲ್ ಅಲ್ ಬರ್ಶಾ (ದಕ್ಷಿಣ), ದುಬೈನಲ್ಲಿ ಬೆಳಿಗ್ಗೆ 10 ಗಂಟೆಗೆ ಜರುಗಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X