ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದ ಅಕ್ಕ

|
Google Oneindia Kannada News

Basavaraju Shivanna
ಹದಿನಾರು ಸಾವಿರ ಕಿಲೋಮೀಟರ್ ದೂರದ ಅಮೇರಿಕದಲ್ಲಿದ್ದೂ ಕರ್ನಾಟಕದ ವಿದ್ಯಮಾನಗಳ ಬಗ್ಗೆ ಸ್ಪಂದಿಸುವ ಕನ್ನಡಿಗರ ಜಾಯಮಾನ ಹೊಸತೇನಲ್ಲ. ಯಾವೊಂದು ಅಧಿಕೃತ ಮೀಟಿಂಗುಗಳಿರಲಿ, ಅನಧಿಕೃತ ಭೇಟಿ ಇರಲಿ, ಅಥವಾ ಸ್ನೇಹಿತರ ನಡುವಿನ ಉಭಯ ಕುಶಲೋಪರಿಯಿರಲಿ ನಡುವೆ ಕರ್ನಾಟಕದಲ್ಲಿನ ಆಗು ಹೋಗುಗಳ ಮಾತು ಬಂದೇ ಬರುತ್ತದೆ. ದುರಾದೃಷ್ಟವಶಾತ್ ಈ ನಡುವೆ ಇತ್ತೀಚಿನ ಪ್ರವಾಹದ ವಿವರಗಳು, ಪ್ರವಾಹದಲ್ಲಿ ಬದುಕುಳಿದವರ ಬವಣೆಗಳು ಹಾಗೂ ಎಲ್ಲೆಲ್ಲಿಂದ ಏನೇನು ಸಹಾಯ ದೊರಕುತ್ತಿದೆ ಎನ್ನುವ ವಿವರಗಳು ಮಾತುಕಥೆಯ ಮುಖ್ಯ ವಿಷಯವಾಗಿಬಿಟ್ಟಿವೆ.

* ಸತೀಶ್ ಹೊಸನಗರ, ನ್ಯೂ ಜೆರ್ಸಿ

ಅಕ್ಕ ಸಮ್ಮೇಳನ-2010 ಕಾರ್ಯಕ್ರಮಗಳ ವಿವರಗಳ ಮೀಟಿಂಗ್ ಒಂದರಲ್ಲಿ ಕರ್ನಾಟಕದ ನೆರೆ ಸಂತ್ರಸ್ತರ ಪರಿಹಾರಕ್ಕೋಸ್ಕರ "ಅಕ್ಕ" ಸಂಸ್ಥೆಯ ಮೂಲಕ ನೆರೆ ಸಂತ್ರಸ್ತರಿಗೆ ಪರಿಹಾರ ಕಾರ್ಯಕ್ಕಾಗಿಯೇ ಒಂದು ನಿಧಿಯನ್ನು ಆರಂಭಿಸಲಾಗಿದ್ದು ಅದಕ್ಕೋಸ್ಕರವೇ ಒಂದು ಸಣ್ಣ ತಂಡವನ್ನು ನೇಮಿಸಲಾಗಿದೆಯೆಂದು ಗೊತ್ತಾಯಿತು. ಈ ವರ್ಷದ ಕೊನೆಯಲ್ಲಿ ಕನಿಷ್ಠ ನೂರು ಹೊಸ ಮನೆಗಳನ್ನು ಕಟ್ಟಿಕೊಡಬೇಕು ಎಂದು ಕಾರ್ಯಾಚರಣೆಯಲ್ಲಿ ತೊಡಗಿದ ಈ ವಿಶೇಷ ತಂಡದ ಅಧ್ಯಕ್ಷ ಬಸವರಾಜು ಶಿವಣ್ಣನವರು ತಿಳಿಸಿದ್ದಾರೆ. ಅಂತೆಯೇ, ನಿಮ್ಮೆಲ್ಲರಲ್ಲಿ ಈ ಕೆಳಗಿನ ಕಳಕಳಿಯ ಮನವಿಯನ್ನು ಮಾಡಿಕೊಂಡಿದ್ದಾರೆ:

ಅಕ್ಕ ಸ೦ಸ್ಥೆ ಚಾರಿಟಬಲ್ ಫೌ೦ಡೇಷನ್ ಅಧ್ಯಕ್ಷರಾದ ಬಸವರಾಜು ಶಿವಣ್ಣರ ಮನವಿ
ವಿಷಯ: ಕರ್ನಾಟಕದ ನೆರೆ ನಿಧಿ ಸ೦ಗ್ರಹಕ್ಕೆ ಮು೦ದಾದ ಅಮೇರಿಕದ ಅಕ್ಕ ಸ೦ಸ್ಥೆ

ಆತ್ಮೀಯರೇ,

ಕತ್ತಲು ಕಳೆದು ಬೆಳಕಿನ ಭರವಸೆ ಮೂಡಿಸುವ ದೀಪಾವಳಿ ದುರದೃಷ್ಟದ ವಾರ್ತೆಯನ್ನೇ ನೀಡಿದುದಕ್ಕೆ ನಾವೆಲ್ಲ ದುಃಖಿಸುತ್ತೇವೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಎಷ್ಟೋ ಜನ ವರುಣನ ಆರ್ಭಟದಿಂದ ನೆಲೆ ಕಳೆದುಕೊಂಡವರ ಬಗ್ಗೆ ನಾವು ಕಲೆತು ಚಿಂತಿಸಿ, ಕಾರ್ಯೋನ್ಮುಖರಾಗಬೇಕಾಗಿದೆ. ಇತ್ತೀಚಿನ ಭೀಕರ ಪ್ರವಾಹ ಲಕ್ಷಾಂತರ ಕುಟುಂಬದ ಮೇಲೆ ತನ್ನ ಕರಾಳ ಪರಿಣಾಮವನ್ನು ಬೀರಿದ್ದು ಲಕ್ಷಾಂತರ ಜನ ಕುಟುಂಬಗಳು ಬೀದಿಪಾಲಾಗಿರುವುದು ನೋವಿನ ವಿಷಯ. ಅವರ ನೋವು ನೀಗುವುದಕ್ಕೆ ನಾವೂ ಸಿದ್ಧರಾಗೋಣ.

ಪ್ರವಾಹದಿಂದ ಆದ ಹಾನಿ ಯಾವೊಂದು ಊಹೆಗೂ ಮೀರಿದ್ದು, ಲಕ್ಷಾಂತರ ಮನೆಗಳು ಸಾವಿರಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿಹೋಗಿ ಅನೇಕ ಸಂಸಾರಗಳು ಬೀದಿಗಿಳಿದಿವೆ. ಸಾರ್ವಜನಿಕ ಆಸ್ತಿಪಾಸ್ತಿ, ಮನೆಮಠಗಳ ದುರಸ್ತಿ, ಪುನರ್-ನಿರ್ಮಾಣ ಹಾಗೂ ನೊಂದವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ನೆರೆ ಸಂತ್ರಸ್ತರು ತಮ್ಮ ಜೀವನವನ್ನು ಪುನರಾರಂಭಿಸುವುದರಲ್ಲಿ ನಾವೆಲ್ಲ ಜೊತೆಗೂಡಿ ಶ್ರಮಿಸುವ ಅಗತ್ಯವಿದೆ.

ಈ ನಿಟ್ಟಿನಲ್ಲಿ ನೆರೆಸಂತ್ರಸ್ತರ ಸಹಾಯಕ್ಕೋಸ್ಕರವೇ "ಅಕ್ಕ" ಸಂಸ್ಥೆ AKKA FLOOD RELIEF FUND ಎಂಬ ಹೆಸರಿನಲ್ಲಿ ನಿಧಿ ಸಂಗ್ರಹಕ್ಕೆ ಮುಂದಾಗಿದೆ. ಮನೆ-ಮಠವನ್ನು ಕಳೆದುಕೊಂಡ ನೆರೆ ಸಂತ್ರಸ್ತರಿಗಾಗಿ ಈ ವರ್ಷ ಕನಿಷ್ಠ ಪಕ್ಷ ಒಂದು ನೂರು ಹೊಸ ಮನೆಗಳನ್ನು ಕಟ್ಟಿಕೊಡಲು ಈ ವಿಶೇಷ ತಂಡವು ಕರ್ನಾಟಕ ಸರ್ಕಾರ ಹಾಗೂ ಸರ್ಕಾರೇತರ (NGO) ಸಂಸ್ಥೆಗಳೊಡನೆ ಮಾತುಕಥೆಗಳಲ್ಲಿ ಮುಂದಾಗಿದ್ದು ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿಕೊಂಡಿದೆ. ಈ ಸಂದರ್ಭದಲ್ಲಿ ತಾವೆಲ್ಲರೂ ತಮ್ಮ ಕೈಲಾದಷ್ಟು ಧನ ಸಹಾಯ ಮಾಡಿ ಹಾಗೂ ಈ ಸದುದ್ದೇಶದ ವಿವರಗಳನ್ನು ತಮ್ಮ ಸ್ನೇಹಿತರೆಲ್ಲರಿಗೂ ತಿಳಿಸಿ ಈ ಕಾರ್ಯಕ್ರಮದಲ್ಲಿ ತಾವೂ ಭಾಗಿಯಾಗಿರೆಂದು ಕಳಕಳಿಯಿಂದ ಮನವಿ ಮಾಡುತ್ತೇವೆ.

ಧನ್ಯವಾದಗಳು,
ಬಸವರಾಜು ಶಿವಣ್ಣ
AKKA Charitable Foundation Chair

"ಅಕ್ಕ" ಚಾರಿಟೆಬಲ್ ಫೌಂಡೇಷನ್‌ನ ವಿವರಗಳು ಈ ಕೆಳಗಿವೆ:
ನಿಧಿ ಸಂಗ್ರಹದ ಬಗ್ಗೆ ವೆಬ್ ಸೈಟ್, www.akkaonline.org/floodrelief
501 (C) (3) Status Tax ID: 59-352-7607)

ಚೆಕ್ ಕಳಿಸುವ ವಿಳಾಸ:
AKKA FLOOD RELIEF FUND
228 Granville Circle,
Egg Harbor Township, NJ - 08234

ವ್ಯೆರ್ ಟ್ರಾನ್ಸ್‌ಫರ್ ಮತ್ತು ಡೈರೆಕ್ಟ್ ಡೆಪಾಸಿಟ್‌ಗಾಗಿ:
Account Name: AKKA Flood Relief Found
Bank: Bank of America
Routing Number: 021000322
Account Number: 483027083601

ಕ್ರೆಡಿಟ್ ಕಾರ್ಡ್ ಮೂಲಕ ಹಣ ಕಳಿಸುವುದಿದ್ದರೆ:
http://www.akkaonline.org/floodrelief/index.htm

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X